ಈ ಪುಟವನ್ನು ಪ್ರಕಟಿಸಲಾಗಿದೆ

- 12 -

ಇಬ್ಬರೂ ಸಮವಯಸ್ಯೆಯರು. ಇಬ್ಬರೂ ಅಸಮಾನ ಸೌಂದರ್ಯ ಶಾಲಿನಿಯರಾಗಿದ್ದರೂ, ಒಬ್ಬಳ ರೂಪಲಾವಣ್ಯಗಳು ಮತ್ತೊಬ್ಬಳ ಅಂದ ಚೆಂದವನ್ನು ಅತಿಕ್ರಮಿಸಿದ್ದುವು. ಭಾರತೇಯ ಕವಿಗಳು ಸ್ತ್ರೀಯನ್ನು 'ಚಂದ್ರಮುಖಿ' 'ಕಮಲವದನೆ' ಎಂದು ವರ್ಣಿಸಿರುವರು. ಈ ಯುವತಿಯು ಈ ಅಭಿದಾನಕ್ಕೆ ಪಾತ್ರಳಾಗಿರಲಿಲ್ಲ. ಏಕೆಂದರೆ ಇವಳ ಮುಖಮಂಡಲವು ನೈಸರ್ಗಿಕ ಚ೦ದ್ರನಂತಾಗಲೀ ಕಮಲದಂತಾಗಲಿ ಶೋಭಿಸಿರಲಿಲ್ಲ. ವರ್ತುಲವಾದ ಪೂರ್ಣಚಂದ್ರನು ಸ್ವಲ್ಪ ದೀರ್ಘಕಾರವನ್ನು ಧರಿಸಿದರೆ ಎಷ್ಟು ಮಧುರನಾಗಿ ಶೋಭಿಸಬಹುದೋ, ಅಥವಾ ದೀರ್ಘವಾದ ಕಮಲಪತ್ರವು ಸ್ವಲ್ಪ ವೃತ್ತಾಕೃತಿಯನ್ನು ವಹಿಸಿದರೆ ಎಷ್ಟು ರಮ್ಯವಾಗಿ ಉಜ್ವಲಿಸುವುದೋ ಅಷ್ಟೇ ಸೌ೦ದರ್ಯಮಯವಾಗಿ ಆ ರಮಣಿಯ ಮುಖಮಂಡಲವು ರಂಜಿಸುತ್ತಿತ್ತು. ನಯನೇಂದ್ರಿಯಗಳು ಹರಿಣಲೋಚನದಂತೆ ಕಂಪಿಸುತ್ತಲಿದ್ದುವು. ಈ ಕಂಪನವು ಅವುಗಳಲ್ಲಿ ಪ್ರವಹಿಸುತ್ತಲಿದ್ದ ಪ್ರೇಮರಸದಿಂದ ಸರಿಯಾಗಿ ವ್ಯಕ್ತವಾಗುತ್ತಿರಲಿಲ್ಲ. ಅದೂ ಅಲ್ಲದೆ ಮುಖದ ಮೇಲೆ ಕ್ಷಾತ್ರತೇಜಸ್ಸು ಸಂಪೂರ್ಣವಾಗಿ ಪ್ರತಿಫಲಿಸುತ್ತಿದ್ದುದರಿಂದ, ಭಯದಿಂದ ಉಂಟಾದ ಕಂಪನವು ಎಲ್ಲಿಯೋ ಅದೃಶ್ಯವಾಗಿತ್ತು. ಸೂರ್ಯನ ಉಷ್ಣದಿಂದಲೊ ಅಥವಾ ಮಾರ್ಗದ ಆಯಾಸದಿಂದಲೂ ಪ್ರಾಪ್ತವಾದ ಸ್ವೇದಬಿಂದುಗಳನ್ನು ಧರಿಸಿದ ಆ ಮುಖವು ಹಿಮಜಲದಿಂದ ಮ್ಲಾನವಾದ ಹೇಮಂತಋತುವಿನ ಕಮಲದಂತೆ ಕನಿಕರವನ್ನು ಉಂಟುಮಾಡುತ್ತಲಿತ್ತು. ಮಸ್ತಕದ ಹಿಂದು ಗಡೆಯಲ್ಲಿದ್ದ ವೇಣಿಯು ಶಿರವನ್ನು ಏರಿದ ಚೀನಾಂಬರದಿಂದ ಆಚ್ಛಾದಿತವಾಗಿದ್ದುದರಿಂದ, ಅವಳ ಸೃಷ್ಟದಲ್ಲಿಯೇ ಸ್ವತಂತ್ರವಾಗಿ ಕ್ರೀಡಿಸುತ್ತಲಿತ್ತು. ಹಸುರು ರೇಶ್ಮೆಯ ಸೆರಗನ್ನು ದಕ್ಷಿಣ ಬಾಹುವಿನ ಕೆಳಗಡೆಯಿಂದ ಸೆಳೆದುಕೊಂಡು, ಉಡಿಯಲ್ಲಿ ಬಿಗಿದುದರಿಂದ ವಕ್ಷೋರಂಗವು ಇನ್ನೂ ಉನ್ನತವಾಗಿಯೂ ಉಜ್ವಲವಾಗಿಯೂ ತೋರುತ್ತಲಿತ್ತು. ಮನ್ಮಥವೈಜಯಂತಿಯಂತೆ ವಾಯುವಿನಲ್ಲಿ ಮೆಲ್ಲಮೆಲ್ಲನೆ ತೇಲುತ್ತಿರುವ ಹಸುರಾದ ದುಕೂಲವು ಅವಳ ಅಂಗಕಾಂತಿಯನ್ನು ಸಂಪೂರ್ಣವಾಗಿ ಮುಚ್ಚಿದರೂ, ಅಂಗ ಛಾಯೆಯು ವಸ್ತ್ರದ ಹಿಂದುಗಡೆಯಿ೦ದ ನೋಟಕರ ಮನಸ್ಸನ್ನು ಆಕರ್ಷಿಸುವಂತಿತ್ತು. ದೇಹವರ್ಣವು ಹರಿದ್ರ; ಸ್ವಲ್ಪ ಹಳದಿ; ಸುವರ್ಣಕಮಲದಂತೆ