ළු ಒಬ್ಬರನ್ನೂ ಹತ್ತಿರ ಸೇರಿಸದೆ ಇರಲು, ಒಬ್ಬ ವೀರನು ಬಂದು ಮುಟ್ಟಿ ಯುದ್ಧಕ್ಕೆ ಕರೆದನು, ಅದಕ್ಕೂ ಸಿದ್ಧನಾಗಿ ನಿಂತು ಮೊಂಡು ತೋಳುಗ ೪೦ದ ಯುದ್ಧವನ್ನು ಮಾಡಿ ಶತ್ರುವನ್ನು ಬಲವಾಗಿ ಹೊಡೆದನು. ಅವನ ಒಂದು ಬಲವಾದ ಪೆಟ್ಟನ್ನು ಕೊಡಲು,ಶ್ರಾಂತನಾದ ಅಭಿಮನ್ಯುವ ಅಲ್ಲಿಯೇ ಪ್ರಾಣವನ್ನು ಬಿಟ್ಟನು. ಅವನ ಶತ್ರುವೂ ಅಭಿಮನ್ಯುವಿನ ಏಟಿನಿಂದ ರಕ್ತ ವನ್ನು ಕಾರಿ ಪ್ರಾಣವನ್ನು ಬಿಟ್ಟನು, ಬಾಲಕರಲ್ಲಿ ಶೂರನೆಂದರೆ ಇವನೇ ಅಲ್ಲವೆ ? ೨೦, ಶಿವಾಜಿ ಮಹಾರಾಜ. ಸುಮಾರು ಇನ್ನೂರ ಐವತ್ತು ವರ್ಷಗಳ ಹಿಂದೆ ಮಹಾರಾಷ್ಟ್ರದೇಶ ವನ್ನು ಶಿವಾಜಿ ಮಹಾರಾಜನು ಆಳುತ್ತಿದ್ದನು. ಇವನು ಪಾಜಿಯ ಮಗನು. ಮಗುವಾಗಿದ್ದಾಗಲೇ ಇವನ ತಂದೆಯು ಇವನನ್ನು ಸಾಕಿ ಸಲುಹುವುದಕ್ಕೆ ತಕ್ಕ' ಏರ್ಪಾಟನ್ನು ಮಾಡಿ ಇನೆ ಎಂಬ ಒಂದು ಪಟ್ಟಣದಲ್ಲಿ ಬಿಟ್ಟಿದ್ದನು. ಅಲ್ಲಿ ಹುಡುಗರ ಗುಂಪಿನಲ್ಲೆಲ್ಲಾ ಶಿವಾಜಿಯ ಮುಂದಾಳಾಗಿದನು. ಯಾವ ಆಟದಲ್ಲಿಯೂ ಶಿವಾಜಿಯೇ ಮುಂದು ; ಇವನು ಯಾವ ಕುದುರೆ ಯನ್ನಾದರೂ ಏರಲು ಶಕ್ತನಾಗಿದ್ದನು. ಗುರಿ ಕಟ್ಟಿ ಹೊಡೆವುದರಲ್ಲಿ ಶಿವಾ ಜಿಗೆ ಸಮುರಾದ ಬಾಲಕರೇ ಆ ಊರಲ್ಲಿರಲಿಲ್ಲ. ಕತ್ತಿ ಕಠಾರಿಗಳನ್ನು ತಿರು ಗಿಸುವುದರಲ್ಲಿ ಶಿವಾಜಿಯು ನಿಪ್ರಣನಾಗಿದ್ದನು. ಇವನಿಗೆ ರಾಮಾಯಣ ಮಹಾಭಾರತಗಳನ್ನು ಕೇಳುವುದರಲ್ಲಿ ಬಹು ಆದತ. ಆ ಪರಾಣಗಳಲ್ಲಿ ಪ್ರಸಿದ್ಧಿಗೊಂಡ ಶೂರರಂತೆ ತಾನೂ ಹೆಸರುವಾಸಿಯಾಗಬೇಕೆಂಬುದು ಶಿವಾ ಜಿಯ ಆಶೆ, ಅಲ್ಲದೆ ಆಗಿನ ಕಾಲದಲ್ಲಿ ಪ್ರಬಲರಾಗಿದ್ದ ತುರುಕರನ್ನು ಹಿಂದೂ ದೇಶದಿಂದ ಓಡಿಸಿ, ಹಿಂದೂ ರಾಜ್ಯವನ್ನೂ , ಹಿಂದೂಧರವನ್ನೂ ಸ್ಥಾಪಿಸ ಬೇಕೆಂಬುದೇ ಶಿವಾಜಿಯ ಸಂಕಲ್ಪ. ತನಗೆ ಪ್ರಾಯವ ಬರಲು, ಶಿವಾಜೆಯು ತನ್ನ ಜತೆಗಾರರನ್ನು ಸೇರಿ ಸಿಕೊಂಡು, ಹತ್ತಿರ ಹತ್ತಿರ ಇದ್ದ ಹಳ್ಳಿ ಹಳ್ಳಿಗಳ ಮೇಲೆ ಬಿದ್ದು ಅವನ್ನು ಸ್ವಾಧೀನ ಮಾಡಿಕೊಂಡು, ಮೆಲ್ಲನೆ ಒಂದು ಕೋಟೆಯನ್ನು ಹಿಡಿದು ಅಲ್ಲಿ
ಪುಟ:ಕಥಾವಳಿ.djvu/೪೩
ಈ ಪುಟವನ್ನು ಪರಿಶೀಲಿಸಲಾಗಿಲ್ಲ.