ಈ ಪುಟವನ್ನು ಪ್ರಕಟಿಸಲಾಗಿದೆ

೨೦

ಆತನು ಯಶಸ್ಸಂಪಾದನೆಗಾಗಿಯಾಗಲಿ ಅಥವಾ ಲೋಕ ಪ್ರಬೋಧೆಗೆಂದೇ ಆಗಲಿ ಪುಸ್ತಕ ಬರೆಯಹೊರಟವನಲ್ಲ, ಆತನು ಲೇಖಣಿ ಹಿಡಿದುದು ಕೇವಲ ತನ್ನ ಎದೆಯ ಹೊರೆಯನ್ನು ಇಳಿಸಿ ಕೊಳ್ಳುವುದಕ್ಕಾಗಿ, ಅದರಿಂದ ಇತರರಿಗೆ ಸಂತೋಷವೂ ಜ್ಞಾನ ವಿಕಾಸವೂ ಆಗುವುದು ಆತನ ಉದ್ದೇಶ ಮಹಿಮೆಯಿಂದಲ್ಲ, —ಆನುಷಂಗಿಕವಾಗಿ, ನೆಲದಲ್ಲಿ ಬಿದ್ದ ಬೀಜವು ಮೊಳೆಯುವುದೂ, ಚೆನ್ನಾಗಿ ಬೆಳೆದ ಗಿಡದಲ್ಲಿ ಹೂ ಹೊರಡುವುದೂ ಲೋಕೋಪಕಾರ ಮಾಡಬೇಕೆಂಬ ಅವುಗಳ ಪ್ರತಿಜ್ಞೆಯಿಂದಲ್ಲ ; ಮೊಳೆಯದಿದ್ದರೆ ಬೀಜಕ್ಕೆ ಅನ್ಯಥಾ ಗತಿಯಿಲ್ಲ; ಹೂ ಬಿಡದಿದ್ದರೆ ಗಿಡಕ್ಕೆ ಬೇರೆ ವಿಧಿಯಿಲ್ಲ. ಹಾಗೆಯೇ, ಓದಿ ಚಿಂತಿಸಿ ಪ್ರತಿಭೆಯುಳ್ಳುದಾಗಿರುವ ಮನಸ್ಸಿಗೆ ಅದು ಯಾವುದಾದರೊಂದು ಬಗೆಯಲ್ಲಿ ಹೊರಕ್ಕೆ ಬಂದ ಹೊರತು ಸಮಾಧಾನವಿರದು. ಅದನ್ನು ಸಂಪೂರ್ಣವಾಗಿ ಒಳಗೆ ತಡೆದಿಡುವುದು ಯಾರಿಗೂ ಸಾಧ್ಯವಿಲ್ಲ. ಅದು ಹರಿದು ಬರಲು ಹೊರಗಣ ಪ್ರೇರಣೆಗಳಾಗಲಿ ಶಾಸನಗಳಾಗಲಿ ಬೇಕಿಲ್ಲ. ಹೀಗೆ ನೈಜವಾಗಿ, ಕರ್ತೃವಿನ ಅಂತರಂಗದೊಳಗಿನ ಆವೇಶದ ಪ್ರವಾಹ ವಾಗಿ, ಕೇವಲ ಆತನ ಹೃದಯಭಾರ ಪರಿಹಾರಕ್ಕಾಗಿ ಬಂದಿರು ವುವೇ ಈ ಲೋಕದ ಮಹಾ ಕೃತಿಗಳು. ಫಿಬ್ಬೆರನವು ಈ ಜಾತಿಯವು. ಆತನು ತನ್ನ ಅಂತರಂಗದ ಅನುಭವಗಳಲ್ಲಿ ಯಾವುದನ್ನು ತಡೆದಿಡುವುದು ಸಂಪೂರ್ಣವಾಗಿ ಸಾಧ್ಯವಿಲ್ಲದೆ ಹೋಯಿತೋ ಅದನ್ನು ಮಾತ್ರ ಮಾತುಗಳಲ್ಲಿ ರೂಪುಗೊಳಿಸಿ ರುವನು. ಆತನು ಕೀರ್ತಿಕಾಮನೆಯಿಲ್ಲದವನಾದುದರಿಂದಲೂ ; ಆತನ ಗುಣದೋಷ ವಿವೇಚಕ ದೃಷ್ಟಿಯು ಇತರರಲ್ಲಿದ್ದುದಕ್ಕಿಂತ ಸೂಕ್ಷ್ಮವಾದುದಾದುದರಿಂದಲೂ ; ಮೇಲಾಗಿ, ಎಷ್ಟು ಹೆಚ್ಚಾಗಿ ಬರೆಯುವುದು ಸಾಧ್ಯವೋ ಅಷ್ಟನ್ನೂ ಬರೆಯೋಣ ಎಂಬ ಪ್ರವೃತ್ತಿ ಗಿಂತ, ಎಷ್ಟು ಕೊಂಚವಾಗಿ ಬರೆದರೆ ಸಾಕೊ ಅಷ್ಟು ಮಾತ್ರವೇ ಬರೆಯೋಣ ಎಂಬ ನಿವೃತ್ತಿಭಾವವೇ ಆತನಿಗೆ ವಿಶೇಷವಾಗಿದ್ದುದ