ದೇವರಚಿತ್ತದಲ್ಲಿ ಇದ್ದುದು ಆಗಲಿ. ಈ ಸಲಹೆಗೆ ನಾನು ಒಪ್ಪಿಕೊಳ್ಳುವುದು ಉತ್ತಮ ” ಎಂದು ಯೋಚಿಸಿ ' ಎಲೈ! ಮಹಾ ತ್ಮನೆ ! ನಾನು ನಿನ್ನ ಸಲ ಹೆಗೆ ಒಘ್ರವೆನು, ನನ್ನನ್ನು ಹೇಗಾದರೂ ಕಾ ಫಾಡು ' ಎಂದಳು. ಅದಕ್ಕೆ, ಹುತ್ತದೊಳಗಿನಿಂದ - ಹಾಗಾದರೆ ನೀನು ಈಗ ಊರಿಗೆ ಹೋಗಿ ಒಂದು ಭಂಗಾರದ ಕತ್ತಿಯನ್ನು ತಂದು ಈ ಹುತ್ತವನ್ನು ಸೀಳು. ನಾನು ಎದ್ದು ಬಂದು ನಿನ್ನನ್ನು ಮದುವೆಯಾಗುವೆನು ನಿನ್ನ ನು ಇಲ್ಲಿಗೆ ಕರೆತಂದ ಆ ನವಿಲೇ ಈಗ ನಿನಗೆ ದಾರಿಯನ್ನು ತೋರಿಸುವ ದು , ಎಂದು ಕೇಳಿಸಿತು. ಇಷ್ಟರಲ್ಲಿಯೇ ಆ ಮಯೂರ ವ್ರ ಧ್ವನಿ ಮಾಡಿತು, ಆಧ್ಯನಿಯನ್ನೇ ಹಿಡಿದು ಕೊರಟಳು. ಬೇಗನೆ ಊರು ಸಿಕ್ಕಿತು. •== ೭, ನಾಗವಲ್ಲಿಯ ಕಥೆ-೩ ನೆಯ ಭಾಗ. ಇತ್ತಲಾಗಿ ಕಾಡಿನಲ್ಲಿ ನಾಗವಲ್ಲಿಯು ದಾರಿತಪ್ಪಿ ಹೋಗಿರುವಳೆಂದು ರಾಯನು ತಿಳಿದು, ಬೇಟೆಗಾರರನ್ನು ಕರೆಯಿಸಿ, ಕಾಡನ್ನೆಲ್ಲ ಚೆನ್ನಾಗಿ ಹುಡುಕಿ, ನಾಗವಲ್ಲಿಯನ್ನು ಕರೆತರಬೇಕೆಂದು ಹೇಳಿ ಕಳುಹಿಸಿದನು. ಒಂದೆ ರಡು ದಿನಗಳಾದರೂ ಇನ್ನೂ ಹಿಂದಿರುಗಿ ಯಾರೂ ಬರಲಿಲ್ಲವೆಂದು ಯೋಚಿ ಸುತ್ತ ಕುಳಿತಿದ್ದಾಗ ನಾಗವಲ್ಲಿಯೇ ಬಂದುಸೇರಿದಳು, ಅಗ ರಾಯನು ಮಗಳನ್ನು ಮುದ್ದಿಟ್ಟು ಅವಳು ಬಂದ ವರ್ತಮಾನವನ್ನು ಸಂತೋಷದಿಂದ ಪುರಜನರೆಲ್ಲರಿಗೂ ತಿಳಿಸಿದನು. ತರುವಾಯ ನಾಗವಲ್ಲಿಯು, ತಾನು ಕಾಡನ್ನು ಹೊಕ್ಕ ಮೊದಲು ಹಿಂದಿರುಗಿಬಂದ ವರೆಗೂ ನಡೆದುದನ್ನೆಲ್ಲಾ ತನ್ನ ತಂದೆ ತಾಯಿಗಳಮುಂದೆ ಹೇಳಿ ಬಹು ದುಃಖದಿಂದ ಕೊನೆಗೆ : ಅಪ್ಪಾಜಿ, ನಾನು ಇಲ್ಲಿ ಇನ್ನು ನಿಲ್ಲ ವುದಕ್ಕೆ ಇಲ್ಲ. ನನಗೆ ಒಂದು ಭಂಗಾರದ ಕತ್ತಿಯನ್ನು ತರಿಸಿಕೊಡಿ.ನಾನು ಹೋಗಿ ಬರುವೆನು , ಎಂದಳು ಆಗ ದೊರೆಯು ತನ್ನ ಒಬ್ಬಳೇ ಮಗಳನ್ನು ಕಾಡು ಪಾಲು ಮಾಡಲಾರದೆ ಬಹಳವಾಗಿ ಚಿಂತಿಸಿ, ಮಗಳನ್ನ ಹೆಂಡತಿ ಯನ್ನೂ ಸಮಾಧಾನಪಡಿಸಿ, ಮಂತ್ರಿಗೆ ಹೇಳಿ ಕಳುಹಿಸಿದನು, ಮಂತ್ರಿಯು ಒಡನೆಯೆ ಬಂದನು. ರಾಯನು ಮಂತ್ರಿಗೆ ಎಲ್ಲವನ್ನೂ ತಿಳಿಸಿದನು. ಆಗ
ಪುಟ:ಕಥಾವಳಿ.djvu/೨೨
ಈ ಪುಟವನ್ನು ಪರಿಶೀಲಿಸಲಾಗಿಲ್ಲ.