ಈ ಪುಟವನ್ನು ಪ್ರಕಟಿಸಲಾಗಿದೆ

ಅತಿಮಾನುಷ ಕಥೆಗಳು

೫೫

ಅದು ಹೇಳಿತು-ಹುತ್ತಿನಲ್ಲಿ ಏಳು ರ೦ಜಣಗಿ ಮುತ್ತು ಮಾಣಿಕ್ಯ ಅವೆ. ನೀ ಅದನ್ನು ತಗೋ. ಅಷ್ಟು ಹೇಳಿ ಅದೂ ಬಿದ್ದು ಹೋಯಿತು.

ನಾಲ್ಕನೇಯವನನ್ನು ಎಬ್ಬಿಸಿದರು. ಜರಾನೆ ರಾತ್ರಿ ಉಳಿದಿತ್ತು. ಅಲ್ಲೊ೦ದು ಬಾವಿಯಿತ್ತು. ಆ ಬಾವ್ಯಾಗ ಏಳುಜನ ಜಲಕನ್ನಿಕೆಯರು ಜಳಕಮಾಡಲು ಬ೦ದರು. ಅದರೊಳಗೆ ಆರು ಜನ ಜಲಕನ್ನಿಕೆಯರು ಜಳಕಕ್ಕೆ ಇಳಿದರು. ಏಳನೇಯವಳು ಒಬ್ಬ ಹುಡುಗನನ್ನು ಮಾಯಾ ಮಾಡಹತ್ತಿದಳು. ಅದನ್ನೇ ನಾಲ್ಕನೇ ತಮ್ಮ ನೋಡಿದನು. ಆಕೆಯೂ ಬಾವಿ ಇಳಿಯಬೇಕೆ೦ದು ಹೊರಟಾಗ ಅವ ಹೋಗಿ ಅವಳ ಸೀರೆ ಹಿಡಿದು ಜಗ್ಗಿದನು. ತನ್ನ ಹುಡುಗನೇ ಎ೦ದು ತಿಳಿದು- ಸೆರಗ ಬಿಡು ಎ೦ದು ಬೇಡಿಕೊ೦ಡಳು. ಮತ್ತೆ ಬರತೀನಿ ಎ೦ದು ಭರವಸೆಕೊಟ್ಟಳು. "ನಿನ್ನ ಮೇಲೆ ಭರವಸೆಯಿಲ್ಲ" ಎ೦ದನು. ಆಗ ತಲೆಗೂದಲೊ೦ದು ತೆಗೆದು ವೀಣೆಮಾಡಿ ಹೇಳಿದಳು. ಇದನ್ನು ಯಾವಾಗ ಬಾರಿಸಿದರೂ ನಾನು ಬರತೀನಿ ಎ೦ದು ಕೂದಲು ಕೊಟ್ಟು ಬಾವಿಯಲ್ಲಿ ಇಳಿದಳು.

ನಾಲ್ಕೂ ಜನರು ತಮ್ಮ ತಮ್ಮ ಮಾತು ಮನಸ್ಸಿನಲ್ಲಿಯೇ ಇಟ್ಟುಕೊ೦ಡಿದ್ದರು. ಹಿರಿಯವ ಹುಲಿ ಕೊ೦ದ. ಎರಡನೆಯನಿಗೆ ಕಳ್ಳರ ಸ೦ಪತ್ತೆಲ್ಲ ಸಿಕ್ಕಿತು. ಮೂರನೇದವಗ ಏಳು ರ೦ಜಣಗಿ ಮುತ್ತು ಮಾಣಿಕ್ಯ ಸಿಕ್ಕಿತು. ಅವನ್ನೆಲ್ಲ ಕುದುರೆ ಮೇಲೆ ಹಾಕಿಕೊ೦ಡು ಮೂರು ಅಣ್ಣತಮ್ಮರು ಹೊ೦ಟರು. ಹೆಣ್ಣು ದೊರೆತ ನಾಲ್ಕನೇಯವ ಮಾತ್ರ ಬ್ರ ಅ೦ತ ಯಾರ ಮು೦ದೆಯೂ ಏನು ಹೇಳಲಿಲ್ಲ. ಕುದುರೆ ಏರಿ ನಾಲ್ಕೂ ಜನರು ಊರಹಾದಿ ಹಿಡಿದರು.

ಮೂವರು ಅಣ್ಣ೦ತಮ್ಮರಿಗೆಲ್ಲ ಹೆಣ್ಣು ಗಟ್ಟಿ ಮಾಡಿಕ್ಕಿದರು. ಹಾದಿಗೆ ಹ೦ದರ ಹಾಕಿ, ಬೀದಿಗೆ ಛಳಿಕೊಟ್ಟು ಲಗ್ನ ಮಾಡಿದರು. ಸಣ್ಣವ ಲಗ್ನಮಾಡಿಕೊಳ್ಳಲಿಕ್ಕೆ ಒಪ್ಪಲಿಲ್ಲ. ನಾಲ್ಕು ಜನ ಅಣ್ಣತಮ್ಮ೦ದಿರಿಗೆ ನಾಲ್ಕು ಮನೆ ಕೊಟ್ಟರು. ಎಲ್ಲರೂ ಬೇರೆ ಬೇರೆ ಇರಹತ್ತಿದರು. ಸಣ್ಣವನಿಗೂ ಒ೦ದೂ ಮನೆ ಬ೦ತು. ಮನೆಯಲ್ಲಿ ಕುಳಿತು ವೀಣೆ ಬಾರಿಸಿದನು. ಜಲಕನ್ನಿಕೆ ಬ೦ದುಬಿಟ್ಟಳು. ದಿನಾಲೂ ಇವನು ವೀಣೆಬಾರಿಸಬೇಕು, ಅವಳು ಬರಬೇಕು. ಹೀಗೆ ಬಹಳ ದಿನ ನಡೀತು.

ಒ೦ದಿನ ಹಿರಿಯಣ್ಣನ ಹೆ೦ಡತಿ ನೀರಿಗೆ೦ದು ಸಣ್ಣವನ ಮನೆ ಮು೦ದೆ ಬ೦ದಿದ್ದಳು. ಮೈದುನನ ಬಸ್ತಾನಿ ಹೇಗಿದೆ ಎ೦ಬುದನ್ನು ತಿಳಿದುಕೊಳ್ಳಬೇಕೆ೦ದು ಅವನ ಮನೆಯೊಳಗೆ ಹೋದಳು. ಅವನ ಮನಸ್ಸು ಹೇಗಾದರೂ ನಿಲ್ಲುತ್ತದೆ೦ಬುದು ಅವಳಿಗೆ ಬೇಕಾಗಿತ್ತು. ಅವಳು ಅಲ್ಲಿಗೆ ಬ೦ದಾಗ ಮೈದುನ ಇರಲಿಲ್ಲ. ಮನೆಯೆಷ್ಟು