ಈ ಪುಟವನ್ನು ಪ್ರಕಟಿಸಲಾಗಿದೆ

೨೨

ಅವನ್ನು ಆತನ ಸ್ವಭಾವದ ಯಥಾರ್ಥ ದರ್ಪಣವೆಂದು ಭಾವಿಸಬಹುದು.

⁠ಆತನ ಅನುವಾದಗಳು ತರ್ಜುಮೆಗಳಲ್ಲ, –ಪ್ರತಿಪದ ಭಾಷಾಂತರಗಳಲ್ಲ. ಮಹಾಕವಿಗಳ ಕಾವ್ಯ ನಾಟಕಗಳ ವ್ಯಾಸಂಗದಿಂದ ಆತನ ಮನಸ್ಸಿನಲ್ಲಿ ಎಂತೆಂತಹ ಭಾವನಾ ವಿಶೇಷಗಳು ಪ್ರತಿ ಫಲಿಸಿದುವೋ ಅವುಗಳ ಮೂರ್ತ ಸ್ವರೂಪವೇ ಫಿಟ್ಸ್-ಜೆರಲ್ಡನ ಅನುವಾದಗಳು. ಎಂದರೆ, ಆತನ ಕೃತಿಗಳಲ್ಲಿ ಮೂಲ ಕವಿಗಳ ಸಾಮಗ್ರಿಯ ಜೊತೆಗೆ ಆತನ ಸ್ವಂತ ಅಂಶವೂ ಸೇರಿದೆ. ಆತನು ಸುಮ್ಮನೆ "ಫೋಟೋ" ಎತ್ತಿದವನಲ್ಲ; ತಾನು ಆರಿಸಿದ ವಸ್ತುವಿಗೆ ಸ್ವಹಸ್ತದಿಂದಲೂ ಸ್ವಲ್ಪ ಬಣ್ಣಕಟ್ಟಿ, ಆಮೇಲೆ ಅದರ ಪ್ರತಿಬಿಂಬವನ್ನು ರೇವಾವಿವರಗಳೊಡನೆ ನಮ್ಮ ಮುಂದೆ ತಂದಿರಿಸಿದ್ದಾನೆ. ಆತನ ಸ್ವಂತ ಕಲ್ಪನಶಕ್ತಿಯ ಅದ್ಭುತವಾದುದಾದಕಾರಣ, ಕೆಲಸದಿಂದ ಆ ಅನುವಾದಗಳು – ಮೂಲ ಗ್ರಂಥಗಳ ವಿಕಾರಗಳಾಗುವುದಕ್ಕೆ ಪ್ರತಿಯಾಗಿ, ಅವುಗಳಲ್ಲಿ ಕಾಣಬಾರದ ಒಂದು ಹೊಸ ಸೌಂದರ್ಯದಿಂದ ಶೋಭಿಸುತ್ತವೆ.

⁠ಫಿಟ್ಸ್-ಜೆರಲ್ಡನಿಗೆ ಪರ್ಸಿಯಾ ಮೊದಲಾದ ಪ್ರಾಚ್ಯ ದೇಶಗಳ ಸಾಹಿತ್ಯದಲ್ಲಿ ಆಸಕ್ತಿಯುಂಟಾದುದು ಬಾಲ್ಯದಲ್ಲಿಯೇ, ಆಗ ಆತನ ನೆರೆಯಲ್ಲಿ ವಾಸವಾಗಿದ್ದ ಮೇಜರ್ ಮೂರ್ ಎಂಬಾತನು ಇಂಡಿಯಾ ದೇಶದಲ್ಲಿ ಉದ್ಯೋಗಮಾಡಿದ್ದವನು, ಈತನು ಈ ದೇಶಗಳ ಭಾಷೆಗಳನ್ನೂ ಮತಾಚಾರಗಳ ವಿಚಿತ್ರಗಳನ್ನೂ ಕುರಿತು ಫಿಟ್ಸ್-ಜೆರಲ್ಡ್ ಹುಡುಗನಿಗೆ ಆಗಾಗ ಕಥೆ ಹೇಳುತ್ತಿದ್ದನು. ದೊಡ್ಡವನಾದ ಮೇಲೆ (ಸುಮಾರು ೧೮೪೬ರಲ್ಲಿ) ಫಿಟ್ಸ್-ಜೆರಲ್ಡನಿಗೆ ಇ. ಬಿ. ಕೊವೆಲ್ ಎಂಬ ಪ್ರಾಚ್ಯ ಭಾಷಾ ಪಂಡಿತನ ಸ್ನೇಹ ಲಭಿಸಿತು. ಕೊವೆಲ್ ಪಂಡಿತನು ೧೮೫೫ರಿಂದ ೧೮೬೪ರ ವರೆಗೂ ಕಲ್ಕತ್ತೆ ಯಲ್ಲಿ ಪ್ರೊಫೆಸರ್ ಆಗಿದ್ದು, ಆಗ ಸಂಸ್ಕೃತ ಭಾಷಾ ಜ್ಞಾನವನ್ನು ಹೆಚ್ಚಾಗಿ ಸಂಪಾದಿಸಿ, ಆ ಬಳಿಕ ಕೇಂಬ್ರಿಡ್ಜ್ ವಿಶ್ವವಿದ್ಯಾಲಯ