ಮಂತ್ರಿಯು ಬಹಳವಾಗಿ ಯೋಚಿಸಿ, ಕೊನೆಗೆ, ಆವೂರಿನಲ್ಲಿ ಚೆಲುವಿಯೆಂದು ಹೆಸರುಗೊಂಡಿದ್ದ ಒಬ್ಬಳನ್ನು ಭಂಗಾರದ ಕತ್ತಿಯೊಡನೆಹುತ್ತದ ಬಳಿಗೆ ಕಳುಹಿಸುವುದೆಂದೂ, ನಾಗವಲ್ಲಿಯನ್ನು ಮನೆಯಲ್ಲಿಯೇ ಇಟ್ಟುಕೊಳ್ಳುವು ದೆಂದೂ,ಒಂದು ಉಪಾಯವನ್ನು ಹುಡುಕಿಹೇಳಿದನು.ದೊರೆಯೂ ಒಪ್ಪಿದನು. ಮರುದಿನ ರಾಯನು ಆ ಸುಂದರಿಯನ್ನು ಕರೆಯಿಸಿ ಅವಳಿಗೆ ಬೇಕಾ ದುದನ್ನು ಕೊಟ್ಟು, ಚಿನ್ನದ ಕತ್ತಿಯೊಡನೆ ಹುತ್ತದ ಬಳಿಗೆ ಕಳುಹಿಸಿದನು. ಅವಳು ಆ ಹುತ್ತವನ್ನು ಕತ್ತಿಯಿಂದ ಒಂದು ದಿನವೆಲ್ಲಾ ಸೀಳಿದರೂ ಅದು ಸೀಳಲಿಲ್ಲ, ಮರು ದಿನ ಬೆಳಕು ಹರಿವಹೊತ್ತಿನಲ್ಲಿ ' ಈಗ ಎಷ್ಟು ಹೊತ್ತಾ ಗಿರುವದು ? ' ಎಂಬ ಧ್ವನಿಯು ಹುತ್ತದಿಂದ ಬಂದಿತು, ಅದಕ್ಕೆ, ಅವಳು ಈಗ ಏರುಕಟ್ಟುವ ಹೊತ್ತು ' ಎಂದಳು, “ ಓಹೋ ! ನೀನು ದೊರೆಯಮ ಗಳಲ್ಲ; ನೀನು ರೆತನ ಮಗಳು, ನೀನು ಹೋಗಿ ದೊರೆಮಗಳನ್ನು ಕಳು ಹಿಸು ' ಎಂದು ಅವಳಿಗೆ ಕೇಳಿಸಿತು. ಅವಳು ನಿಜವಾಗಿಯ ರೈತನಮಗ ಲೇ, ಅವಳು ಹಿಂದಿರುಗಿ ಬಂದು ಅಲ್ಲಿ ನಡೆದುದನ್ನೆಲ್ಲಾ ದೊರೆಗೆತಿಳಿಸಿದಳು. ದೊರೆಯ ಮಂತ್ರಿಯ ಮಾರನೆಯ ದಿನ ಅವಳಿಗಿ೦ತಲೂ ಸುಂದ ರಿಯಾಗಿದ್ದ ಒಬ್ಬ ಗಾಣಗಿತ್ತಿಯನ್ನು ಕಳುಹಿಸಿದರು. ಆ ಗಾಣಗಿತ್ತಿಯು ಹುತ್ತವನ್ನು ಒಂದು ದಿನವೆಲ್ಲಾ ಸೀಳಲು ಕಷ್ಟ ಪಟ್ಟಳು, ಆದರೂ ಪ್ರಯೋ ಜನವಾಗಲಿಲ್ಲ. ಅವಳಿಗೂ, ' ಎಷ್ಟು ಹೊತ್ತಾಗಿರುವುದು ?' ಎಂಬ ಧ್ವನಿಯು ಕೇಳಿಸಿತು. ಅವಳು : ಗಾಣಕವ ಹೊತ್ತಿರಬಹುದು ? ಎಂದಳು. ಅದಕ್ಕೆ ಹುತ್ತದಿಂದ : ಛೇ ! ಹೋಗು ; ನೀನು ಗಾಣಗಿತ್ತಿ. ದೊರೆಯ ಮಗಳು ಬಾರದೆ ಇದ್ದರೆ ಇನ್ನು ಸ್ವಲ್ಪ ಕಾಲದಲ್ಲಿಯೆ ಪಟ್ಟಣವೆಲ್ಲಾ ನಾಶವಾಗುವುದೆಂದು ಹೇಳು' ಎಂಬ ಧ್ವನಿಯು ಕೇಳಿಸಿತು, ಒಡನೆಯೇಅವಳು ಹಿಂದಿರುಗಿ ಬಂದು ರಾಜನಿಗೂ ಮ೦ತ್ರಿಗೂ ಆ ಸಂಗತಿಯನ್ನು ತಿಳಿಸಿದಳು. ಆಗ ದೊರೆಯು ತನ್ನ ಮಗಳನ್ನೆ ಕಳುಹಿಸಬೇಕಾಗಿ ಬಂದಿತು. ಒಬ್ಬಳೇ ಮಗಳು, ಇವಳನ್ನು ಹೇಗೆ ಕಳುಹಿಸುವುದೆಂದು, ಯೋಚಿಸುತ್ತ ಕುಳಿತಿದ್ದಾಗ, ನಾಗವಲ್ಲಿಯು ಬಂದು ತಂದೆಗೆ ನಮಸ್ಕರಿಸಿ 'ನನ್ನ ಬೃಳಿ ಗೋಸ್ಕರ ಪಟ್ಟಣವೂ ನಾಶವಾಗುವುದು ಸರಿಯಲ್ಲ. ನನಗೆ ಅಪ್ಪಣೆಯನ್ನು ಕೊಡಿ, ನಾನು ಹೋಗಿ ಬರುವೆನು, ” ಎಂದು ಬೇಡಿಕೊಂಡಳು.
ಪುಟ:ಕಥಾವಳಿ.djvu/೨೩
ಈ ಪುಟವನ್ನು ಪರಿಶೀಲಿಸಲಾಗಿಲ್ಲ.