ಈ ಪುಟವನ್ನು ಪ್ರಕಟಿಸಲಾಗಿದೆ

68

ಭೋಜಪುತ್ರನಿಗೆ ಸ್ವಲ್ಪ ಮಟ್ಟಿಗೆ ಜ್ಞಾನೋದಯವಾಯಿತು. ಅವನು ತನ್ನ ದುಷ್ಟಕೃತ್ಯಕ್ಕಾಗಿ ಆಗಿ ಪಶ್ಚಾತ್ತಾಪ ಪಡಲಾರಂಭಿಸಿದನು. ಈಗ"ಸ,, ಕಾರವನ್ನು ಬಿಟ್ಟ "ಸೇಮಿರಾ,, ಎಂದು ಮಾತ್ರ ಕೂಗುತ್ತಿದ್ದನು. ತೆರೆಯೊಳಗಿನ ಅಪರಿಚಿತವಾಣಿಯು,ಸೇ. ಎಂಬಕ್ಷರವನ್ನು ಮೊದಲುಮಾಡಿ,

ಸೇತುಂ ದೃಷ್ಟ ಸಮುದ್ರಸ್ಯ ಗಂಗಾಸಾಗರಸಂಗಮಂ ।
ಬ್ರಹ್ಮಹರಾಸ್ಪಿ ಮುಖ್ಯೆತವಿ ಶದೋಹೋನಮಚ್ಯತೇ ॥

[ರಾಮಸೇತುವಿಗೂ ಗಂಗಾನಮುದ್ರಗಳ ಸಂಗಮಸ್ಥಾನಕ್ಕೂ ಯಾತ್ರೆಹಗುವುದರಿಂದ ಬ್ರಹ್ಮ ಹತ್ಯಯ ದೋಷವನ್ನು ಕಳೆ ದುಕ್ಕೊಳ್ಳಬಹುದು. ಮಿತ್ರದ್ರೋಹಿಯ ಪಾಪವು ಮಾತ್ರ ಏನು ಮಾಡಿದರೂ ಹೋಗುವುದಿಲ್ಲ. ] ಎಂದು ನುಡಿದಳು.

ಈಗ "ಮಿರಾ, ಎಂಬುದುಮಾತ್ರವೇ ಭೋಜಪುತ್ರನ ನಾಲಿಗೆಯಲ್ಲಿ ನೆಲಸಿತ್ತು. ಆದುದರಿಂದ,ಮಿ'ಎಂಬಕ್ಷರವು ಆದಿಯಲ್ಲುಳ್ಳ

ಮಿತ್ರ ದ್ರೋಹೀ ಕೃತಘ್ನಶ್ಚ ಯಸ್ತು ವಿಶ್ವಾಸಘಾತುಕಃ ।
ತ್ರಯಸ್ತೇ ನರ ಕಂ ಯಾಂತಿ ಯಾವಚ್ಚಂದ್ರ ದಿವಾಕರೌ॥

[ಸ್ನೇಹಿತನಿಗೆ ವಂಚನೆ ಮಾಡಿದವನು, ಉಪಕಾರಮರೆತವನು, ನಂಬಿದವರಿಗೆ ಮೋಸಮಾಡಿದವನು. ಈ ಮೂರುಮಂದಿಯೂ ಸೂರ್ಯ ಚಂದ್ರರಿರುವವರೆಗೂ ನರಕದಲ್ಲಿ ಬಿದ್ದಿರುವರು. ]

ಎಂಬ ಶೋಕವು ನುಡಿಯಲ್ಪಟ್ಟಿತು, ಈಗ "ರಾ,,ಕಾರವು ಮಾತ್ರವೇ ರಾಜಪ್ರತ್ರನನ್ನು ಬಾಧಿಸತಿತ್ತು . ಸಭಿಕರೆಲ್ಲರೂ ಇದನ್ನು ನೋಡಿ ವಿಸ್ಮತರಾಗಿ ಮೂಗಿನಮೇಲೆ ಬೆರಳಿಟ್ಟುಕ್ಕೊಂಡು, ಚಿತ್ರದಲ್ಲಿನ ಪ್ರತಿಮೆಗಳಂತೆ ಸ್ತಬ್ದರಾಗಿ, ಬುದ್ದಿ ವ್ಯಾಪಾರವೇ ಇಲ್ಲದವರಾಗಿದರು. ತೆರೆಯೊಳಗಿನಿಂದ ಉಳಿದಿದ್ದ "ರಾ" ಕಾರವೂ ಉಚ್ಚಾರಣೆಯಾಗಿ, ಈ ರೀತಿಕೇಳಬಂದಿತು.