೭ಳ ಅಲ್ಲಿಯೆ ಒಂದೆರಡು ನಿಮಿಷಕಾಲ ನಿಂತು ಸುತ್ತಲೂ ಚೆನ್ನಾಗಿ ನೋ ಡಲು ಆ ಪ್ರಷ್ಟ ಮಂಜರಿಯ ವೈಭವವು ಕಾಣಿಸಿತು, ಒಂದು ಕಡೆ ಸ್ತ್ರೀಯರು ನಾಟ್ಯವಾಡುತ್ತಿದ್ದರು ; ಒಂದುಕಡೆ ಗಾನಮಾಡುತ್ತಿದ್ದರು. ಇವುಗಳನ್ನೆಲ್ಲಾ ನೋಡಿ ಈ ರಾಜಕುಮಾರನು ಬೆಪ್ಪಾಗಿ ನಿಂತನು. ಅಷ್ಟ ರಲ್ಲಿಯೇ ಆ ರಾಕ್ಷಸಸ್ತ್ರೀಯ ಗರ್ಜನೆಯು ಕೇಳಿಸಿತು, ಅಲ್ಲಿದ್ದ ಹೆಂಗಸ ರೆಲ್ಲಾ ಒಂದು ಕ್ಷಣಮಾತ್ರದಲ್ಲಿ ಎಲ್ಲೋ ಮಾಯವಾದರು. ಈ ರಾಜಕು ಮಾರನಿಗೆ ಆ ಸ್ತ್ರೀಯರ ಕಾಲುಗೆಜ್ಜೆಯ ಧ್ವನಿಮಾತ್ರ ಕೇಳಿಸಿತಲ್ಲದೆ ಅವರು ಮಾಯವಾದ ಬಗೆ ಕಾಣಿಸಲಿಲ್ಲ. ಅಗ ಆ ರಾಕ್ಷಸಿಯು “ಎಲೈ ! ನರಾಧಮ, ನಿಲ್ಲು, ನಿಲ್ಲು. ನೀನು (ಯಾರು ? ಹೇಗೆ ಬಂದೆ ? ಒಂದು ನಿಮಿಷದಲ್ಲಿ ರಾಕ್ಷಸರು ಬಂದು ನಿನ್ನನ್ನು ಕಡಿದು ತಿಂದುಹಾಕುವರು, ಹಾ ! ಹೋ!” ಎಂದು, ಆರ್ಭಟಿ ಸಿದಳು. ಆಗ ರಾಜಕುಮಾರನು ಸ್ವಲ್ಪ ಧೈರ್ಯವನ್ನು ತಾಳಿ, ಒಂದೆ ರಡು ಹಜ್ಜೆ ಮುಂದೆ ಹೋಗಿ, ಕೈಮುಗಿದು, 'ತಾಯೆ | ಕ್ಷಮಿಸಿ, ನಾನು ನಿಮ್ಮ ಗು ಜ್ಞಾತಿಶಯಗಳನ್ನು ಕೇಳಿ ಆಶ್ಚರಯುಕ್ತನಾಗಿ ನಿಮ್ಮನ್ನು ಸೇವಿಸಿ ಕೊಂಡಿರಲು ಇಲ್ಲಿಗೆ ಬಂದಿರುವೆನು. ದಯಪಾಲಿಸಬೇಕು' ಎಂದು ಅವಳನ್ನು ಸ್ವಲ್ಪ ಸ್ತೋತ್ರಮಾಡಿದನು, ಸ್ತೋತ್ರಕ್ಕೆ ಒಳಗಾಗದಿರುವರು ಯಾರು ? ಇವನ ಸ್ತೋತ್ರಕ್ಕೆ ಆ ಮುದುಕಿಯು ಮೆಚ್ಚಿ, “ಒಳ್ಳೆಯದು ! ಹಾಗಾದರೆ, ನಮ್ಮದೊಂದು ಕುದುರೆ ಇರುವುದು, ಅದನ್ನು ನೀನು ಮೂರುದಿನಗಳು ಹೊರಕ್ಕೆ ತೆಗೆದುಕೊಂಡು ಹೋಗಿ ಮೇಯಿಸಿಕೊಂಡು ಬಂದಗೆ, ನಿನ್ನನ್ನು ಇಲ್ಲಿಯೇ ಇಟ್ಟು ಕೊಳ್ಳುವೆನು' ಎಂದಳು. ಅದಕ್ಕೆ ಆ ರಾಜಕುಮಾರನು ಸಂತೋಷದಿಂದ ಒಪ್ಪಲು ಅವನಿಗೆ ಆಗ ಆಹಾರವನ್ನು ಕೊಟ್ಟು, ಮರುದಿನ ಬೆಳಗ್ಗೆ ಕುದುರೆಯನ್ನು ಕೊಟ್ಟು ಕಳುಹಿಸಿದಳು, ಕುದುರೆಯನ್ನು ಮೇಯುವುದಕ್ಕೆ ಬಿಟ್ಟು ರಾಜಕುಮಾ ರನ್ನು ರಾತ್ರಿ ಕಂಡ ಸೊಬಗನ್ನೇ ಯೋಚಿಸುತ್ತಾ ಇರಲು, ಕುದುರೆಯು ಎಲ್ಲೋ ತಪ್ಪಿಸಿಕೊಂಡಿತು. ಎಲ್ಲೆಲ್ಲಿ ಹುಡುಕಿದರೂ ಸಿಕ್ಕಲಿಲ್ಲ, ರಾಜಕು ಮಾರನಿಗೆ ಬಹುದುಃಖಬಂದಿತು.
ಪುಟ:ಕಥಾವಳಿ.djvu/೯೩
ಈ ಪುಟವನ್ನು ಪರಿಶೀಲಿಸಲಾಗಿಲ್ಲ.