66
ನು, ಅವರೇನು ಕೇಳಿದರೂ "ಸಸೇಮಿರಾ " ಎಂದೇ ಪ್ರತ್ಯುತ್ತರ ಕೊಡುವನು, ಅವರು ಅವನ ವಿಷಯವನ್ನು ತಿಳಿದುಕೊಳ್ಳ ಬೇಕೆಂದು ಪರಿಪರಿಯಾಗಿ ಪ್ರಯತ್ನ ಪಟ್ಟರು.ಏನೂ ಸಾರ್ಥಕವಾಗಲಿಲ್ಲ, ಅವರು ಮಹತ್ವವ್ಯಸನದಿಂದಾಗಿ ಕೂಡಿದವರಾಗಿ ಆತನ ನ್ನು ಕರೆದುಕೊಂಡು ಭೋಜನ ಬಳಿಗೆ ಹೋದರು. ಭೋಜನ ಶೋಕಕ್ಕೆ ಪಾರವೇ ಇಲ್ಲ ಪ್ರಿಯಪುತ್ರನ ಇದ್ದಕ್ಕಿದ್ದಂತೆ ಮೂಕನಾಗಲು ಕಾರಣವೇನು? ಅವನ "ಸಸೇಮಿರಾ" ಎಂಬ ವಚನಕ್ಕೆ ಅರ್ಥವೇನು? ಅವನ ನಾಲಿಗೆಯಲ್ಲಿ ಅದನ್ನು ಕೆತ್ತಿದವರಾರು: ದೇವತೆಯೆ? ಮನುಷ್ಯನೇ? ಇತರ ಜಂತುಗಳೆ? ಅವರಿಗೆ ತಕ್ಕ ಶಿಕ್ಷೆಯನ್ನು ಹೇಗೆ ಮಾಡಬಹುದು? ಅವನನ್ನು ಹೇಗೆ ಮೊದಲಿನಂತೆ ವಾಚಾಳುವನ್ನಾಗಿ ಮಾಡಬಹುದು? ಮಹಾರಾಜನಿಗೆ ಏನೂ ತೊರಗೆ ಹೋಯಿತು, ಆತನ ಪ್ರಭು ಶಕ್ತಿಯು ಈ ವಿಷಯದಲ್ಲಿ ನಿಪ್ಪ್ರ ಯೋಜನ. ಆತನು ಚಿಂತಾಗ್ನಿಯಿಂದ ಬೆಂದು, ಘೋರವಾಗಿ ಪ್ರಲಾಪಿಸುತ್ತಿರಲು, ಆತನ ಮಂತ್ರಿಯು ಆತನನ್ನು ಬಹು ವಿಧವಾಗಿ ಸಮಾಧಾನಗೊಳಿಸಿ, ಭೋಜಪುತ್ರನಿಗೆ ವಾಕ್ಪಟುತ್ಯವನ್ನುಂಟುಮಾಡುವವರಿಗೆ ಅಪರಿ ಮಿತವಾದ ಬಹುಮಾನವನ್ನೀಯುವದಾಗಿ ಡಂಗುರವನ್ನು ಹೊಯಿಸಿದನು, ದೇಶದೇಶದಿಂದಲೂ ವೈದ್ಯರು ಮಂತ್ರ ತಂತ್ರಯಂತ್ರ ಚಿಕಿತ್ಸೆಗಳಲ್ಲಿ ನಿಪುಣರಾದವರ ಧಾರಾನಗರಕ್ಕೆ ಬಂದು ರಾಜಪು ಇನನ್ನ ನೋಡಿ ಆತನಿಗೆ ಬಂದವ್ಯಾಧಿಯನ್ನು ಗುಣಪಡಿಸಲಾರದೆ ಹಿಂದಿರುಗಿದರು ಭೋಜನ ದುಃಖವು ವಿಪರಿತವಾಯಿತು. ಕಡೆಗೆ ಮಂತ್ರಿಯು ಕಾಳಿದಾಸನೊಬ್ಬನೇ "ಸಸೇಮಿರಾ" ಮಂತ್ರದರ್ಧವನ್ನು ಬಲ್ಲನಿಂದು ತಿಳಿದು, ರಾಜನಬಳಿಗೆ ಹೋಗಿ "ಮಹಾಸ್ವಾಮಿ! ಮಲೆಯಾಳ ದೇಶದಿಂದ ಒಬ್ಬಾನೊಬ್ಬ ಮಂತ್ರಿಗಿತ್ತಿಯು ಬಂದಿರುವಳು, ಆಕೆಯು ಪುರುಷರ ಮುಖವನ್ನು