೧೨ ್ರ, ನಾಗವಲ್ಲಿಯ ಕಥೆ-(೫ ನೆಯ ಭಾಗ) ನಾಗವಲ್ಲಿಯು ಮೂರ್ಛಯಿಂದ ಚೇತರಿಸಿಕೊಂಡು ಎದ್ದು, ಸರಸರನೆ ಆ ನೀರಿನ ಹತ್ತಿರಕ್ಕೆ ಹೋದಳು. ಆ ತಿಳಿನೀರಿನಲ್ಲಿ ರಾಜಕುಮಾರನು ಇರುವುದನ್ನು ಮತ್ತೆ ನೋಡಿದಳು. ಹೇಗಾದರೂ ಅವನನ್ನು ಸೇರಬೇ ಕೆಂದು ಆ ನೀರಿನಲ್ಲಿ ದುಮುಕಿದಳು, ನೀರು ದಾರಿಬಿಟ್ಟಿ ತು, ಒಂದು ಕ್ಷಣ ದಲ್ಲಿ ಅರಮನೆಯ ಬಾಗಿಲನ್ನು ಸೇರಿದಳು. ಆದರೆ ಅರಮನೆಯ ಒಳಕ್ಕೆ ಇವಳನ್ನು ಯಾರೂ ಬಿಡರು ; ಒಬ್ಬರೂ ಮಾತನಾಡಿಸರು ; ಎಲ್ಲರೂ ಬಹು ಸಡಗರದಲ್ಲಿದ್ದರು ; ನಾಗಕನೈಗೆ ನಾಳೆ ಮದುವೆಯೆಂದು ಎಲ್ಲರೂ ಹೇಳಿ ಕೊಳ್ಳುತಿದ್ದರು, ತಾನು ಹೇಗೆ ರಾಜಕುಮಾರನನ್ನು ಕಂಡು ಮಾತನಾ ಡುವುದು ? ರಾಜಕುಮಾರನು ನಾಗಕನೈಯನ್ನು ಮದುವೆಯಾಗುವುದಾ ದರೆ ತಾನು ಏನು ಮಾಡುವುದು ? ತಾನು ಪಟ್ಟ ಕಷ್ಯವೆಲ್ಲಾ ವ್ಯರ್ಥವಾ ಗು ವುದು - ಎಂದು ಚಿಂತಿಸುತ್ತಾ, ಅರಮನೆಗೆ ಸ್ವಲ್ಪ ದೂರದಲ್ಲಿದ್ದ ಒಂದು ಮರದ ನೆಳಲಲ್ಲಿ ಕುಳಿತುಕೊಂಡಳು. ಸ್ವಲ್ಪ ಹೊತ್ತಿನಲ್ಲಿಯೆ ಅಲ್ಲಿಗೆ ಒಬ್ಬ ಮುದುಕಿಯು ಬಂದಳು. ಆ ಮುದುಕಿಗೆ ಇವಳು ನಮಸ್ಕಾರಮಾಡಿ, • ಅಮ್ಮಾ ನಾಳೆ ಯಾರಿಗೆ ಮದುವೆ ? ' ಎಂದು ಕೇಳಿದಳು, ಮುದುಕಿಯು, ಗಲ್ಲದ ಮೇಲೆ ಬೆಟ್ಟಿಟ್ಟ, ತಲೆಯೆತ್ತಿ ಇವಳ ಮುಖವನ್ನು ನೋಡಿ, 'ಇದೇನೆ ! ಹೀಗೆ ಕೇಳುತೀಯೆ ! ಚೆನ್ನಾ ಯಿತು, ಹೊಸದಾಗಿ ಬಂದಿದಾ ನಲ್ಲೆ ; ನಾಗ ರಾಜಕುಮಾರನಂತಲ್ಲ ! ಅವನಿಗೆ ನಮ್ಮ ನಾಗಕನೆಯನ್ನು ಕೊಡು ವರಲ್ಲವೇನೆ! ಅವನಿಗೇನೋ ಮದುವೆ ಬೇಡವಂತೆ ; ಮರು ಹೊತ್ತು ತಲೆಯ ಮೇಲೆ ಕೈ ಬಿಟ್ಟು ಕೊಂಡು ಕುಳಿ” ರುತ್ತಾನಂತೆ ! ರಾತ್ರಿ ಒಂದು ಹೊತ್ತಿನಲ್ಲಿ ಸ್ವಲ್ಪ ಹೊರಕ್ಕೆ ಬರುತ್ತಾನಂತೆ ! ನನಗೆ ಕೆಲಸವಿದೆ, ನಾನು ಹೋಗಬೇಕು. ನೀನು ಹುಡುಗಿ, ನಿನಗೆ ತಿಳಿಯದೇ ಇದ್ದುದು ನನಗೆ ತಿಳಿಯುತ್ತದೆಯೆ ! ನನ್ನನ್ನು ನೋಡಿದರೆ ನಿಮಗೆ ಹಾಸ್ಯ' ಎಂದು ಕೊಂಡು ಹೊರಟುಹೋದಳು. ನಾಗವಲ್ಲಿಯು ರಾತ್ರಿಯಲ್ಲಿ ಆ ರಾಜಕುಮಾರನು ಹೊರಡುವುದನ್ನೇ ಕಾದಿದ್ದಳು. ರಾತ್ರಿ ಒಂದು ಹೊತ್ತಿನಲ್ಲಿ ರಾಜಕುಮಾರನು, ಏಳನೆಯ ಉಪ್ಪರಿಗೆಯಿಂದ ಬರುತಿದ್ದುದನ್ನು ನೋಡಿದಳು. ತನ್ನ ಪ್ರಿಯನನ್ನು
ಪುಟ:ಕಥಾವಳಿ.djvu/೨೭
ಈ ಪುಟವನ್ನು ಪರಿಶೀಲಿಸಲಾಗಿಲ್ಲ.