ಈ ಪುಟವನ್ನು ಪ್ರಕಟಿಸಲಾಗಿದೆ

೨೧

ರಿಂದಲೂ ಆತನು ಮಾಡಿಟ್ಟಿರುವ ಕೆಲಸವು, ಆತನಿಗಿಂತ ಹೆಚ್ಚು ಪ್ರತಿಭಾವಂತರೇನೂ ಅಲ್ಲದ ಇತರ ಕೆಲವರು ಮಾಡಿರುವ ಕೆಲಸ ಕ್ಕಿಂತಲೂ, ಗಾತ್ರದಲ್ಲಿ ಚಿಕ್ಕದಾಗಿ ಕಾಣುತ್ತದೆ. ಅವರು ಪ್ರಸಿದ್ಧಿಗೆ ಹತ್ತುತ್ತಿರಲು ಆತನು ಅದನ್ನು ನೋಡಿ ಅವರೊಡನೆ ಸ್ಪರ್ಧೆಮಾಡದೆ ಸಂತೋಷಿಸಿ, ತನಗೆ ತನ್ನ ಅಪ್ರಸಿದ್ದಿಯೇ ಸರಿಯೆಂದೆಣಿಸಿದ್ದನು.

⁠ಫಿಟ್ಸ್-ಜೆರಲ್ಡನು ಭಾಷಾಂತರಕರ್ತನ ವೇಷವನ್ನು ಧರಿ ಸಿರುವ ಸ್ವತಂತ್ರ ಕವಿ. ಆತನ ಗ್ರಂಥಗಳಲ್ಲಿ ಮುಖ್ಯವಾದುವು ಯಾವುವೆಂದರೆ:-

(೧) ಕ್ಯಾಲ್ಡೆರಾನ್ ಎಂಬ ಸ್ಪ್ಯಾನಿಷ್ ಕವಿಯ ನಾಟಕಗಳ ಇಂಗ್ಲಿಷ್ ಅನುವಾದ ;
(೨) ಅಯಸ್ಕಿಲಸ್ ಎಂಬ ಗ್ರೀಕ್ ಮಹಾಕವಿಯ ಕೆಲವು ನಾಟಕಗಳ ಇಂಗ್ಲಿಷ್ ಅನುವಾದ ;
(೩) ಕೆಲವು ಪಾರಸೀಕ ಕೃತಿಗಳ ಇಂಗ್ಲಿಷ್ ಅನುವಾದ ;
(೪) ಕೆಲವು ಕಲ್ಪಿತಸಂಭಾಷಣೆಗಳು ಮತ್ತು ಸೂಕ್ತಿಗಳು;
(೫) ಬಂಧು ಮಿತ್ರರಿಗೆ ಬರೆದ ಕಾಗದಗಳು.

⁠ಇವುಗಳಲ್ಲಿ, ಕಾಗದಗಳ ಸಂಪುಟವು ಇಂಗ್ಲಿಷ್ ವಿದ್ವದ್ರಸಿಕರ ವಿಶೇಷವಾದ ಮೆಚ್ಚುಗೆಯನ್ನು ಸಂಪಾದಿಸಿದೆ. ಅದರಲ್ಲಿ ಫಿಟ್ಸ್-ಜೆರಲ್ಡನು ನಾನಾ ಕವಿಗಳ ಮತ್ತು ಕಾವ್ಯಗಳ ಗುಣಾವ ಗುಣಗಳನ್ನು ಪ್ರಾಸ್ತಾವಿಕವಾಗಿ ಸರಳ ಶೈಲಿಯಲ್ಲಿ ಸೂಚಿಸಿರುವ ನಲ್ಲದೆ, ತನ್ನ ಮನೋಭಾವಗಳನ್ನೂ ಸಂಕಟಗಳನ್ನೂ ತೋರಿ ಸಿರುವನು. ಆತನು ಎಂತಹ ಆದ್ರ್ರ ಹೃದಯನು, ಎಂತಹ ಕಾವ್ಯ ರಸಜ್ಞನು, ಎಂತಹ ನಿಷ್ಕಪಟಿ, ಎಂತಹ ಮೃದು ಹಾಸ್ಯನಿಪುಣನು, ಎಂತಹ ಸಾತ್ವಿಕನು ಮತ್ತು ಶಾಂತಿ ಪ್ರಿಯನು-ಎಂಬುದು ಆ ಕಾಗದಗಳನ್ನೋದುವವರ ಮನಸ್ಸಿಗೆ ವಿವರವಾಗಿ ಹೊಳೆಯು ಇದೆ. ಅವು ಪ್ರಕಟನೆಗಾಗಿ ಬರೆದ ಕಾಗದಗಳಲ್ಲ. ಆದುದರಿಂದ