ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆ ಮಾರನೆಯ ದಿನ ನಾಗವಲ್ಲಿ ಯೇ ಹೊರಟಳು, ಪಟ್ಟಣದ ಜನ ರೆಲ್ಲರೂ ಗೋಳಿಟ್ಟರು. ಅರಮನೆಯಲ್ಲಿದ್ದ ವರ ದುಃಖವನ್ನ೦ತೂ ಹೇಳುವ ದಕ್ಕೆ ಅಸಾಧ್ಯವ, ಆ ದಿನ ನಗಾರಿ ನೌಪತ್ತು ಆಗಲಿಲ್ಲ. ಊರಿನಲ್ಲಿ ಎಲ್ಲೆಲ್ಲಿ ನೋಡಿದರೂ ಜನರ ಗುಂಪ, ಪಿಸಿಪಿಸಿ ಮಾತು, ಜನರ ರೋದನಧ್ವನಿ, ಈ ರೀತಿಯಲ್ಲಿದ್ದಿತು. ನಾಗವಲ್ಲಿಯು ತನ್ನ ಜತೆಯಲ್ಲಿ ಬರುತ್ತಿದ್ದ ಜನರ ನ್ನೆಲ್ಲಾ ಸಮಾಧಾನಗೊಳಿಸಿ, ಹಿಂದಕ್ಕೆ ಕಳುಹಿಸಿ, ತಾನೊಬ್ಬಳೇ ಆ ಹುತ್ತವಿದ್ದಲ್ಲಿಗೆ ಹೊರಟಳು. ೮, ನಾಗವಲ್ಲಿಯ ಕಥೆ,-(೪ ನೆಯ ಭಾಗ) ನಾಗವಲ್ಲಿಯು, ತನ್ನ ಜನರನ್ನೆಲ್ಲಾ ಕಳುಹಿಸಿ, ಹೊರಟು ಸ್ವಲ್ಪ ಹೊತ್ತಿನಲ್ಲಿಯೇ ಹುತ್ತವನ್ನು ಸೇರಿದಳು. ಅದನ್ನು ಸೀಳುವುದಕ್ಕೆ ಮುಂದೆ, ದೇವರನ್ನು ಪ್ರಾರ್ಥಿಸಿ, ಹುತ್ತಕ್ಕೆ ಪ್ರದಕ್ಷಿಣೆಮಾಡಿ, ಭಂಗಾರದ ಕತ್ತಿಯಿಂದ ಅದನ್ನು ಸೀಳಿದಳು, ಹುತ್ತವು ಎರಡು ಪಾಲಾಯಿತು. ಆಗ ಥಳಥಳಿ ಸುವ ರತ್ನದ ಕವಚವನ್ನು ತೊಟ್ಟು, ವಜ್ರದ ಕಿರೀಟವನ್ನು ಇಟ್ಟು, ಅಗ್ನಿ ಯಂತೆ ಪ್ರಕಾಶಿಸುವ ನಾಗರಾಜ ಕುಮಾರನು ಈಚೆಗೆ ಬಂದು, ಅವಳ ಕೈಯನ್ನು ಹಿಡಿದುಕೊಂಡು, “ಪ್ರಿಯೆ ! ನನ್ನೊಡನೆ ನಡೆ” ಎಂದನು. ನಾಗವಲ್ಲಿಯು ತನಗೆ ತಕ್ಕ ಗಂಡನು ಸಿಕ್ಕಿದುದಕ್ಕಾಗಿ ಬಹಳ ಸಂತೋಷಗೊಂಡು, ನನ್ನ ತಂದೆ ತಾಯಿಗಳೂ ಇಷ್ಟ ಜನರೂ ನನ್ನನ್ನು ಅಗಲಿ ಬಹಳವಾಗಿ ಚಿಂತಿಸುತ್ತಿರುವರು. ನನಗೆ ಲಭಿಸಿರುವ ಪ್ರಣವಿಶೇಷ ವನ್ನು ಎಲ್ಲರಿಗೂ ತಿಳಿಸಿ ಅವರ ಮನಸ್ಸನ್ನು ಸಂತೋಷಪಡಿಸಿ ಬರುವುದಕೆ ಅಪ್ಪಣೆಯನ್ನು ಕೊಡಬೇಕು ಎಂದು ಪ್ರಾರ್ಥಿಸಿದಳು. ಅದಕ್ಕೆ ನಾಗರಾಜ ಕುಮಾರನು ಒಪ್ಪಿ 'ನಾನು ಇಲ್ಲಿ ಬಹಳ ಕಾಲ ನಿಲ್ಲುವುದಕ್ಕೆ ಇಲ್ಲ, ನೀನು ಊರಿಗೆ ಹೋಗಿ, ನಿಮ್ಮ ತಂದೆ ತಾಯಿಗಳೊಡನೆ ಮರುಗಳಿಗೆ ಎಂದರೆ ಮರೇಗಳಿಗೆ ಇದ್ದು, ಹೊರಟು ಬಾ, ' ಎಂದು ಹೇಳಿ ಕಳುಹಿಸಿದನು.