೫೬ ೩೮, ಲವಕುಶರ ಕಾಳಗ. ಲವಕುಶರು ಶ್ರೀರಾಮನ ಮಕ್ಕಳು, ಇವರು ವಾಲ್ಮೀಕಿ ಋಷಿಗಳ ಆಶ್ರಮದಲ್ಲಿ ಹುಟ್ಟಿ, ತಾಯಿಯಾದ ಸೀತಾದೇವಿಯೊಡನೆ ಬೆಳೆಯುತ್ತಿದ್ದರು. ಆಶ್ರಮದಲ್ಲಿಯೇ ಇವರು ಇದ್ದರಾದುದರಿಂದ ಶ್ರೀರಾಮನನ್ನು ನೋಡಿದುದೇ। ಇಲ್ಲವ, ಅಲ್ಲಿಯ ಬ್ರಾಹ್ಮಣರ ಹುಡುಗರೊಡನೆ ಇವರು ಆಟಪಾಟಗಳ ನ್ಯಾಡಿಕೊಂಡು, ಸಮಿತ್ತು, ದರ್ಭೆ ಇವುಗಳನ್ನು ತಂದುಕೊಂಡು ಇದ್ದರೂ ವಾಲ್ಮೀಕಿ ಋಷಿಗಳ ಅನುಗ್ರಹದಿಂದ ಕ್ಷತ್ರಿಯರಾದ ಲವಕುಶರಿಗೆ ಧನುರ್ವಿ ದೈಯು ಚೆನ್ನಾಗಿ ಬರುತ್ತಿತ್ತು: ಒಂದಾನೊಂದುದಿನ ಆ ಆಶ್ರಮಕ್ಕೆ ಒಂದು ಕುದುರೆ ಬಂದಿತು, ಆ ಕುದುರೆಯು ಬಹು ಚೆನ್ನಾಗಿರುವುದನ್ನು ನೋಡಿ, ಋಷಿಕುಮಾರರು ಅದರ ಹತ್ತಿರಕ್ಕೆ ಹೋದರು. ಲವನೂ ಹೋದನು. ಆಗ ಆ ಕುದುರೆಯ ಹಣೆಯ ಮೇಲೆ ಭಂಗಾರದ ಪಟ್ಟಿಯಲ್ಲಿ “ ಶ್ರೀರಾಮನ ಅಶ್ವವು ಇದು. ಶ್ರೀರಾಮನ ಆಳುವಿಕೆಗೆ ಒಪ್ಪದೆ, ಶ್ರೀರಾಮನೊಡನೆ ಯುದ್ಧ ಮಾಡಿ ಸೋಲಿಸಲು ಧೈರ್ಯವುಳ್ಳವರು ಇದನು ಕಟ್ಟಬಹುದು, ಅ೦ತಹ ಧೈರ್ಯ ಎಲ್ಲದವರು, ಶ್ರೀರಾಮನಿಗೆ ಕಪ್ಪಕಾಣಿಕೆಗಳನ್ನು ಒಪ್ಪಿಸಿ, ಕುದು ರೆಯ ಗೋಜಿಗೆ ಹೋಗದೆ, ಸುಮ್ಮನಿರುವುದು” ಎಂದು ಬರೆದಿತ್ತು, ಅದನ್ನು ಓದಿಕೊಂಡು ಅವನು, ಕುದುರೆ ಯೇನೋ ಚೆನ್ನಾಗಿದೆ, ನಾವಂತೂ ಇದ ನ್ನು ಕಟ್ಟಿ ಹಾಕೋಣ! ಯಾರು ಬರುವರೋ ನೋಡೋಣ! ಎಂದು ದರ್ಭೆ ಯಲ್ಲಿ ಒಂದು ಹಗ್ಯವನ್ನು ಹೊಸೆದು ಕುದುರೆಯನ್ನು ಕಟ್ಟಿದನು. ಹತ್ತಿ ರಿದ್ದ ಬ್ರಾಹ್ಮಣರ ಹುಡುಗರು, “ಬೇಡವಯ್ಯ! ನಮಗೀತಂಟೆ ಬೇಡವಯ್ಯ ಬಿಟ್ಟುಬಿಡು! ನಮಗಿದು ಸರಿಯಲ್ಲ!” ಎನ್ನುತ್ತಿದ್ದರೂ ಅವನು ಲಕ್ಷ್ಯವಾ ಡದೆ, ಕುದುರೆಯನ್ನು ಕಟ್ಟಿಯೇ ಕಟ್ಟಿದನು. ಅಷ್ಟರಲ್ಲಿಯೇ ಕುದುರೆಯ ರಕ್ಷಣೆಗಾಗಿ ಬರುತ್ತಿದ್ದ ಸೈನಿಕರು, ಈ ಹುಡುಗರು ಕುದುರೆಯನ್ನು ಕಟ್ಟಿದುದನ್ನು ನೋಡಿ, “ಎಲೋ! ಆ ಹಾರು ವ ಹೈಕಳಿಗೆ ಎರಡು ಏಟುಗಳನ್ನು ಕೊಟ್ಟು ಕುದುರೆಯನ್ನು ಬಿಚ್ಚಿಕೊಂಡು ನಡೆಯಿರೆ” ಎಂದರು. ಒಬ್ಬನು ಕುದುರೆಯನ್ನು ಬಿಚ್ಚಲು ಹೋದನು. ಲವನು, ಅವರನ್ನು ನೋಡಿ “ದೂರ ನಿಲ್ಲಿ, ಕುದುರೆಯನ್ನು ಮುಟ್ಟಿರಿ! ನಮ್ಮ ಆಶ್ರಮದಲ್ಲಿ ಕುದುರೆ ಇದೆ” ಎಂದನು. ಅವರು ಧಿಕ್ಕರಿಸಿ
ಪುಟ:ಕಥಾವಳಿ.djvu/೭೧
ಈ ಪುಟವನ್ನು ಪರಿಶೀಲಿಸಲಾಗಿಲ್ಲ.