೬೧. ಚೌತಿಯಲ್ಲಿ ವಿನಾ ಯಕನು, ಬೇಕಾದಷ್ಟು ಕಡುಬುಗಳನ್ನು ತಿಂದು (ವಿನಾ ಯಕನಿಗೆ ಕಾಯಿ ಕಡುಬಿನಲ್ಲಿ ತುಂಬ ಇಷ್ಟ), ಅವನ ವಾಹನವಾದ ಇಲಿ ಯಮೇಲೆ ಕುಳಿತು ಬರುವಾಗ, ಇಲಿಯು ಒಂದು ಹಾವನ್ನು ನೋಡಿ ಬೆದರಿ ಓಡಿತಂತೆ, ಹೊಟ್ಟೆಯ ಭಾರದಿಂದ ವಿನಾಯಕನು ಮುಗ್ಗುರಿಸಿದ ನಂತೆ, ಆಗ ಹೊಟ್ಟೆಯು ಒಡೆಯಲು ಹತ್ತಿರ ಹೋಗುತಿದ್ದ ಹಾವನ್ನು ಬಿಗಿದು ಹೋಟೆ ಗೆ ಕಟ್ಟಿದನಂತೆ. ಇದನ್ನು ನೋಡಿ ಚಂದ್ರನು ನಕ್ಕನಂತೆ. ಆಗ ಚಂದ್ರನಮೇಲೆ ಕೋಪಬಂದು, ವಿನಾಯಕನು ಚಂದ್ರನಿಗೆ ಶಾಪಕೊ ಟ್ಟನಂತೆ. ಶಾಪದಿಂದ ಕೂಡಿದ ಆ ಚಂದ್ರನನ್ನು ಭಾದ್ರಪದ ಶುದ್ಧ ಚೌತಿ ಯಂದು ಯಾರು ನೋಡುತ್ತಾರೋ ಅವರಮೇಲೆ ಇಲ್ಲದ ಕಳ್ಳತನವೇ ಮುಂತಾದ ಅಪವಾದ ಬರುವುದೆಂದು ಹೇಳುತ್ತಾರೆ. ೪೧, ಮರಗಳು ರಾಜನನ್ನು ಗೊತ್ತು ಮಾಡಿ ಕೊಂಡುದು. ಒಂದಾನೊಂದು ಕಾಲದಲ್ಲಿ ಮರಗಳೆಲ್ಲವೂ ಒಟ್ಟಾಗಿ ಸೇರಿ ತಮ್ಮಲ್ಲಿ ಒಂದಕ್ಕೆ ದೊರೆತನವನ್ನು ಕೊಡಬೇಕೆಂದು ಗೊತ್ತು ಮಾಡಿಕೊಂಡುವ, ಆಗ ಅವುಗಳು ತಮ್ಮಲ್ಲೆಲ್ಲಾ ದೊಡ್ಡದಾಗಿದ್ದ ಅರಳಿಯ ಮರಕ್ಕೆ ನಮಸ್ಕಾರ ಮಾಡಿ,-ಅರಳಿಯ ಮರವೇ ನೀನು ನಮಗೆಲ್ಲಾ ರಾಜನಾಗಿರುವೆಯಾ, ಎಂದು ಕೇಳಿದವ. ಅದಕೆ ಅರಳಿಯ ವರವ ಹೇಳಿದುದೇನೆಂದರೆ, ನಾನು ಎಂದರೇ ನು ! ನಿಮಗೆ ರಾಜನಾಗಿರುವದೆಂದರೇನು ? ನನ್ನ ಬುಡ ಮೊದಲ್ಗೊಂಡು ಕೊನೆಯವರೆಗೂ ದೇವತೆಗಳು ವಾಸವಾಗಿರುವರೆಂದು ಜನರು ತಿಳಿದು, ನನಗೆ ಮುಂಜಿ ಮದುವೆ ಮಾಡುವರು. ನನ್ನನ್ನು ಕಡಿದು ಹಾಕುವುದು ಪಾಪವೆಂದು ತಿಳಿದಿರುವರು. ತಮಗೆ ಬೇಕಾದುದನ್ನು ಕೊಡುವೆನೆಂದು ಜನರು ನನಗೆ ಪ್ರದಕ್ಷಿಣೆ ನಮಸ್ಕಾರ ಮಾಡುವರು; ನನ್ನ ಬುಡದ ಸುತ್ತ ಲೂ ನನ, ಪಾದಸೇವೆಯನ್ನು ಮಾಡಿಕೊಂಡು ಬಹುಮಂದಿ ನಾಗರಾ ಜರು ಹಗಲೂ ರಾತ್ರಿಯೂ ನಿಂತಿರುವರು, ಇಂತಹ ಗೌರವವನ್ನು ಬಿಟು, ಜಗರಾದ ನಿಮಗೆ ರಾಜನಾದರೆ ನನಗೆ ಬರುವದೇನು ? ನಾನು ಆಗಲಾರೆ, ಇನ್ಯಾರನ್ನಾದರೂ ನೋಡಿಕೊಳ್ಳಿ ಎಂದಿತು.
ಪುಟ:ಕಥಾವಳಿ.djvu/೭೬
ಈ ಪುಟವನ್ನು ಪರಿಶೀಲಿಸಲಾಗಿಲ್ಲ.