ವುದು ಖಂಡಿತವೆಂದು ನಾವು ನಂಬಬಹುದು. ಹಾಗೆ ನಡೆದಾಗ ಅವನು ಮಿಕ್ಕಿಬ್ಬರ ವಿಷಯದಲ್ಲಿ ಹೇಗೆ ನಡೆದುಕೊಳ್ಳಬೇ”. ??? ಎಂದು ಕೇಳಿದನಂತೆ. ಅವರು-ನೀನು ಹೇಳಿದಂತೆ ಉತ್ತರಕೊಡಲು, ಅವನು- ಹಾಗಾದರೆ ಉನ್ನತ ದೆಶೆಗೆ ಬಂದ ವನು ತನ್ನ ಹಳೆಯ ಸಹಪಾಠಿಗಳನ್ನು ತನಗಿಂತ ಕೀಳೆನ್ನಿಸದಂತೆ, ಅವರಿಗೆ ತನ್ನ ಐಶ್ವರ್ಯದಲ್ಲಿ ಸಮ ಭಾಗವನ್ನು ಹಂಚಿಕೊಡ ಬೇಕು?' ಎಂದು ತೀರ್ಮಾನಕೊಟ್ಟನು. ಅವರಿಬ್ಬರೂ ಇದ ಕೊಪ್ಪಿ, ಭಾಷೆ ಪ್ರತಿಭಾಷೆಗಳನ್ನು ಕೊಟ್ಟು ತೆಗೆದುಕೊಂಡರು.
ಆಮೇಲೆ ಕೆಲವು ವರ್ಷಗಳಾದ ಬಳಿಕ ನಿಜಾಮ್ -ಉಲ್- ಮುಲ್ಕನಿಗೆ ಮೊರಾಸಾನ್ ಸಂಸ್ಥಾನದ ಸುಲ್ತಾನನ ಬಳಿ ವಜೀರ್ (ಮಂತ್ರಿ)) ಪದವಿ ದೊರೆಯಿತು. ಹಸನ್ನನು ಇದನ್ನು ಕೇಳಿದ ಕೂಡಲೆ ಆತನಲ್ಲಿಗೆ ಹೋಗಿ, ಹಳೆಯ ವಾಖ್ಯಾನವನ್ನು ನಡಿಸಿ ಕೊಡಬೇಕೆಂದನು. ವಜೀರನು ಅದನ್ನು ಗೌರವಿಸಿ, ಹಸನ್ನನಿಗೆ ಒಂದು ದೊಡ್ಡ ಅಧಿಕಾರವನ್ನು ಕೊಡಿಸಿದನು. ಆದರೆ ಅವನು ಇದರಿಂದ ತೃಪ್ತನಾಗದೆ, ತನ್ನ ಉಪಕಾರಿಯ ವಿರೋಧಿಗಳೊಡನೆ ಸೇರಿಕೊಂಡು, ಆತನಿಗೆ ಹಾನಿ ತರಬೇಕೆಂದು ಒಳಸಂಚು ನಡಿಸು ವವನಾದನು. ಈ ಕೃತ್ರಿಮವು ಕೈಗೂಡುವುದಕ್ಕೆ ಮುಂಚೆಯೇ ಹೇಗೋ ಅದು ಪ್ರಕಟವಾಗಲು, ಹಸನು ಅಧಿಕಾರ ಭ್ರಷ್ಟ ನಾಗಿ, ಕಡೆಗೆ ಒಂದು ಕೊಲೆಪಾತಕರ ಗುಂಪಿಗೆ ನಾಯಕನೆನ್ನಿಸಿ ಕೊಂಡು, ಅಪಯಶಸ್ಸಿಗೀಡಾದನು.
ನಮ್ಮ ಉಮರನೂ ಹಸನ್ನನಂತೆಯೇ ತನ್ನ ಬಾಲ್ಯ ಸ್ನೇಹಿತನ ಬಳಿಗೆ ಹೋಗಿ, ಹಿಂದಿನ ಪ್ರತಿಜ್ಞೆಯನ್ನು ಆತನ ಜ್ಞಾನ ಕಕ್ಕೆ ತಂದನು. ಆದರೆ ಇವನ ಬೇಡಿಕೆಯ ಬಗೆ ಬೇರೆ :-"ನಿನ್ನ ಆಧಿಪತ್ಯದ ನೆರಳಿನಲ್ಲಿ ಒಂದು ಮೂಲೆಯಲ್ಲಿ ಕುಳಿತು, ಜ್ಞಾನದ ಸೌಖ್ಯವನ್ನು ಜನರಲ್ಲಿ ಹರಡುತ್ತಾ, ನಿನ್ನ ಶ್ರೇಯಸ್ಸನ್ನು