ಈ ಪುಟವನ್ನು ಪ್ರಕಟಿಸಲಾಗಿದೆ

67

ನೋಡುವುದಿಲ್ಲವಂತೆ. ಆಕೆಯು ಬಲು ಸಮರ್ಥವಂತಳು. ಆಕೆಯಿಂದ ತಮ್ಮ ಪುತ್ರನಿಗೆ ಉಂಟಾಗಿರುವ ಅನಿಷ್ಟ್ಯವು ನಿವಾರಣೆಯಾಗಬಲ್ಲುದೆಂದು ನನ್ನ ನಂಬಿಕೆ. ಅಪ್ಪಣೆಯಂತೆ ನಡೆಯುವೆನು" ಎಂದು ಹೇಳಿದನು. ಭೋಜನು ಆಗಬಹುದೆಂದನು. ಕೂಡಲೆ ಅರಮನೆಯ ಒಂದು ಭಾಗದಲ್ಲಿ ಒಂದು ತೆರೆಯು ಕಟ್ಟಲ್ಪಟ್ಟಿತು. ಕಾಳಿದಾಸನು ಗೂಢವಾಗಿ ಕರೆತರಲ್ಪಟ್ಟು ಆ ತೆರೆಯ ಹಿಂದುಗಡೆಯಲ್ಲಿ ಕೂಡಿಸಲ್ಪಟ್ಟನು. ಭೋಜನೂ, ಆತನ ಪುತ್ರನೂ, ಮಂತ್ರಿಯೂ, ಸಾಮಾಜಿಕರೂ ತೆರೆಯ ಮುಂದುಗಡೆ ಕೂತರು.

ಎಲ್ಲರೂ ಕುತೂಹಲ ಯುಕ್ತರಾಗಿದ್ದರು. "ಸಸೇಮಿರಾ" ಮಂತ್ರದ ರಹಸ್ಯರ್ಧವು ಹೇಗೆ ಬಯಲಿಗೆ ಬೀಳುವುದೊ ನೋಡಬೇಕೆಂದು ಸಭಿಕರೆಲ್ಲರೂ ಎವೆಯಿಕ್ಕದೆ ತೆರೆಯಕಡೆಯೇ ನೋಡುತ್ತಿದ್ದರು. ಒಳಗಿನ ಅಪರಿಚಿತವ್ಯಕ್ತಿಯು ಮಾತನಾಡಲಾರಂಭಿಸಿತು. "ಎಲೈ, ರಾಜಕುಮಾರನೆ! ನಿನಗೆ ಈ ಪೀಡೆಯು ಹೇಗೆ ಸಂಭವಿಸಿತು?" ಎಂಬ ಆಕೆಯ ಪ್ರಶ್ನೆಗೆ ಪ್ರತಿಯಾಗಿ, ಭೋಜಪುತ್ರನು ಯಥಾಪ್ರಕಾರ "ಸಸೇಮಿರಾ,, ಎಂದೇ ಉತ್ತರ ಕೊಟ್ಟನು. ಗುಪ್ತಳಾದ ಮಾಂತ್ರಿಕಳು ಕ್ಷಣಮಾತ್ರ ಸುಮ್ಮನಿದ್ದು, “ಸಸೇಮಿರಾ,, ಮಂತ್ರದ ಪ್ರಥಮಾಕ್ಷರವಾದ 'ಸ,ಕಾರದಿಂದ ಪರಂಭವಾಗುವ

ಸಧ್ಬಾವಂ ಪ್ರತಿವನ್ನಾನಾಂ ವಂಚನೇ ಕಿಂ ವಿದಗ್ನತಾ
ಅಂಗಮಾರುಹ್ಯ ಸುಸಾನಾಂ ಹನನೇ ಕಿನ್ನು ಬಪೌರುಷಂ

[ಸ್ನೇಹಭಾವದಿಂದಿರುವವರಿಗೆ ವಂಚನೆಮಾಡುವದರಲ್ಲಿ ಬುದ್ಧಿ ವಂತಿಕೆಯೇನು? ತೊಡೆಯ ಮೇಲೆ ಮಲಗಿ ನಿದ್ರಿಸುತ್ತಿರುವವರನ್ನು ಕೊಲ್ಲುವುದರಲ್ಲಿ ಪೌರುಷವೇನು?] ಎಂಬ ಶ್ಲೋಕವನ್ನು ಹೇಳಿದಳು.