ಈ ಪುಟವನ್ನು ಪ್ರಕಟಿಸಲಾಗಿದೆ

ಎಂಬುದನ್ನು ಪಾರುವಿನ ಕಣ್ಣುಗಳು ನನಗೆ ತೋರಿಸಿಕೊಟ್ಟವು. ಮತ್ತೆ ಆ ಸುಂದರವಾದ ಹೃದಯ, ರೂಪಸೌಂದರ್ಯದಂತೆ ಬಹು ಬೇಗನೆ ಮಾಸದೆ ಎಂದೆಂದೂ ಸುಂದರವಾಗಿಯೇ ಇರುವದು ಎಂಬುದರ ಅರಿವನ್ನೂ ನನಗೆ ಮಾಡಿಕೊಟ್ಟವು ಪಾರುವಿನ ಆ ಕಣ್ಣುಗಳೇ.

ಕೂತು ಬೇಸತ್ತಿದ್ದ ಕಿಟ್ಟಣ್ಣನ ಬೇಸರವೆಲ್ಲ ಹೋಯ್ತೋ ? ಆ ಹಾಡು ಮುಗಿಯುವುದೇ ತಡ 'ಇನ್ನೊಂದು ಹೇಳಮ್ಮಾ' ಎಂದೆ. ನಾನು ತಿಳಿದುಕೊಂಡಿದ್ದೆ 'ನಂಗೆ ಬರೋದಿಲ್ಲ ಇನ್ನು - ಗಂಟಲು ಸರಿಯಾಗಿಲ್ಲ-ಈಗ ಸಾಕು ' ಎಂದೇನಾದರೂ ಹೇಳುವಳೋ ಎಂದು. ಒಂದೂ ಇಲ್ಲ. ಕಿಟ್ಟಣ್ಣ ಹೇಳೆಂದುದೇ ತಡ, ನನ್ನ ಮುಖ ನೋಡಿದಳು 'ಹೇಳಲೇ ?' ಎಂದು ಕೇಳುವಂತೆ. ಸೌನು ಮಾತನಾಡಲಾರದೆ 'ಹೂಂ' ಎಂದು ತಲೆ ಅಲ್ಲಾಡಿಸಿದೆ. ಅವಳು ಪುನಃ ಹೇಳಿದಳು.

'ನಾನ್ಯಾಕೆ ಬಡವಾನೈಯ್ಯಾ-'

ಇದೂ ನಾವು ನೂರಾರು ಸಾರಿ ಹೇಳಿ ಕೇಳಿ ಬೇಸತ್ತ ಕೀರ್ತನೆಯೇ. ಆದರೂ ಸಾರುವಿನ ಕೊರಳಿನಿಂದ ಹೊರಡುವಾಗ......!

ಅದು ಮುಗಿದ ಮೇಲೆ ಇನ್ನೂ ಹೇಳಿಸಬೇಕೆಂದು ಕಿಟ್ಟಣ್ಣನಿಗೆ ಆಸೆ. ನನಗೂ ಇರಲಿಲ್ಲವೆಂತಲ್ಲ. ಆದರೆ ನೋಡಿ, ಅವಳು ದರಿದ್ರ ಗುಮಾಸ್ತರ ಕೂರೂಪಿ ಮಗಳು. ಕಿಟ್ಟಣ್ಣನ ಮಡದಿ-ಜಮೀನ್ದಾರರ ಏಕಮಾತ್ರ ಪುತ್ರಿ ಹಾರ್ಮೋನಿಯಮ್‌ನೊಡನೆ ಹಾಡಿ ಕಿಟ್ಟಣ್ಣನಿಗೆ ತಾಂಬೂಲಾದಿಗಳನ್ನು ಕೊಡಬೇಕಾಗಿರುವಾಗ ಇವಳಿಗೆ ಪ್ರಾಶಸ್ತ್ಯವನ್ನು ಕೊಟ್ಟು ಹಾಡಿಸುತ್ತಿರುವುದೇ?

ಅರಸಿನ ಕುಂಕುಮ ತಾಂಬೂಲಾದಿಗಳನ್ನು ಹಂಚುವ ಸಂಭ್ರಮಗಳು ತೀರುವಾಗ ಪಾರು ಹೊರಟುಹೋಗಿದ್ದಳು. ಮರುದಿನ ಬಂದಿದ್ದರೂ ನನಗೆ ಜಮೀನದಾರರ ಬಂಧು ಮಿತ್ರಾದಿಗಳ ಮನೆಗೆ ಔತಣದಿಗಳಿಗೆ ಹೋಗುವ ಸಂಭ್ರಮದಲ್ಲಿ ಹಾಡಿಸಲು ಸಮಯವಿಲ್ಲ; ಕೆಲಸದ ಗಲಾಟೆಯಲ್ಲಿ ಅವಳಿಗೂ ಪುರುಸೊತ್ತಿಲ್ಲ. ಕಿಟ್ಟಣ್ಣನಂತೂ 'ಪಾರೂ

೪೩