6ܦ ಸಿಕ್ಕಿದ ಹಣದಿಂದ ಮದ್ದು ಗುಂಡುಗಳನ್ನು ಕೊಂಡುಕೊಂಡು, ಹೆಚ್ಚು ಹೆಚ್ಚು ಜನರನ್ನು ಸೇರಿಸಿ, ತನ್ನ ದೇ ಒಂದು ಬಲವಾದ ಕೋಟಿಯನ್ನು ಕಟ್ಟಿ ಪ್ರಬಲನಾದನು. ಇವನ ಹಾವಳಿಯನ್ನು ಕೇಳಿ ಇವನನ್ನು ಅಡಗಿಸ ಬೇಕೆಂದು ಮಗ್ಗುಲ ರಾಜ್ಯದ ತುರುಕರಾಜರು ಎಷ್ಟೋ ಪ್ರಯತ್ನ ಪಟ್ಟರು. ಇವನ ತಂದೆಯನ್ನು ಸೆರೆಯಲ್ಲಿಟ್ಟರು. ಯಾವುದಕ್ಕೂ ಜಗ್ಗಲಿಲ್ಲ. ತಂದೆ ಯನ್ನು ಬಿಡಿಸಿಕೊಂಡನು. ಕೊನೆಗೆ ಒಂದು ದೊಡ್ಡ ಸೈನ್ಯವನ್ನೂ ಕಳು ಹಿಸಿದರು. ಆ ಸೈನ್ಯವ ತನ್ನ ಸೈನ್ಯಕ್ಕಿಂತಲೂ ಒಲವಾಗಿದ್ದುದನ್ನು ನೋಡಿ, ಶಿವಾಜಿಯು ತನಗೆ ಜಯವಾಗಲಾರದೆಂಬ ತಿಳದು, ಉಪಾಯದಲ್ಲಿ ತುರು ಕರ ಸೇನಾಧಿಪತಿಯನ್ನು ಬೇರೆ ಬರುವಂತೆ ಹೇಳಿ ಕಳುಹಿಸಿ ತಾನು ಶರಣಾ ಗತನಾಗುವೆನೆಂದು ತಿಳಿಸಿ, ಅವನು ಒಬ್ಬನೇ ಬಂದಾಗ ಅವನಮೇಲೆ ಬಿದ್ದು ಅವನ ಹೊಟ್ಟೆಯನ್ನು ಬಗಿದು ಕೊಂದು ಶತ್ರುಗಳನ್ನು ಓಡಿಸಿದನು. ತರುವಾಯ ದೆಹಲಿ ಚಕ್ರವರ್ತಿಯು ಶಿವಾಜಿಯನ್ನು ಅಡಗಿಸಬೇ ಕೆಂದು ಒಂದು ದೊಡ್ಡ ಸೈನ್ಯವನ್ನು ಕಳುಹಿಸಿದನು. ಆ ಸೈನ್ಯದವರು ಬಂದು ಇವನ ಪಟ್ಟಣವಾದ ಪ್ರನೆಯನ್ನು ಆಕ್ರಮಿಸಿಕೊಂಡು, ಇವನ ಮನೆ ಯಲ್ಲಿಯೇ ಅವರ ಸೇನಾಧಿಪತಿಯು ಇಳಿದುಕೊಂಡನು, ಶಿವಾಜಿಯ ಇದನ್ನು ಕೇಳಿ ಮದುವೆಯ ಮೆರೆವಣಿಗೆಯ ಎರೊಂದಿಗೆ ಸೇರಿ ಶತ್ರುಸೇನಾ ಧಿಸತಿಯ ಮನೆಯೊಳಕ್ಕೆ ನುಗ್ಗಿದನು. ಆಗ ಅವನು ಬಹು ಕಷ್ಟದಿಂದ ತಲೆ ತಪ್ಪಿಸಿಕೊಂಡು ಹೋದನು. ಆದರೂ ಅವನ ಕಿರುಬೆರಳು ಕತ್ತರಿಸಿ ಹೋಯಿತು. ಸೇನಾಧಿಪತಿಯು ಹಿಂದಿರುಗಿ ಬರುವುದರಲ್ಲಿ ಶಿವಾಜಿಯು ಮಾಯವಾಗಿದ್ದನು. ಅನಂತರ ಶಿವಾಜಿಯು ದೆಹಲೀ ಚಕ್ರವರ್ತಿಯೊಡನೆ ಸ್ನೇಹವನ್ನು ಬೆಳಸಿ ದೆಹಲಿಗೆ ಹೋದನು, ಅಲ್ಲಿ ದರ್ಬಾರಿನಲ್ಲಿ ತನಗೆ ಅಪ ಮಾನವಾಯಿತೆಂದು ಸ್ವಲ್ಪ ಕೂಗಾಡಲು, ಚಕ್ರವರ್ತಿಯು ಶಿವಾಜೆಯನ್ನು ಸೆರೆಯಲ್ಲಿಟ್ಟನು. - ಆ ಸೆರೆಮನೆಯಲ್ಲಿದ್ದಾಗ ಶಿವಾಜಿಗೆ ನಿತ್ಯವೂ ಹಣ್ಣು, ಪಲ್ಯ, ಕಾಯಿ, ಹೂ ಇವನ್ನು ಬುಟ್ಟಿ ಬುಟ್ಟಿಯಲ್ಲಿ ಕಳುಹಿಸುತ್ತಿದ್ದರು. ಶಿವಾಜಿಯು ಬುಟ್ಟಿ, ಬುಟ್ಟಿಯಲ್ಲಿ ಹಣ್ಣನ್ನೂ , ತಿಂಡಿಯನ್ನೂ , ಸರದಾರರಿಗೂ ಬ್ರಾಹ್ಮಣರಿಗೂ ಕಳುಹಿಸುತ್ತಿದ್ದನು. ಒಂದು ದಿನ, ಹಣ್ಣಿನ ಬುಟ್ಟಿಯಲ್ಲಿ ತಾನೇ ಕುಳಿತು
ಪುಟ:ಕಥಾವಳಿ.djvu/೪೪
ಈ ಪುಟವನ್ನು ಪರಿಶೀಲಿಸಲಾಗಿಲ್ಲ.