ಈ ಪುಟವನ್ನು ಪ್ರಕಟಿಸಲಾಗಿದೆ

63

ಆಹಾರವಿಲ್ಲದೆ ಹಸಿದಿರುವೆನು, ನಿದ್ರಿಸುತ್ತಿರುವ ಆ ಕರಡಿಯನ್ನು ಕಳಕ್ಕೆ ತಳ್ಳುವೆಯಾದರೆ ನೀನು ನನಗೆ ಅನ್ನದಾನಮಾಡಿದಂತಾಗುವುದು? ನೀವು ಹಾಗೆ ಮಾಡದಿದ್ದರೆ, ನಾನು ಹಸಿವಿನಿಂದ ಸಾಯುವನಲ್ಲದೇ ನೀನೂ ವಂಚಕವಾದಾಕರಡಿಯಿಂದ ಹತನಾಗುವೆ? ಆಕ್ಷುದ್ರಜಂತುವನ್ನು ನಂಬಬಹುದೆ? ಕರಡಿಯು ನಂಬಿಸಿ ಮೋಸಮಾಡುವ ದ್ರೋಹಿ. ಅದನ್ನು ಕೆಳಕ್ಕೆ ನುಕಿದೆಯಾದರೆ ನಾನು ಅದನ್ನೆತ್ತಿಕೊಂಡು ಹೋಗುವೆನು. ನೀನು ಕ್ಷೇಮವಾಗಿರಬಹುದು" ಎಂದು ಬಹುವಿಧವಾಗಿ ಹೇಳಿತು. ಆ ಬಾಲಕನು ತನ್ನ ಪೂರ್ವಕರ್ಮದಿಂದ ಪ್ರೇರಿತನಾಗಿ, ಹುಲಿ ಮಾತಿಗೊಡಂಬಟ್ಟು, ತನಗೆ ಪ್ರಾಣದಾನಮಾಡಿದ ಉದಾರಿಯನ್ನು ಶತ್ರುವಿನ ಕೈಗೆ ಬಿಟ್ಟುಕೊಡುವವನಾಗಿದ್ದನು. ಹಾ! ಕೃತಜ್ಞನೆ!! ನೀಚನೆ!!! ಉಪಕಾರ ಸ್ಮರಣೆಯಿಲ್ಲದಿರುವುದು ಮನುಷ್ಯ ಜಾತಿಗೆ ಸಾಮಾನ್ಯವಾಗಿರುವುದು. ಸೃಷ್ಟಿಯಲ್ಲಿನ ಎಲ್ಲಾ ಪ್ರಾಣಿಗಳೂ, ಸಸ್ಯಗಳೂ ಕೂಡ ಮನುಷ್ಯನಿಗೆ ಉಪಕಾರಮಾಡುತ್ತಿರುವುವು. ಅವನು ಅದಕ್ಕೆ ಪ್ರತಿಯಾಗಿ ಎಲ್ಲರಿಗೂ ಅಸಕಾರವನ್ನೆ ಎಸಗುವನು. ಈ ದುಷ್ಟಗುಣವು ಭೋಜಪುತ್ರನಾದ ನಿನ್ನಲ್ಲಿಯೂ ಇರಬಹುದೆ?

ದೈವಾಧೀನದಿಂದ ಕರಡಿಯು ಎಚ್ಚೆತ್ತುಕೊಂಡಿತು. ಎಚ್ಚೆತು, ಆ ಮಿತ್ರದ್ರೋಹಿಯ ಮೇಲೆ ಆಗ್ರಹಗೊಂಡು, ಅವನ ನಾಲಿಗೆಯನ್ನಿಚೆಗೆಳೆದು ಅದರಮೇಲೆ ಸಸೇಮಿರಾ, ಎಂಬಕ್ಷರಗಳನ್ನು ಬರೆದು, ತನ್ನಿಚ್ಚೆಯಿದ್ದಂತೆ ಹೋಯಿತು. ಹುಲಿಯೂ ಹೊರಟುಹೋಯಿತು. ರಾತ್ರಿಯೂ ಕಳೆಯಿತು. ಅರುಣೋದಯವಾದೊಡಯೆ, ರಾಜಭಟರು ರಾಜಕುಮಾರನನ್ನು ಹುಡುಕಹೊರಟರು. ಮಧ್ಯಾಹ್ನದ ಹೊತ್ತಿಗೆ ಅವರು ಭೋಜಪುತ್ರನಿದ್ದೆಡೆಗೆ ಬಂದರು. ಅವನು ಏನೂ ಮಾತನಾಡಲಾರದವನಾಗಿದ್ದ