೬೪ ನೀವು ಒYವುದಾದರೆ, ನಾನು ನಿಮಗೆ ದೊರೆಯಾಗಲೂ ಒಪ್ಪವೆ ನು ” ಎಂದಿತು, ಬೆಂಕಿಯನ್ನು ಕಾರುವೆನೆಂದು ಬೆದರಿಸಿದ ಬಿದಿರಿಗೆ ಬೆದರಿ, ಅದರ ದೊರೆತನಕ್ಕೆ ಒಪ್ಪಿ ಎಲ್ಲವೂ ತಮ್ಮ ತಮ್ಮ ಸ್ಥಳಗಳಿಗೆ ಹೋಗಿ ನಿಂತವ. ೪೨, ಬಲಿ ಚಕ್ರವರ್ತಿ. ಬಹುಕಾಲದ ಹಿಂದೆ ಬಲಿಚಕ್ರವರ್ತಿ ಎಂಬ ರಾಜಾಧಿರಾಜನೊಬ್ಬನು ಬಹು ಧರದಿಂದ ರಾಜ್ಯವನ್ನಾಳುತ್ತಿದ್ದನು. ಇವನನ್ನು ಕಂಡರೆ ದೇವಾ ನುದೇವತೆಗಳೆಲ್ಲರೂ ಹೆದರುತ್ತಿದ್ದರು. ಸ್ವರ್ಗಕವನ್ಮಾ ಳುವ ಇಂದ್ರನೂ ತನ್ನ ಸಿಂಹಾಸನವನ್ನು ಬಲಿಚಕ್ರವರ್ತಿಗೆ ಬಿಟ್ಟುಕೊಡಬೇಕಾಗಿ ಬಂದಿತು. ಆಗ ದೇವತೆಗಳೆಲ್ಲರೂ ಜಗದ್ರಕ್ಷಕನಾದ ವಿಷ್ಣು ವಿನಲ್ಲಿ ಮೊರೆಯಿಟ್ಟರು. ಆಗ ವಿಷ್ಣುವ-ನಿಮ್ಮನ್ನೆಲ್ಲಾ ಕಾಪಾಡಿ ನಿಮ್ಮ ನಿಮ್ಮ ಪದವಿಯನ್ನು ನಿಮನಿಮಗೆ ಕೊಡಿಸುವೆನು-ಎಂದು ಧೈರ್ಯವನ್ನು ಕೊಟ್ಟು ಕಳುಹಿಸಿದನು. ಬಲಿ ಚಕ್ರವರ್ತಿಯು ಇ೦ದ್ರಪದವಿಯನ್ನು ಅನುಭವಿಸುತ್ತಿದ್ದರೂ ಅಧರ್ಮವನ್ನು ಮಾಡುತ್ತಿರಲಿಲ್ಲ; ಸುಳ್ಳು ಹೇಳುತ್ತಿರಲಿಲ್ಲ ; ದೇವರ ಭಕ್ತನಾಗಿದ್ದನು. ಇಂ ತಹ ಮಹಾನುಭಾವನನ್ನು ನಾಶಮಾಡುವುದಕ್ಕೆ ದೇವರು ತಾನೇ ಒಪ್ಪಾನೆ? ಆಗ ದೇವರು ಕಶ್ಯಪ ಋಷಿಗಳ ಮಗನಾಗಿ ಹುಟ್ಟಿ, ಬ್ರಹ್ಮಚಾರಿ ಯಂತೆ ಕೃವ್ಯಾಜಿನವನ್ನು ಹೊದೆದು, ದಂಡವನ್ನೂ ಕಮಂಡಲವನ ಹಿಡಿದುಕೊಂಡು, ಬಲಿಚಕ್ರವರ್ತಿಯು ಯಜ್ಞ ಮಾಡುತ್ತಿದ್ದ ಸ್ಥಳಕ್ಕೆ ಬಂದ ನು, ಯಜ್ಞ ಮಾಡತಕ್ಕ ರಾಜನು, ಬ್ರಾಹ್ಮಣರು ಬೇಡಿದುದನ್ನು ಕೊಡ ಬೇಕಾದುದು ಧರ್ಮವ್ಯ. ಹೀಗಿರುವಾಗ ವಾಮನಮೂರ್ತಿಯು ಬಂದು ಬಲಿಚಕ್ರವರ್ತಿಯನ್ನ ಮರು ಹಜ್ಜೆ ಭೂಮಿಯನ್ನು ಬೇಡಿದನು, ಬೇಡಿ ದುದನ್ನು ಕೊಡತಕ್ಕ ವ್ರತವುಳ್ಳ ಬಲಿಯು, “ ಅಗತ್ಯವಾಗಿ ಕೊಟ್ಟೆನು ತೆಗೆ ದು ಕೋ, ' ಎಂದನು. ಬಲಿಚಕ್ರವರ್ತಿಗೆ ಗುರುವಾದ ಶುಕ್ಕಾಚಾರರು, ಕೊಡಬೇಡವೆಂದು ಎಷ್ಟೋ ವಿಧವಾಗಿ ತಿಳಿಸಿದರು. ಬಲಿಚಕ್ರವರ್ತಿಯು, ತಾನು ಕೊಟ್ಟ ಭಾಷೆಯನ್ನು ತಪ್ಪೆನೆಂದು, ದಾನವನ್ನು ಕೊಟ್ಟೆ ಕೊಟ್ಟನು. ದೇವರಾದ ವಾಮನನು, ಅದು ತಾಕಾರವನ್ನು ತಾಳಿ, ಭೂಮಿಯ «ಲ್ಲಾ ಒಂದು ಹಜ್ಜೆಯೆಂದು ಅಳೆದನು ; ಆಕಾಶವನ್ನ ಲ್ಲಾ ಒಂದು ಹಜ್ಜೆ
ಪುಟ:ಕಥಾವಳಿ.djvu/೭೯
ಈ ಪುಟವನ್ನು ಪರಿಶೀಲಿಸಲಾಗಿಲ್ಲ.