೫೩ ೩೫, ಹುಡುಗನ ಗಿಣಿಯ. “ಒಂದು ಮನೆಯಲ್ಲಿ ಗಂಡಹೆಂಡಿರಿಬ್ಬರು ವಾಸವಾಗಿದ್ದರು. ಅವರಿಗೆ ಬಹುಕಾಲ ಮಕ್ಕಳಿರಲಿಲ್ಲ. ಆದುದರಿಂದ ಒಂದು ಮುದ್ದಾದ ಅರಗಿಣಿಯ ನು ಮನೆಯಲ್ಲಿ ಸಾಕುತಿದ್ದರು. ಆ ಗಿಣಿಗೆ ಮಾತನ್ನು ಕಲಿಸುವುದರಲ್ಲಿ ಯೇ ಅ ಗಂಡಹೆಂಡಿರು ಕಾಲವನ್ನು ಕಳೆಯುತ್ತಿದ್ದರು. ಆ ಗಿಣಿಯನ್ನು ರಾಮನೆಂದು ಕರೆಯುತಿದ್ದರು, ರಾಮ! ಎಲ್ಲಿದ್ದೀಯೆ? ಎಂದು ಕೇಳಿದೆ ಡನೆ ಅದು ಎಲ್ಲಿದ್ದರೂ “ನಾನು ಇಲ್ಲಿದ್ದೇನೆ” ಎಂದು ಉತ್ತರ ಕೊಡುವಂತೆ ಕಲಿಸಿದ್ದರು. ಈ ಗಿಣಿಯೊಡನೆ ಆಡುವುದಕ್ಕೆ ನೆರೆಹೊರೆಯ ಹುಡುಗರು ಬರುತ್ತಿ ದ್ದರು, ಅವರಲ್ಲಿ ಒಬ್ಬ ಹುಡುಗನು ಈ ಗಿಣಿಯನ್ನು ಹೇಗಾದರೂ ಕದ್ದು ಕೊಂಡು ಹೋಗಬೇಕೆಂದು ಇದ್ದನು. ಒಂದು ದಿನ ಆ ಹುಡುಗನು ಮನೆ ಯ ಯಜಮಾನನು ಇಲ್ಲದಿರುವ ಸಮಯವನ್ನು ನೋಡಿ ಆ ಮನೆಗೆ ಬಂದು, ಪಂಜರದಲ್ಲಿ ಇದ್ದ ಗಿಣಿಯನ್ನು ತೆಗೆದುಕೊಂಡು ಜೇಬಿನಲ್ಲಿಟ್ಟು ಕೊಂಡು ಹೊರಟುಹೋಗುತಿದ್ದನು. ಅಷ್ಟರಲ್ಲೇ ಆ ಮನೆಯ ಯಜಮಾ ನನು ಬಂದು, ಈ ಹುಡುಗನು ಇದ್ದುದನ್ನು ನೋಡಿ, ಅವನ ಮನಸ್ಸಿಗೆ ಸಂತೋಷಪಡಿಸಬೇಕೆಂದು “ರಾಮ; ಎಲ್ಲಿದ್ದೀಯೆ” ಎಂದು ಕೂಗಿದನು. ಆ ಹುಡುಗನ ಜೇಬಿನಲ್ಲಿದ್ದ ಗಿಣಿಯು ಅಲ್ಲಿಂದಲೇ 'ನಾನು ಇಲ್ಲಿದ್ದೇನೆ” ಎಂ ದಿತು. ಆ ಹುಡುಗನ ಮುಖವು ಕೆಟ್ಟಿತು; ಕಳ್ಳನು ಸಿಕ್ಕಿಬಿದ್ದನು. ೩೬. ಕೆಲಸದ ಹೆಂಗಸರೂ ಕೊಳಿಯೂ. ಒಂದು ಊರಿನಲ್ಲಿ ಒಬ್ಬ ಮುದುಕಿ ಇದ್ದಳು, ಅವಳು ಅಡಿಗೆ ಕೆಲಸ ವನ್ನು ಮಾಡಲಿಕ್ಕೆ ಇಬ್ಬರು ಹೆಂಗಸರನ್ನು ಇಟ್ಟು ಕೊಂಡಿದ್ದಳು. ಬೇಗ ಎದ್ದು ಅಡಿಗೆ ಮಾಡಲೆಂದು, ಆ ಮುದುಕಿಯು ಮೊದಲ ಕೋಳಿ ಕೂಗು ಇಲೂ ಅವರಿಬ್ಬರನ್ನೂ ಕೆಲಸಕ್ಕೆ ಎಬ್ಬಿಸುತಿದ್ದಳು. ಅವರಿಗೆ ಆ ಹೊತ್ತಿ ನಲ್ಲಿ ಬಹು ನಿದ್ರೆ, ಅವರಿಬ್ಬರೂ ಎದ್ದಲ್ಲದೆ ಮುದುಕಿಯು ಭಡಳು, ಗಣ ಗುಟ್ಟುತ್ತಾ ಎದ್ದು, ಆ ಇಬ್ಬರು ಹೆಂಗಸರೂ ಕೆಲಸ ಮಾಡುತಿದ್ದರು.
ಪುಟ:ಕಥಾವಳಿ.djvu/೬೮
ಈ ಪುಟವನ್ನು ಪರಿಶೀಲಿಸಲಾಗಿಲ್ಲ.