೩೩ ಓಡಾಡಿಸುತ್ತಿರುವರು. ಹೀಗಿರುವಾಗ ನಾನು ನಿಮಗೆ ಏನು ಸಹಾಯ ಮಾಡೇನು ! ಇನ್ಯಾರನ್ನಾದರೂ ಕೇಳಿಕೊಳ್ಳಿ - ಎಂದಿತು. ಅಲ್ಲಿದ್ದ ಮರಗಳಲ್ಲೆಲ್ಲಾ ಉದ್ದವಾದ ತೆಂಗಿನಮರವನ್ನು ನೋಡಿ, ನೀನು ನಮಗೆ ದೊರೆಯಾಗಿ ಇರೆಂದು ಕೇಳಲು, “ಎಲೈ ಸ್ನೇಹಿತರಿರಾ ; ನಾನು ಎಲ್ಲರಿಗಿಂತಲೂ ದೊಡ್ಡವನೆಂದು ತಿಳಿದು, ನೀವು ನನ್ನ ನು ದೊರೆ ಯಾಗಿರೆಂದು ಕೇಳಿದುದು ನನಗೆ ಬಹಳ ಸಂತೋಷ, ಆದರೆ ನಾನು ಸಾ ಲಗಾರನೆಂಬುದು ನಿಮಗೆ ತಿಳಿಯದೆಂದು ಕಾಣುತ್ತದೆ. ನಾನು ಚಿಕ್ಕವ ನಾಗಿದ್ದಾಗ ಜನರು ನನಗೆ ನೀರನ್ನು ಕೊಟ್ಟು ಸಾಕಿದರು. ಅವರು ಮಾಡಿದ ಉಪಕಾರವನ್ನು ನನ್ನ ತಲೆಯ ಮೇಲೆ ಹೊತ್ತಿರುವೆನು. ಈಗೀಗ ಅವರು ಕೊಟ್ಟ ಸಾಲವನ್ನು ಪ್ರತಿವರ್ಷದಲ್ಲಿ ನಾನಾಬಗೆಯಾಗಿ ತೀರಿಸು ತಿರುವೆನು. ಜೀತಗಾರನಂತೆ ನಾನೇ ದುಡಿಯುತ್ತಿರುವಾಗ ನನಗೆ ಬೆರೆ ತನವೆಂತಹುದು, ನನ್ನಂತಿರುವ ಸಾಲಗಾರರು ದೊರೆತನಕ್ಕೆ ಬಂದರೆ ನಿಮಗೆ ಬಹುಕೇಡು ಉಂಟಾದೀತು. ಆದುದರಿಂದ ನೀವು ಚೆನ್ನಾಗಿ ಯೋ ಚಿಸಿ ತಕ್ಕವರಿಗೆ ದೊರೆತನವನ್ನು ಕೊಡಿ, ಎಂದು ತೆಂಗಿನಮರವೂ ಅವು ಗಳಿಗೆ ವಿವೇಕವನ್ನು ಹೇಳಿತು. ಆಗ ಮರಗಳೆಲ್ಲವೂ ಇನ್ನು ಯಾರನ್ನು ಕೇಳಬೇಕೆಂದು ಯೋಚಿಸುತ ಇದ್ಘಾಗ ಗುಂಪಾಗಿ ಬೆಳೆದಿದ್ದ ಬಿದಿರ ಮೆಳೆಯನ್ನು ನೋಡಿ, “ನೀನು ವಂಶ ಪರಂಪರೆಯಾಗಿ ನಮ್ಮನ್ನು ಕಾಪಾಡಿಕೊಂಡು ಬರಬೇಕು ಎಂದು ಬೇಡಿಕೊಂಡವು, ಆಗ ಬಿದಿರು ತನ್ನಲ್ಲಿಯೇ, ನಾನು ಜಾತಿಯಲ್ಲಿ ಹುಲ್ಲು ದರೂ ನನ್ನ ವಂಶಾವಳಿ ಏನೋ ಬಲವಾಗಿಯೇ ಇದೆ ; ಗಿಡಗಳ ಗುಂಪಿನ ಲ್ಲೆಲ್ಲಾ ನಾನು ಸಾಧಾರಣವಾಗಿ ಇದ್ದೇ ಇರುತ್ತೇನೆ, ಈಗ ಈ ಮರಗ ಳೆಲ್ಲವೂ ತಮ್ಮಲ್ಲಿ ಒಬ್ಬ ದೊರೆ ಇರಬೇಕೆಂದು ಅಪೇಕ್ಷಿಸುತ್ತಿರುವವ್ರ, ನನ್ನ ಮಾತಿಗೆ ಇವು ಒಪ್ಪುವುದಾದರೆ ನಾನು ಏಕೆ ದೊರೆಯಾಗಿರಬಾರದು, ಎಂ ದು ಯೋಚಿಸಿ, ಮರಗಳನ್ನು ಕುರಿತು, “ನೀವು ನನಗೆ ಕೊಟ್ಟ ಮತ್ಯಾದೆಗೆ ನಾನು ತುಂಬ ಕೃತಜ್ಞನಾಗಿರುವೆನು, ನನ್ನ ಮಾತಿನಂತೆ ನೀವು ನಡೆವವ ರೆಗೂ ನಿಮಗೆ ನನ್ನಿಂದ ತೊಂದರೆಯುಂಟಾಗಲಾರದು, ಮಾತಿಗೆ ಮಾರಿ ನಡೆದರೆ ನಾನು ಬೆಂಕಿಯನ್ನು ಕಾರಿ ನಿಮ್ಮನ್ನೆಲ್ಲಾ ಸುಟ್ಟು ಬಿಡುವನು. ಇದಕ್ಕೆ
ಪುಟ:ಕಥಾವಳಿ.djvu/೭೮
ಈ ಪುಟವನ್ನು ಪರಿಶೀಲಿಸಲಾಗಿಲ್ಲ.