ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೭ ಮು೦ದೆರಡು ಹೆಜ್ಜೆ ಯಿಡಲು,ಲವನು ಅಲ್ಲಿ ಬಿದ್ದಿದ್ದ ದರ್ಭೆಯನ್ನು ಮಂತ್ರಿಸಿ, ಅವರಿಬ್ಬರ ಕಡೆಗೂ ಎಸೆದನು. ಒಬ್ಬನ ಕೈಗಳೂ ಇನ್ನೊಬ್ಬನ ಕಾಲುಗಳೂ ಕತ್ತರಿಸಿ ಹೋದುವ, ಈ ವರ್ತಮಾನವು, ಲಕ್ಷ್ಮಣನ ಮಗನಾದ ಚಂದ್ರ ಕೇತುವಿಗೆ ತಿಳಿಯಿತು, ಅವನು ಆಶ್ಚರ ಪಟ್ಟು ಬಂದು, ಅವನನ್ನು ನೋಡಿ, ಏನೋ ಒಂದು ವಿಧವಾದ ಪ್ರೀತಿಯುಂಟಾಗಲು, ಇವನು ಮಾಡಿದ ತಪ್ಪನ್ನು ಕ್ಷಮಿಸಿ, ಮಗು ! ನೀನು ಯಾರು ? ಕುದುರೆಯನ್ನು ಏಕೆ ಕಟ್ಟಿದೆ ? ನಿನಗೆ ರಾಜರ ಕುದುರೆಯನ್ನು ಕಟ್ಟಿಕೊಂಡು ಏನು ಪ್ರಯೋಜನ ?” ಎಂದನು. ಅದಕ್ಕೆ ಲವನು 'ನಾನು ಯಾರಾದರೇನಪ್ಪ ! ನಮ್ಮ ಆಶ್ರಮಕ್ಕೆ ಕು ದುರೆ ಬಂದಿತು, ನಾನು ಕಟ್ಟಿದೆನು, ನನ್ನ ಅಪ್ಪಣೆ ಇಲ್ಲದೆ ಅವರು ಬಿಚ್ಚಲು ಬಂದರು, ಅವರನ್ನು ಹೊಡೆದೆನು. ನಾನು ಕುದುರೆಯನ್ನು ಕೊಡುವನಲ್ಲ. ಹೋಗು' ಎಂದನು. ಆಗ ಚಂದ್ರಕೇತುವು ಎಷ್ಟು ಸಮಾಧಾನ ಹೇಳಿದರೂ ಅವನು ಕೇಳದೆ ಹೋದುದರಿಂದ, ಬಾಣದಿಂದ ಹೊಡೆಯಲು ಆರಂಭಿಸಿದ ನು. ಅವನೂ ಮಂತ್ರ ಶಕ್ತಿಯಿಂದ ಅವನ ಬಾಣಗಳನ್ನೆಲ್ಲಾ ದರ್ಭೆಯಿಂದ ಕತ್ತರಿಸಿ, ಚಂದ್ರಕೇತುವನೂ ಅವನ ಸೈನ್ಯವನ್ನೂ ಹೊಡೆದಟ್ಟಿದನು. - ಚಂದ್ರಕೇತುವು ಸೋತುಹೋದನೆಂದು ಶತ್ರುಘಾದಿಗಳು ಬಂದರು. ಅವರೆಲ್ಲರನ್ನೂ ಹೊಡೆದಟ್ಟಿದನು, ಆಗ ಅವರುಗಳಿಗೆ ಬಹು ಕೋಪ ಬಂದು ಅವನಿಗೆ ಮೂರ್ಛ ಬರುವಂತೆ ಹೊಡೆದು, ಅವನನ್ನು ಎತ್ತಿಕೊಂಡು ಕುದುರೆಯನ್ನು ಬಿಚ್ಚಿಕೊಂಡು ಹೋಗುತ್ತಿದ್ದರು. ಅಷ್ಟರಲ್ಲಿಯೇ, ಬೇರೆ ಎಲ್ಲಿಗೋ ಹೋಗಿದ್ದ ಕುಶನು ಬಂದು “ಎಲೈ ಖಳರಾ, ನಿಲ್ಲಿ ನಿಲ್ಲಿ. ನನ್ನ ಒಡಹುಟ್ಟಿದವನನ್ನು ನೀವು ಎತ್ತಿಕೊಂಡು ಹೋಗುವಾಗ ನಿಮ್ಮನ್ನು ಕತ್ತ ರಿಸಿ ಹಾಕುವೆನು' ಎಂದು, ಬಹು ತೀಕ್ಷ್ಮವಾದ ಬಾಣಗಳನ್ನು ಬಿಟ್ಟು, ಅವರನ್ನು ತಡೆದು, ಅವನನೂ ಕುದುರೆಯನ್ನೂ ಬಿಡಿಸಿಕೊಂಡು, ಲವ ನನ್ನು ಎಚ್ಚರಿಸಿ, ಅವನೊಡನೆ ಕೂಡಿ ಮತ್ತೆ ಯುದ್ಧಕ್ಕೆ ನಿಂತನು. ಶತ್ರು ಫ್ಯಾದಿಗಳಿಗೆ ಮಕ್ಕಳನ್ನು ನೋಡಿ, ಹೋಗಿ ಮುದ್ದಿಡಬೇಕೆಂಬಷ್ಟು ಮನ ಸ್ಸುಂಟಾಯಿತು, ಆದರೆ ಮಕ್ಕಳು ಯುದ್ಧ ಮಾಡುವುದರಲ್ಲಿ ಸಿದ್ದರಾಗಿ ದ್ದರೇ ಹೊರತು, ಸ್ನೇಹವನ್ನು ಮಾಡುವವರಾಗಿರಲಿಲ್ಲ. ಮತ್ತೆ ಯುದ್ಧ ವಾಯಿತು. ಆಗ ಶ್ರೀರಾಮನ ಸೈನ್ಯದವರೆಲ್ಲ ಸೋತುಹೋದರು. ಲವ ೮