ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಥಾಸಂಗ್ರಹ--4ನೆಯ ಭಾಗ 155 ಹೀಗೆ ಕೆಲವು ದಿವಸಗಳು ಕಳೆದ ತರುವಾಯ ಒಂದಾನೊಂದು ದಿವಸ ಅವರು ಇಳಿದು ಇದ್ದ ಬ್ರಾಹ್ಮಣನ ಮನೆಯೊಳಗೆ ರೋದನ ಧ್ವನಿಯು ಕೇಳಿಸಿತು. ಆಗ ಕುಂತಿ ದೇವಿಯು ಆ ಧ್ವನಿಯನ್ನು ಕೇಳಿ ಕಾರುಣ್ಯಭಾವದಿಂದ ಹೃದಯದಲ್ಲಿ ಪಶ್ಚಾತ್ತಾಪಪ ಡುತ್ತಾ ತನ್ನ ಸವಿಾಪದಲ್ಲಿ ಇದ್ದ ಭೀಮಸೇನನನ್ನು ನೋಡಿ-ಎಲೆ, ಕುಮಾರನೇ ! ನಾವು ಈ ಬ್ರಾಹ್ಮಣನ ಮನೆಯಲ್ಲಿ ಧೃತರಾಷ್ಠಾದಿಗಳಿಗೆ ತಿಳಿಯದೆ ಇರುವ ರೀತಿ ಯಿಂದ ಕೆಲವು ದಿವಸಗಳು ಇದ್ದೆವು. ಇವರಿಗೆ ಏನು ಉಪಕಾರವನ್ನು ಮಾಡೋಣ ? ಎಂದು ಯಾವಾಗಲೂ ಚಿಂತಿಸುತ್ತಿದ್ದೇನೆ. ಉಪಕಾರವನ್ನು ಮಾಡಿದವರಿಗೆ ಪ್ರತ್ಯು ಪಕಾರವನ್ನು ಮಾಡಬೇಕೆಂದು ಎಣಿಸಿದವರು ಮನುಷೋತ್ತಮರೆನಿಸಿಕೊಳ್ಳುವರು ಈ ಮನೆಯ ಬ್ರಾಹ್ಮಣನಿಗೆ ಏನೋ ಪ್ರಾಣಾಪತ್ತು ಉಂಟಾಗಿರುವ ಹಾಗೆ ತೋರುತ್ತದೆ. ನಾನೇನು ಮಾಡಲಿ ? ಎಂದು ಮರುಗುತ್ತಿರಲು; ಭೀಮನು ತಾಯಿಯನ್ನು ಕುರಿತು ಎಲೈ, ತಾಯೇ ! ಇವರಿಗೆ ದುಃಖ ಬರುವುದಕ್ಕೆ ಕಾರಣವೇನು ? ಅದನ್ನು ಕೇಳಿ ತಿಳಿದುಕೊಂಡು ಬಾ ಎಂಥಾ ದುಷ್ಟರವಾದ ಕಾರ್ಯವನ್ನಾದರೂ ನಾನು ನಡಿಸು ತೇನೆ ಎಂದನು. ಅಷ್ಟರಲ್ಲೇ ರೋದನಧ್ವನಿಯು ಹೆಚ್ಚುತ್ತಾ ಬರಲು ; ಕುಂತಿಯು ಕಟ್ಟಿ ಹಾಕಿದ ಕರುವಿನ ಸವಿಾಪಕ್ಕೆ ಹೋಗುವ ಹಸುವಿನ ಹಾಗೆ ವಾತ್ಸಲ್ಯದಿಂದ ಆತನ ಮನೆಯ ಒಳಗೆ ಹೋಗಿ ಅಲ್ಲಿ ಹೆಂಡತಿ ಮಗಳು ಮಗನು ಇವರೊಡನೆ ಪ್ರಲಾಪಿಸುತ್ತಿರುವ ಬ್ರಾಹ್ಮಣನ ಸವಿಾಪದಲ್ಲಿ ಕೂತು ಕೊಂಡಳು. ಆಗ ಆ ಬ್ರಾಹ್ಮ ಣನು-ಅಕಟಕಟಾ ! ನಿಸ್ತಾರವಾಗಿಯೂ ನಿರರ್ಥಕವಾಗಿಯ ಸಕಲ ದುಃಖಗ ಗಳಿಗೆ ಮಲವಾಗಿ ನಿತ್ಯ ಪರಾಧೀನವಾಗಿಯೂ ಇರುವ ಈ ನನ್ನ ಬದುಕಿನೋಪಾ ದಿಯಲ್ಲಿರುವ ಬದುಕು ಯಾರಿಗಾದರೂ ಉಂಟೇ ? ಶರೀರದುಃಖಗಳನ್ನೂ ಮನೋ ದುಃಖಗಳನ್ನೂ ಚಳಿ ಬಿಸಲು ಮೊದಲಾದ ದ್ವಂದ್ವ ದುಃಖಗಳನ್ನೂ ನಾನು ಜೀವ ವಂತನಾಗಿರುವುದರಿಂದಲ್ಲವೇ ಅನುಭವಿಸಬೇಕಾಯಿತು ? ಏಕಾಕಿಯಾಗಿ ಇರುವ ಪುರುಷನಿಗೆ ಧರ್ಮಾರ್ಥಕಾಮಗಳು ಯವಾಗಲೂ ಉಂಟಾಗಲಾರವು. ಅದು ಹಾಗಿ ರಲಿ, ಹಣದ ಸಂಪಾದನೆಗೆ ಹಣದ ಆಸೆಯೇ ಸಾಧನವು, ದೈವಯೋಗದಿಂದ ಹಣವು ಲಭಿಸಿದರೆ ಅದು ಇನ್ನೂ ಕ್ಷೇಶಕ್ಕೆ ಕಾರಣವಾಗುವುದು, ಹಾಗೆ ಲಬ್ದ ವಾದ ಹಣದಲ್ಲಿ ಮೋಹವು ಹುಟ್ಟಿದರೆ ಆ ಹಣವು ಹೋಗುವ ಕಾಲದಲ್ಲಿ ಆಗುವಂಥಾ ದುಃಖವು ಅಪರಿಮಿತವಾಗಿರುವುದು, ಇಷ್ಟ ವಸ್ತುಗಳಲ್ಲಿ ಯಾರಿಗೆ ಎಷ್ಟು ಪ್ರೀತಿ ಹೆಚ್ಚುವುದೋ ಆತನು ಆ ಪ್ರೀತಿಯಿಂದುಂಟಾಗುವ ಶೋಕವೆಂಬ ದಸಿಯನ್ನು ಎದೆ ಯಲ್ಲಿ ನೆಟ್ಟು ಕೊಳ್ಳುವನು. ಹೀಗೆ ಸ್ವಲ್ಪ ಸುಖಕ್ಕಾಗಿ ಬಹಳ ದುಃಖವುಳ್ಳ ಸಂಸಾರ ವನ್ನು ಐದಿ ಹೆಂಡತಿಯನ್ನು ಕಟ್ಟಿಕೊಂಡು ಏಕಪುತ್ರನುಳ್ಳ ನನಗೆ ಪುತ್ರವಿಯೋಗ ರೂಪವಾದ ವ್ಯಸನವು ಪ್ರಾಪ್ತವಾಯಿತು. ಏನು ಮಾಡಲಿ ? ಎಲ್ಲಿಗೆ ಹೋಗಲಿ ? ಯಾರಿಗೆ ಹೇಳಲಿ ? ಈ ಆಪತ್ತು ಪರಿಹಾರವಾಗುವುದಕ್ಕೆ ಉಪಾಯವು ಯಾವುದೂ ತೋರುವುದಿಲ್ಲ, ನಾನು ಪತ್ರದಾರಸಮೇತನಾಗಿ ಈ ದೇಶವನ್ನು ಬಿಟ್ಟು ನಿರುಪದ್ರ ವಾದ ಮತ್ತೊಂದು ದೇಶಕ್ಕೆ ಹೋಗೋಣ ಎಂದು ಎಷ್ಟು ಹೇಳಿದರೂ ನನ್ನ ಮಾತನ್ನು