ಈ ಪುಟವನ್ನು ಪರಿಶೀಲಿಸಲಾಗಿಲ್ಲ.

وع ೫೧, ಪುಷ್ಪಮಂಜರಿಯ ಕಥೆ-೩ ನೆಯ ಭಾಗ. ಹಾಗೆ ರಾಜಕುಮಾರನು ಕೋಟಿಯಸುತ್ತಲ ಬರುತ್ತೆ ಅಲ್ಲಲ್ಲಿ ಕತ್ತಿಗಳನ್ನು ಹಿಡಿದುಕೊಂಡು ತೂಕಡಿಸುತ್ತಿದ್ದ ಭಯಂಕರರಾದ ರಾಕ್ಷ ಸರನ್ನು ನೋಡಿದನು. ಒಂದು ಕಡೇ ಮಾತ್ರ ಒಂದು ಸಣ್ಣ ಬಾಗಿಲು ಇದ್ದು ದನ್ನೂ, ಅಲ್ಲಿದ್ದ ಒಬ್ಬ ಕಾವಲುಗಾರನು ನಿದ್ದೆ ಹೋಗುತ್ತಿದ್ದುದನ್ನೂ ಕಂ ಡನು, ಆಗ ಸದ್ದಿಲ್ಲದೆ ಅವನ ಸವಿಾಪಕ್ಕೆ ಹೋಗಿ ನೋಡಲು, ಅವನು ಮೈ ಮರೆತು ಬಿದ್ದಿದ್ದನು, ಆಗ ಮೆತ್ತಗೆ ಆ ಬಾಗಿಲನ್ನು ತೆರೆದು ಒಳಕ್ಕೆ ಹೋ ದನು. ಕೋಟೆಯಲ್ಲಿ ನಿಶ್ಯಬ್ದವಾಗಿದ್ದಿತು. ಎಲ್ಲಿನೋಡಿದರೂ ಬಯಲು; ಮಧ್ಯದಲ್ಲಿ ಮಾತ್ರ ಒಂದು ದೊಡ್ಡ ಮನೆಯು ಇರುವಂತೆ ಕಾಣಿಸಿತು. ಆ ಮನೆಯ ಮಾರ್ಗವಾಗಿ ಹೊರಟು, ಕಾವಲು ಇಲ್ಲದ ಅರಮನೆ ಯನ್ನು ಪ್ರವೇಶಮಾಡಿ ದನು. ಅಷ್ಟು ಹೊತ್ತಿಗೆ ಸರಿಯಾಗಿ ಚಂದ್ರೋದಯ ವಾಗಿ ಬೆಳದಿಂಗಳು ಬಂದಿತು, ಅದು ಎಂತಹ ಅರಮನ ! ಎಲ್ಲೆಲ್ಲಿ ನೋಡಿ ದರೂ ಬೆಳ್ಳಿಯಗೊಡೆ, ಭ೦ಗಾರದ ಬಾಗಿಲು, ಸಜ್ಜೆಯ ಕಂಬ, ನೀಲದ ತೋರಣ, ಮುತ್ತಿನ ಜಾಲರಿ, ಕೆಂಪಿನ ಕಾರಣೆ ಆ ಐಶ್ವರ ವನ್ನೂ ಅಂದ ವನ್ನೂ ನೋಡಿ ರಾಜಕುಮಾರನು ಬೆರಗಾಗಿ ಒಂದು ಗಳಿಗೆ ನಿಂತಿದ್ದು ತರು ವಾಯ ಇನ್ನೇನು ಆಶ್ಚರವಿರುವ ದೋ ನೋಡಬೇಕೆಂದು ಮುಂದೆ ಒಂದೆ ರಡು ಹಜೆಗಳನ್ನು ಇಟ್ಟನು. ಅಲ್ಲಿ ಕಿವಿಗೆ ಇಂಪಾದ ಧ್ವನಿಯ ದಿವ್ಯವಾದ ಪ್ರಷ್ಟ ಪರಿಮಳವೂ ಬಂದುವು. ಅಷ್ಟರಲ್ಲಿ ಸಿಕ್ಕಿದ ಮೊಟ್ಟೆ ಯಬಾಗಿಲನ್ನು ತೆರೆ ದೊಡನೆ, ಒಳಗಿನ ಹೊಳಪು ಒಂದು ಕ್ಷಣಮಾತ್ರ ಇವನ ಕಣ್ಣುಗಳನ್ನು ಕೋರೈಸಿತು. ಆತೊಟ್ಟಿ ಯ ನಡುವೆ ನವರತ್ನ ಖಚಿತವಾದ ಸಿಂಹಾಸನ, ಆ ಸಿಂಹಾಸನದ ಮೇಲೆ ಥಳಥಳಿಸುತ್ತಿರುವ ಕನ್ಯಾರತ್ನ, ಆ ಕನ್ನಿಕೆಯ ಸಿಂಹಾಸನವೂ ಅಲ್ಲಿದ್ದ ಸಾಲದೀವಿಗೆಗಳೂ ನಾಲ್ಕು ಕಡೆಯ ರತ್ನಭಿತ್ತಿಗಳ ಲ್ಲಿಯ ಪ್ರತಿಬಿಂಬಿಸಿ ನೂರಾರು ಕನ್ನೆಯರು ನೂರಾರು ಸಿಂಹಾಸನಗಳೂ ಇರುವಂತೆ ಕಾಣುತ್ತಿದ್ದುವು. ಈ ಹೊಳಪಿನಲ್ಲಿ ಕಾಳರಾಕ್ಷಸಿಯಂತೆ ಕಪ್ಪಗೆ ಆ ರಾಕ್ಷಸನ ತಾಯಿಯು ಕುಳಿತಿರದಿದ್ದರೆ ಇವನು ಎಷ್ಟು ಹೊತ್ತು ನಿಂತಿ ದ್ದರೂ ಇವನ ಕಣ್ಣಿಗೆ ಪ್ರಕಾಶ ವಿನಾ ಇನ್ನೇನೂ ಕಾಣುತ್ತಿರಲಿಲ್ಲ.