ಈ ಪುಟವನ್ನು ಪ್ರಕಟಿಸಲಾಗಿದೆ

ಉಮರ್ ಖಯ್ಯಾಮ್

"ಉಮರ್ ಖಯ್ಯಾಮ್” ಕವಿಯು ಸರಿಯಾ ದೇಶದವನು. ಆತನ ಜನ್ಮ ಸ್ಥಲವು ಮೊರಾಸಾನ್ ಪ್ರಾಂತದ ನೀಷಾಪೂರ್ ಎಂಬ ಪಟ್ಟಣ.

ಆತನ ಜೀವಿತ ಕಾಲವು ಸುಮಾರು ಕ್ರಿಸ್ತ ಶಕ ೧೦೧೫- ೧೦೨೦ರೊಳಗಿನ ಒಂದು ವರ್ಷದಿಂದ ೧೧೨೩ರ ವರೆಗೆಂದು ಗೊತ್ತಾಗಿದೆ.

ಉಮರಸ ಪೂರಾ ಹೆಸರು- "ಘಿಯಾತ್ ಉದ್ ದೀನ, ಅಬುಲ್ ಫಾತ್ ಉಮರ್ ಇಬನ್ ಇಬ್ರಾಹಿಂ ಅಲ್ ಖಯ್ಯಾಮಿ” -ಎಂದು. "ಖಯ್ಯಾಮ್" ಎಂಬುದು ಮನೆತನದ ಹೆಸರು. ಆ ಮಾತಿಗೆ ಗುಡಾರ ಮಾಡುವವನು ಎಂದರ್ಥವಂತೆ.

ಆತನ ಜೀವಿತ ಚರಿತ್ರೆಯ ಮುಖ್ಯ ವಿವರಗಳಾವುವೂ ನಿಷ್ಕರ್ಷೆಯಾಗಿ ತಿಳಿದುಬಂದಿಲ್ಲ. ಆತನನ್ನು ಕುರಿತ ಕಥೆಗಳು ಮಾತ್ರ ಕೆಲವು ಪ್ರಚಾರದಲ್ಲಿವೆ,

ಉಮರನ ವಿದ್ಯಾ ಗುರುವು ಇಮಾಂ ಮೊವಾಫಕ್ ಎಂಬಾತನು. ಈತನಿಗೆ ನಿಜ಼ಾಮ್-ಉಲ್-ಮುಲ್ಕ್ ಮತ್ತು ಹಸನ್-ಇಬನ್-ಸಬ್ಬಾ ಎಂಬ ಇನ್ನಿಬ್ಬರು ಶಿಷ್ಯರಿದ್ದರು. ಈ ಮೂವರು ಸಹಪಾಠಿಗಳಲ್ಲಿ ಹಸನ್ನನು ಒಂದು ದಿನ ಮಿಕ್ಕಿಬ್ಬರನ್ನು ಕುರಿತು- ನಮ್ಮ ಇಮಾಂ ಗುರುಗಳಿಂದ ಶಾಸ್ತ್ರೋಪದೇಶ ಪಡೆದವರು ಅದೃಷ್ಟಶಾಲಿಗಳಾಗುವರೆಂದು ಜನರು ಹೇಳುತ್ತಾರಲ್ಲವೆ ? ಒಂದು ವೇಳೆ ನಾವು ಮೂವರೂ ಒಂದೇ ರೀತಿಯಾಗಿ ಭಾಗ್ಯ ಪಡೆಯದಿದ್ದರೂ, ನಮ್ಮಲ್ಲೊಬ್ಬನಾದರೂ ಮಹತ್ಪದವಿಗೆ ಬರು