೧೩ ಸೇರುವೆನೆಂಬ ಸಂತೋಷದಿಂದ ಮುಂದಾಗಿ ಬಂದಳು. ರಾಜಕುಮಾರ ನಾದರೋ, ಎಂದಿನಂತೆ ಹೊರಗೆ ಸಂಚಾರ ಹೊರಡದೆ ಎರಡನೆಯ ಅ೦ತ ಸಿನ ಮಚ್ಚಿನಮೇಲೆ ನಿಂತನು. ಎಷ್ಟು ಹೊತ್ತಾದರೂ ಕೆಳಕ್ಕೆ ಬರಲಿಲ್ಲ. ಬೆಳಗಾಗುತ್ತಾ ಬಂದಿತು. ಇವಳ ಮನಸ್ಸು ಕಳವಳಿಸುತ್ತಿದ್ದಿತು. ಆಗ ನಾಗವಲ್ಲಿಯು ಮೆಲ್ಲನೆ ಎರಡನೆಯ ಅ೦ತಸ್ತಿನ ಕೆಳಗೆ ನಿ೦ತು, ನಿಶ್ಯಬ್ದವಾಗಿರುವ ಸಮಯದಲ್ಲಿ : ತಾನು ಕಾಡನ್ನು ಹೊಕ್ಕುದು ಮೊದಲು ಗೊಂಡು, ಇಳಿಜಾರಾದ ಬೆಟ್ಟವನ್ನು ಹತ್ತಿದುದು, ಕುಣಿದಾಡುವ ಕತ್ತಿ ಗಳನ್ನು ದಾಟಿದುದು, ಕುದಿವ ನೀರನ್ನು ಅಣಗಿಸಿದುದು, ಇವೇ ಮುಂತಾದ ತನ್ನ ಕಥೆಯನ್ನೆಲ್ಲಾ ಒಂದು ಗಾನವನ್ನು ಮಾಡಿ, ಅದನ್ನು ಬಹು ಮಧು ರಧ್ವನಿಯಿಂದ ಹಾಡಿದಳು, ಆ ಗಾನವನ್ನು ಕೊನೆಯವರೆಗೂ ಕೇಳಿ, ರಾಜಕುಮಾರನು ತನ್ನ ಪ್ರಿಯೆಯು ಇಲ್ಲಿಯೇ ಬಂದಿರುವಳೆಂದು ತಿಳಿದು ಒಡನೆಯೆ ಕೆಳಕ್ಕಿಳಿದು ಬಂದು ಅಲ್ಲಿ ನಾಗವಲ್ಲಿ ಇದ್ದುದನ್ನು ನೋಡಿ ಬಹು ಸಂತೋಷಪಟ್ಟನು. ಆಗ ನಾಗರಾಜನು ತಾನು ಕಾಡಿನಲ್ಲಿ ಕಾದಿದ್ದುದು, ತರುವಾಯ ನಾಗಕನ್ನೆಯ ವಶವಾದುದು, ಅವಳು ಮದುವೆಯಾಗಬೇಕೆಂದು ಬಲಾ ತ್ವರಿಸಿದುದು, ಅದಕ್ಕಾಗಿ ತಾನು ಯೋಚಿಸುತಿದ್ದುದು, ಇವೇ ಮುಂತಾದ ತನ್ನ ವೃತ್ತಾಂತವನ್ನೆಲ್ಲಾ ಹೇಳಿ ನಾಗವಲ್ಲಿಯನ್ನು ಸಮಾಧಾನಪಡಿಸಿದನು. “ ನಾಗರಾಜ! ನಾವಿನ್ನು ಇಲ್ಲಿರುವುದು ಸರಿಯಲ್ಲ, ನನ್ನಲ್ಲಿ ಆ ಖುಷಿಯು ಆಶೀರ್ವದಿಸಿ ಕೊಟ್ಟಿರುವ ಒಂದು ಪದಾರ್ಥವಿರುವುದು, ಅದನ್ನು ಈಗ ಉಪಯೋಗಿಸಬಹುದು ' ಎಂದು ತನ್ನಲ್ಲಿದ್ದ ಒಂದು ಸಣ್ಣ ಪೆಟ್ಟಿಗೆಯನ್ನು ತೆಗೆದಳು, ಅದರಲ್ಲಿ ಒಂದು ವಿಧವಾದ ಸಿದ್ಧರಸವ ಇದ್ದಿತು. ಆದನ್ನು ನಾಗರಾಜಕುಮಾರ ನಾಗವಲ್ಲಿಯರು ಕಾಲಿಗೆ ಹಚ್ಚಿ ಕೊಂಡರು. ಆ ರಸವು ಇವರಿಗೆ ಗಂಧರರ೦ತೆ ಆಕಾಶದಲ್ಲಿ ಸಂಚಾರಮಾಡುವ ಶಕ್ತಿಯನ್ನು ಕೊಟ್ಟಿತು. ಅಲ್ಲಿಂದ ಇಬ್ಬರೂ ಹೊರಟು ಬರುತಿರುವಾಗ ದಾರಿಯಲ್ಲಿ ಆ ಖುಷಿಯ ವಣ೯ಶಾಲೆ ಸಿಕ್ಕಿತು. ಅಲ್ಲಿಳಿದು, ಖುಷಿಗೆ ಇಬ್ಬರೂ ನಮಸ್ಕರಿ ಸಿದರು. ನಾಗವಲ್ಲಿಯು ನಡೆದುದನ್ನೆಲ್ಲಾ ಖುಷಿಗೆ ತಿಳಿಸಿದಳು. ಖುಷಿಯು
ಪುಟ:ಕಥಾವಳಿ.djvu/೨೮
ಈ ಪುಟವನ್ನು ಪರಿಶೀಲಿಸಲಾಗಿಲ್ಲ.