೭೬ ಕೇಳೋಣವೆಂದು, ಆ ಮುದುಕನ ಹತ್ತಿರಕ್ಕೆ ಹೋಗಿ ನಮಸ್ಕಾರಮಾಡಿ, “ ಅಯ್ಯಾ, ನೀನು ಇಷ್ಪಮಂಜರಿಯ ಸಮಾಚಾರವನ್ನು ಬಲ್ಲೆ ಯಾ ?” ಎಂ ದು ಕೇಳಿದನು. ಅದಕ್ಕೆ ಆ ಮುದುಕನು 'ನನಗೆ ಸ್ವಲ್ಪ ಮಟ್ಟಿಗೆ ತಿಳಿದಿರು ವದು ; ನಾನು ತಿಳಿದಿರುವುದನ್ನು , ಮುಚ್ಚಿಡುವುದು ಏಕೆ : ವಂಚನೆಯಿ ಲ್ಲದೆ ನಿನಗೆ ಹೇಳುವೆನು, ಕೇಳು :- ಇಲ್ಲಿಗೆ ಕಾಣುವ ಮೂರನೆಯ ಬೆಟ್ಟದ ತುದಿಯಲ್ಲಿ ಒಂದು ಕೋಟೆ ಇರುವುದು, ಅಲ್ಲಿ ಒಬ್ಬ ರಾಕ್ಷಸನು ಅವಳನ್ನು ಸೆರೆಹಾಕಿಸಿರುವನು, ಆ ರಾ ಕ್ಷಸನು ಪುಷ್ಪಮಂಜರಿಯನ್ನು ಬಹು ಎಚ್ಚರಿಕೆಯಿಂದ ಕಾದುಕೊಂಡಿರು ವನು. ಕೋಟೆಯ ಸುತ್ತಲೂ ನೂರಾರುಮಂದಿ ರಾಕ್ಷಸರನ್ನು ಕಾವಲು ಇಟ್ಟಿರುವನು. ಎಷ್ಟೋಜನ ರಾಜಕುಮಾರರು ಬಂದು ಪ್ರಷ್ಪಮಂಜರಿ ಯನ್ನು ಬಿಡಿಸಿಕೊಂಡು ಹೋಗಲಾರದೆ ಅಲ್ಲಿಯೆ ಸತ್ತಿರುವರು. ನೀನು ಬಂದಿರುವ ಸಮಯವು ಬಹು ಅನುಕೂಲವಾದುದು. ಆ ರಾಕ್ಷಸಾಧ ಮನು ಈಗ ಮಲಗಿರುವನು. ಇನ್ನು ಹದಿನೈದು ದಿನಗಳು ಅವನು ಏಳು ವಂತೆ ಇಲ್ಲ, ಈಗ ಪಷ್ಪಮಂಜರಿಯು ಆ ರಾಕ್ಷಸನ ತಾಯಿಯ ವಶದ ಇರುವಳು. ಈಗ ಅವಳನ್ನು ಬಿಡಿಸಿಕೊಂಡರೆ ಸರಿ, ಇಲ್ಲದಿದ್ದರೆ, ನಿನ್ನ ಪ್ರಯತ್ನ ಎಂದಿಗೂ ಕೈಗೂಡುವುದಿಲ್ಲ, ನೀನು ಈಗಲೇ ಹೊರಡು. ನಿನಗೆ ಜಯವಾಗಲಿ' ಎಂದು ಹೇಳಿ ಹೊರಟುಹೋದನು. ರಾಜಕುಮಾರನು ಒಡನೆಯೆ ಹೊರಟನು. ಮೂರು ದಿವಸಗಳು ಹಗಲೂ ರಾತ್ರಿ ಒಂದೇ ಸಮನಾಗಿ ನಡೆದು ನಾಲ್ಕನೆಯ ರಾತ್ರಿ ಆಕೆ ಟೆಯ ಬಳಿಗೆ ಸೇರಿದನು. ಕೋಟೆಯ ಬಾಗಿಲಲ್ಲಿ, ಥಳಥಳಿಸುವ ಕತ್ತಿಗ ಳನ್ನು ಹಿಡಿದುಕೊಂಡು ಆರುಮಂದಿ ರಾಕ್ಷಸರು, ಕಾವಲುಕೊಡುತ್ತಿದ್ದರು. ' ನಾನು ಇವರೊಡನೆ ಸುಮ್ಮನೆ ಯುದ್ಧ ಮಾಡಿ ಇವರನ್ನು ಕೊಂದು, ಒಳಗೆ ಹೋಗುವುದಾದರೆ ಗಲಭೆಯು ಹೆಚ್ಚಿ, ತೊಂದರೆಗೆ ಗುರಿಯಾಗುವೆನು ? ಎಂದು ಯೋಚಿಸಿ ರಾಜಕುಮಾರನು ಆ ಮಾರ್ಗವನ್ನು ಬಿಟ್ಟು ಬೇರೆ ಎಲ್ಲಿ ಯಾದರೂ ದಿಡ್ಡಿ ಬಾಗಿಲಿದ್ದರೆ, ಅಲ್ಲಿಂದಾದರೂ ಒಳಹೋಗುವ ಪ್ರಯತ್ನ ಮಾ ಡಬೇಕೆಂದು ಅದನ್ನು ಹುಡುಕುವುದಕ್ಕೆ ಕೋಟೆಯ ಸುತ್ತಲೂ ಹೋದನು.
ಪುಟ:ಕಥಾವಳಿ.djvu/೯೧
ಈ ಪುಟವನ್ನು ಪರಿಶೀಲಿಸಲಾಗಿಲ್ಲ.