೫೨ ಯಾದ ಹೆಂಡತಿಯು, ಮಧ್ಯಾಹ್ನ ದಲ್ಲಿ ಮಾಡಿದ ಅಡಿಗೆಯಲ್ಲಿ ಒಂದೊಂದು ಭಕ್ಷ್ಯವನ್ನಾಗಿ ಮಾಡೇ? ಚಿರೋಟಿಯೇ? ಜಿಲೇಬಿಯೇ? ಫೀವರೇ? ಎಂದು ಹೆಸರು ಹೇಳುತ್ತಾ, ಅದರದರ ರುಚಿಯನ್ನು ಸಾಧ್ಯವಾದಮಟ್ಟಿಗೂ ಒಣ್ಣಿಸುತ್ತಾ ಬಂದಳು, ಯಾವುದಕ್ಕೂ-ಅದಲ್ಲ, ಅದೂ ಅಲ್ಲ, ಅದೂ ಅಲ್ಲಎಂದು ಹೇಳುತ ಬಂದನು, ಅವಳಿಗೆ ಆಗ ಕಡುಬು ಜ್ಞಾಪಕಕ್ಕೆ ಬರಲಿಲ್ಲ. ಅದಲ್ಲದೆ ಕಡುಬನ್ನು ಯಾರು ತಾನೆ ತಿಂದು ಅರಿಯರು, ಅದೇನು ಅಂತಹ ಅಪೂರ್ವವಾದ ಭಕ್ಷ್ಯ: ಅಂತೂ ಅವಳು ಕಡುಬಿನ ಹೆಸರು ಹೇಳಲಿಲ್ಲ. ಹೀಗೆ ಮಾತನಾಡುತ್ತ ಹೋಗುತ್ತಿರುವಷ್ಟರಲ್ಲಿಯೇ ಹಳ್ಳಿಯು ಸಿಕ್ಕಿತು, ಅಲ್ಲಿ ಪ್ರತಿದಿನವೂ ಊಟಮಾಡುವಾಗಲೆಲ್ಲಾ 'ಎಲೆ, ಅದು ಮಾ ಡುವದಿಲ್ಲವೇನೆ?” ಎಂದು ಕೇಳುತಿದ್ದನು. ಅದೇನು ಮಾಡಬೇಕೋ ಅವ ಳಿಗೆ ತಿಳಿಯದೆ ಅವಳು “ಒಳ್ಳೆಯದು ನಾಳೆ ನಾಡಿದ್ದು,” ಎಂದು ದಿನವನ್ನು ಕಳೆಯುತ್ತಿದ್ದಳು, ಒಂದುದಿನ ಇವನು, ಊಟದ ಹೊತ್ತಿಗೆ ಏಳದೆ, ಅದನ್ನು ಮಾಡಿಹಾಕಿದಲ್ಲದೆ ನಾನು ಊಟಕ್ಕೆ ಬಾರೆನು” ಎಂದು ಹಟಹಿ ಡಿದನು, ಅವಳು ಎಷ್ಟೆಷ್ಟು ಉಪಚಾರ ಹೇಳಿದರೂ ಕೇಳದೆ ಇದ್ದುದರಿಂದ ಏನೂ ತೋರದೆ, “ಹೀಗೆ ನೀವ ಕೋಪಮಾಡಿಕೊಂಡರೆ ನಾನೇನು ಮಾಡ ಲಿ?” ಎಂದಳು. ಇಷ್ಟಕ್ಕೆ ಆ ಹಳ್ಳಿಯ ಬ್ರಾಹ್ಮಣನಿಗೆ ಕೋಪಬಂದು, ಫಟೇರ್, ಎಂದು ಅವಳ ಕಪಾಳಕ್ಕೆ ಒಂದು ಏಟನ್ನು ಹಾಕಿದನು. ಅಷ್ಟರಲ್ಲಿಯೇ ಮಗ್ಗುಲ ಮನೆಯ ಹೆಂಗಸು ನೀರಿಗೆ ಬಂದಳು. ಈಕೆಯು ಬೇಗ ಕಣ್ಣೀರನ್ನು ಒರಸಿಕೊಂಡು ನಿಂತಿರಲು, ಈಕೆಯನ್ನು ನೋಡಿ “ಇದೇನಮ್ಮ ಇದು! ಕಡುಬು ಊದಿದಹಾಗೆ ನಿಮ್ಮ ಗಲ್ಲವೂ ಊದಿ ದೆಯಲ್ಲ?” ಎಂದಳು. ಆಗ ಒಳಗಿದ್ದ ಬ್ರಾಹ್ಮಣನು ಬೇಗ ಎದ್ದು ಬಂದು, “ ಅದು ಕಾಣೆ, ಅಗೋ ಅದು! ಕಡುಬು, ಕಡುಬು ಮಾಡಿಹಾಕು' ಎಂ ದನು. ಅದಕ್ಕೆ ಹೆಂಡತಿಯು ಮುಗುಳುನಗೆ ನಗುತ್ತಾ, “ಅಗತ್ಯವಾಗಿ ನಾಳೆ ಮಾಡಿ ಹಾಕುತ್ತೇನೆ. ಈಗ ಊಟಕ್ಕೆ ಎಳಿ” ಎನ್ನಲು, ಹಸಿದಿದ್ದ ಬ್ರಾಹ್ಮಣನು ಎದ್ದು, ಕಡುಬು ನಾಳೆ ಸಿಕ್ಕುವುದೆಂಬ ಸಂತೋಷದಿಂದ ಊಟ ಮಾಡಿದನು. ಕಡುಬಿಗೆ ದವಡೆ ಪೆಟ್ಟು ಮಲವಾಯಿತು.
ಪುಟ:ಕಥಾವಳಿ.djvu/೬೭
ಈ ಪುಟವನ್ನು ಪರಿಶೀಲಿಸಲಾಗಿಲ್ಲ.