ಈ ಪುಟವನ್ನು ಪ್ರಕಟಿಸಲಾಗಿದೆ

xviii

“ಸತ್ತೇನು ಗುಬ್ಬಿ?" ವೀರಗಲ್ಲು, ಹಳೆಮರ, ಕಲ್ಲಿನ ಡಿಗ್ಗೆ ಮೊದಲಾದವುಗಳ ಹೆಸರಿನ ಹಿಂದೆ ಹರಡಿಕೊಂಡ ಶುದ್ದ ಐತಿಹಾಸಿಕ ಕಥೆಗಳು ಇನ್ನೆಲ್ಲಿಯೂ ಸಿಗಲಾರವೆನ್ನುವಂತಿವೆ.

“ಗರತಿ ಸಂಗವ್ವ” “ಮಲವಯ್ಯಶೆಟ್ಟಿ" ಕಥೆಗಳು ಐತಿಹಾಸಿಕವನಿಸುವಂತಿವೆ. ಅವು ಹಾಡುಗಳಾಗಿಯೂ ಕೇಳಸಿಗುತ್ತವೆ. ಅವು ತುಂಬ ಮರ್ಮಸ್ಪರ್ಶಿಯಾಗಿವೆ. ಶ್ರೀ ಶಿವರಾಮ ಕಾರಂತರ ಮೊದಲ ಹಂತದ ಕಾದಂಬರಿಯೊಂದು ಅವರ “ವಸಂತ ಮಾಸಿಕದಲ್ಲಿ ಪ್ರಕಟವಾಗಿದೆ. ಅದರ ವಸ್ತು “ಮಲಮಯ್ಯಶೆಟ್ಟಿ'ಯ ಕಥೆಯನ್ನೇ ಹೋಲುತ್ತದೆ.

“ಮೂರು ಆಕಳುಕರುಗಳು" “ಶಾಲಿನ ಚಿಂತೆ” “ಸೊಸೆಗೇನು ಅಧಿಕಾರ" ಇಂಥ ಕಥೆಗಳು ನಮ್ಮವರ ಹೃದಯದ ಕೆಚ್ಚು ಎಂಥದೆಂಬುವದನ್ನು ತೋರಿಸುತ್ತವೆ. ನಮ್ಮವರ ನ್ಯಾಯ ನಿಷ್ಠುರತೆ ಆತ್ಮಾಭಿಮಾನಗಳನ್ನು ನಿಚ್ಚಳವಾಗಿ ಕೊರೆದು ತೋರಿಸುವ “ಗರತಿ ಸಂಗವ್ವ"ಗಳಂಥ ಕಥೆಗಳು ಈ ಸಂಗ್ರಹದಲ್ಲಿ ಇನ್ನೂ ಇವೆ. ಸನಾತನ ಸತ್ಯವನ್ನು ಪ್ರತಿಪಾದಿಸುವ “ಕಾಳಿನ ಮೇಲಿನ ಹೆಸರು", “ದೇವರು ಕೊಟ್ಟರೇನು ಕಡಿಮೆ" ಇಂಥ ಕಥೆಗಳಿಗೇನು ನಮ್ಮಲ್ಲಿ ಬರಗಾಲವಿಲ್ಲ. ಸಮಸ್ಯೆಯನ್ನು ಸಮಸ್ಯೆಯಾಗಿಯೇ ಉಳಿಸುವ “ಯಾರಿಗೆ ಕೊಡಬೇಕು ಕನ್ಯೆ", ಸಮಸ್ಯೆಯನ್ನು ಬಿಡಿಸಿತೋರಿಸುವ “ತಮ್ಮಕ್ಕು-ಅಕ್ಕಲೆ” “ನಾಲ್ಕು ಪ್ರಶ್ನೆಗಳಿಗೆ ಉತ್ತರ"; ಸಮಸ್ಯೆಯಲ್ಲಿಯೇ ಅದರ ಉತ್ತರವನ್ನು ಮರೆಮಾಡುವ “ಹುರಮುಂಜಗೇಡಿ", “ರುಚಿಗಾರ-ಸವಿಗಾರ". ಅವು ಯಾವ ವಿಭಾಗದಲ್ಲಿ ಸೇರ್ಪಡೆಗೊಂಡರೂ ಹಾಸ್ಯವಿನೋದಗಳನ್ನು ಉದ್ದೇಶವಿರಿಸಿಕೊಂಡ “ಜಾತ್ರೆಯ ಗದ್ದಲ” “ಉದ್ದನ್ನವರ ಮುಂದೆ ಕೀರ್ತನ", “ರಾತ್ರಿ ರಾಜ", ಬುದ್ದಿಗೆ ಪ್ರಚೋದನೆ ಕೊಡಬಲ್ಲ “ಹಗಮಲ್ಲಿ ದಿಗಮಲ್ಲಿ”, “ಅಳಿಯನ ಅರ್ಹತೆ", ಉಪನಿಷತ್ ಕಥೆಗಳನ್ನು ನೆನಪಿಗೆ ತರಬಹುದಾದ “ಶಿವಪಾರ್ವತಿಯರ ಸೋಲು”, “ಉತ್ತರೀ ಮಳೆ", ದೈವದಾಟದ ವೈಚಿತ್ರ್ಯವನ್ನು ಮನಗಾಣಿಸಿಕೊಡುವ “ಅತ್ತೆಯ ಗೊಂಬೆ”, “ಆಳಬೇಕೆಂದರೆ"; ಈ ಬಗೆಯಾಗಿ ವೈವಿಧ್ಯಗಳನ್ನು ಸ್ಥೂಲವಾಗಿ ಗುರುತಿಸಬಹುದಾಗಿದೆ.

ಅಕಬರ-ಬೀರಬಲನ್ನು ಆರೋಪಿಸಿ ಅವಷ್ಟೋ ಕಥೆಗಳು ಹೇಳಲ್ಪಡುತ್ತವೆ. ಅವೆಲ್ಲ ಬುದ್ದಿವಂತಿಕೆ ಹಾಗೂ ಜಾಣ್ಣೆಯನ್ನು ಒಳಗೊಂಡಂತೆ ವಿನೋದಾತ್ತಕವೂ ಆಗಿವೆ. ಅವನ್ನಿಲ್ಲಿ ಸಂಗ್ರಹಿಸುವುದನ್ನು ಬೇಕೆಂದೇ ಬಿಟ್ಟಿದ್ದೇವೆ.

ಇಲ್ಲಿ ಸಂಗ್ರಹಿತವಾದ ೭೮ ಕಥೆಗಳಲ್ಲಿ ಮುಂಬಯಿ ಕರ್ನಾಟಕದ ಕಥೆಗಳು ಹೆಚ್ಚು ಪ್ರಮಾಣದಲ್ಲಿ ಸೇರ್ಪಡೆಗೊಂಡಿವೆ. ಹೈದ್ರಾಬಾದ ಕರ್ನಾಟಕದ ಕಥೆಗಳೂ ಇದರಲ್ಲಿ ಗಿರ್ಧದಷ್ಟಿವೆ. “ಬಿಂಬಾಲಿಯ ಅದೃಷ್ಟ”, “ಪಾಪಾತ್ಮ ರಾಜ" ಕಥೆಗಳು ಡಾಕ್ಟರ್ ಹೆಗಡೆ ಅವರಿಂದ ಸಂಗ್ರಹಿತವಾಗಿ ಪ್ರಕಟಗೊಂಡಿದ್ದರೂ ನಾವೇ ನೇರವಾಗಿ