ಅಗ ಮರಗಳೆಲ್ಲವೂ ಆಲದ ಮರವನ್ನು ನೋಡಿ- ಆಲದಮರವೇ ? ಆಲದಮರವೇ ? ನಮ್ಮೆಲ್ಲರಿಗೂ ನೀನು ರಾಜನಾಗುವೆಯಾ ? ಎಂದು ಕೇಳಿ ದುವ, ಅದಕ್ಕೆ ಆಲದಮರವು ಚೆನ್ನಾಯಿತು, ನೀವು ಪರಾಣಗಳನ್ನು ಕೇಳಲಿಲ್ಲವೆ ? ಲೋಕಕ್ಕೆಲ್ಲಾ ಒಡೆಯನಾದ ಆ ಕೃಷ್ಣದೇವರು ಕ್ಷೀರಸ ಮುದ್ರದಲ್ಲಿ ಮುಳುಗಿಹೋಗದೆ ತೇಲಾಡುತ್ತಿರುವುದು ನನ್ನ ಸಹಾಯದಿಂ ದಲ್ಲವೆ ? ನನ್ನ ಮೇಲಲ್ಲವೇ ಆ ಶ್ರೀ ಕೃಷ್ಣನು ಮಲಗಿರುವುದು ; ಎಲ್ಲರಿ ಗಿಂತಲೂ ದೊಡ್ಡವನಾದ ಆ ದೇವರೇ ನನ್ನ ಆಶ್ರಯದಲ್ಲಿರುವಾಗ ನಿಮ್ಮ ನ್ನು ಕಟ್ಟಿಕೊಂಡು ನನಗೇನು ಕೆಲಸ ? ನನಗೆ ಅವಶ್ಯವಿಲ್ಲ-ಎಂದಿತು. ಬಳಿಕ ಅವು ಅಲ್ಲಿ ಕೋಮಲವಾಗಿ ಬೆಳೆದಿದ್ದ ಮಾವಿನಮರವನ್ನು, ನೋಡಿ, ಮಾವಿನಮರವೆ ! ನಿನ್ನ ಕೋಮಲವಾದ ಎಲೆಯ, ಮಧುರ ವಾದ ಹಣ ನಮ್ಮನ್ನು ಬೆರಗುಮಾಡಿರು ವುವ, ನನ್ನೊಡೆಯನಾಗುವ ದಕ್ಕೆ ನೀನಲ್ಲದೆ ಇನ್ನಾರುತಾನೆ ಚೆನ್ನಾಗಿರುವರು ; ಬಹುಕಾಲ ನಮಗೆ ನೀನು ದೊರೆಯಾಗಿದ್ದು ಕೊಂಡು ಸುಖವಾಗಿ ಕಾಪಾಡಬೇಕು ಎಂದು ವ. ಆಗ ಮಾವಿನಮರವೂ “ಎಲೈ ಜಡರೆ! ಎ೦ತಹ ಎ೦ತಹ ಕವಿಗಳ ಹೊಗಳುವಿ ಕೆಗೂ ನಾನು ಬೆರಗಾಗದಿದ್ದವನು ನಿಮ್ಮ ಸ್ತೋತ್ರಕ್ಕೆ ಬೆರಗಾಗುವೆನೆ? ನಾನು ಸ್ವಲ್ಪ ನಕ್ಕರೆ ಸಾಕು, ನನ್ನ ಸೊಬಗನ್ನು ಬಣ್ಣಿಸುವುದಕ್ಕೆ ಕವಿಗಳನ್ನು ಕರೆಯಲು ಕೋಗಿಲೆಗಳೇ ಭಟರಾಗಿ ಹೊರಡುವವ, ನಿಮ್ಮಿಂದ ನನಗೇ ನಾಗಬೇಕಾಗಿದೆ ? ಇನ್ನಾರನ್ನಾದರೂ ಕೇಳಿಕೊಳ್ಳಿಹೋಗಿ, ಎ೦ದಿತು. ಆಗ ಅಲ್ಲಿಯೇ ಇದ್ದ ತೇಗಿನ ಮರವನ್ನು ನೋಡಿ, ನಮ್ಮೆಲ್ಲರಿಗಿಂ ತಲೂ ಗಟ್ಟಿಯೆಂದು ಹೆಸರುಗೊಂಡಿರುವ ತೇಗವೇ ! ನೀನು ನಮ್ಮೊಡೆ ಯನಾಗಿರಬೇಕು, ಎಂದುವು, ಆಗ ತೇಗವ- ಅಯ್ಯೋ ? ನಾನೇನು ಮಾ ಡೇನು ! ನನ್ನ ಜನರು ಉಳಿಬಾಳಿಸುವಂತಿಲ್ಲ. ಹಿಂದೆ ಮನೆ ಮಠ ವನ್ನು ಕಟ್ಟುವುದಕ್ಕೆ ಮಾತ್ರ ನನ್ನನ್ನು ಉಪಯೋಗಿಸುತ್ತಿದ್ದರು. ಈಗ ಕುರ್ಚಿ, ಮೇಜು, ಬಂಡಿ ಇವೆಲ್ಲವನ್ನೂ ಮಾಡುವುದಕ್ಕೆ ನನ್ನನ್ನೇ ಕಡಿದು ಬಿಸಲಲ್ಲಿ ಒಣಗಿಸಿ, ಮಳೆಯಲ್ಲಿ ನೆನಸಿ, ಕೆತ್ತಿ, ಕೊಯಿದು, ಕೊಲ್ಲುತ್ತಿರು ವರು, ನನ್ನ ಶಕ್ತಿಯೇ ನನಗೆ ಮೃತ್ಯುವಾಗಿದೆ. ಹಡಗುಗಳನ್ನು ಕಟ್ಟು ವದಕ್ಕೆ ನನ್ನ ಸಮಾನರಿಲ್ಲವೆಂದು ತಿಳದು ನನ್ನನ್ನು ದೇಶ ದೇಶಾಂತರಕ್ಕೆ
ಪುಟ:ಕಥಾವಳಿ.djvu/೭೭
ಈ ಪುಟವನ್ನು ಪರಿಶೀಲಿಸಲಾಗಿಲ್ಲ.