ಈ ಪುಟವನ್ನು ಪರಿಶೀಲಿಸಲಾಗಿಲ್ಲ.

156 KANARESE SELECTIONS-PART III 'ಕೇಳದೆ ಈ ದೇಶದಲ್ಲಿ ಹುಟ್ಟಿ ಬೆಳೆದು ನಾನು ನನ್ನ ತಂದೆತಾಯಿಗಳನ್ನು ಬಿಟ್ಟು ದೇಶಾಂತರಕ್ಕೆ ಹೇಗೆ ಬಂದೇನು ? ಎಂದು ಹೇಳಿದೆಯಲ್ಲಾ ! ಅಂಥಾ ತಾಯಿ ತಂದೆ ಗಳು ಪರಲೋಕಕ್ಕೆ ಹೋದರು. ಇನ್ನು ಈ ದೇಶದಲ್ಲಿ ಇದ್ದುದಕ್ಕೆ ಏನು ಫಲವಾ ಯಿತು ? ಭೋಜನವೂ ದೇಶವೂ ಸ್ತ್ರೀಜನವೂ ಬಂಧುಜನವೂ ಪ್ರತಿಕೂಲವಾದರೆ ಪ್ರಾಜ್ಞ ನಾದವನು ಕಾರ್ಯಗೌರವದಿಂದ ಗರುಡಹಂಸಗಳೋಪಾದಿಯಲ್ಲಿ ಹಾರಿಹೋಗ ಬೇಕು, ಈ ಶಾಸ್ತ್ರವನ್ನು ಎಣಿಸದೆ ನಾನು ನಿನ್ನ ಮಾತಿಗೆ ಒಳಪಟ್ಟು ಇಲ್ಲಿ ಇದ್ದುದ ರಿಂದ ನಮಗೆ ಈ ದುರ್ದಶೆಯು ಪ್ರಾಪ್ತವಾಯಿತು. ಈ ದುಃಖವೆಲ್ಲವನ್ನೂ ನೀನನು ಭವಿಸು ಎಂದು ಹೇಳಿದನು. ಅದಕ್ಕೆ, ಬ್ರಾಹ್ಮಣ ಸ್ತ್ರೀಯು-ನೀವು ಯಾಕೆ ಕ್ಷೌಶಪಡುತ್ತಿದ್ದೀರಿ ? ನನ್ನನ್ನು ಆ ಬಕನಿಗೆ ಆಹಾರವಾಗಿ ಕೊಟ್ಟುಬಿಡಿರಿ ಎನಲು ; ಆ ಬ್ರಾಹ್ಮಣನು-- ಇಂಥಾ ಅವಲಕ್ಷಣ ದೇಶದಲ್ಲಿ ಇದ್ದುದರಿಂದ ನಾಲ್ಕು ಮಂದಿಗಳೊಳಗೆ ಒಬ್ಬರಿಗೆ ನಾಶವು ಪ್ರಾಪ್ತವಾಗಿದೆ. ಆದರೆ ನನ್ನ ಕೂಡ ಉಚಿತವಾದ ಕರ್ಮಗಳನ್ನು ಆಚರಿ ಸುತ್ತಾ ಸಾತ್ವಿಕ ಗುಣಗಳೊಡನೆ ಕೂಡಿ ನನ್ನನ್ನು ಪೋಷಿಸಿಕೊಂಡು ದೈವವಶದಿಂದ ದೊರಕಿದ ಅರ್ಧದಿಂದ ಸಂಸಾರವನ್ನು ನಡಿಸಿಕೊಂಡು ತಾಯಿತಂದೆಗಳು ಬಾಲ್ಯದ ಲ್ಲಿಯೇ ಮದುವೆಯನ್ನು ಮಾಡಿದುದರಿಂದ ಅಧಿಕವಾದ ಅನುರಾಗದೊಡನೆ ಕೂಡಿ ಮಂತ್ರಪೂರ್ವಕವಾಗಿ ಕೈಹಿಡಿದು ಸತ್ತುಲದಲ್ಲಿ ಹುಟ್ಟಿ ಮಕ್ಕಳನ್ನು ಪಡೆದು ಮತ್ತೊ ಬ್ಬರನ್ನು ಅರಿಯದೆ ನನಗೆ ಅನುಕೂಲಭೂ ಸದಾಚಾರಸಂಪನ್ನಳೂ ಆಗಿರುವ ಈ ಧರ್ಮಪತ್ನಿ ಯನ್ನು ಹೇಗೆ ಬಿಡಲಿ ? ಅಪ್ರಾಪ್ತ ಯೌವನನಾಗಿಯ ಗಡ್ಡ ಮೀಸೆಗಳು ಬಾರದೆ ಇರುವಂಧವನಾಗಿಯೂ ಇಹದಲ್ಲಿ ಸೌಖ್ಯಪ್ರದನಾಗಿಯ ಸಕಲ ಜನೋಪ ಉಾಲನೀಯನಾಗಿಯ ಪಿತೃಋಣವಿಮೋಚಕನಾಗಿಯ ವಂಶಾಭಿವೃದ್ಧಿ ಕರನಾಗಿ ಯ ನನ್ನ ಅನಂತರ ನನಗೆ ಪಿಂಡೋದಕ ಪ್ರದಾನಗಳಿಂದ ಪರಲೋಕವನ್ನು ಕಲ್ಪಿಸು ವಂಥಾವನಾಗಿಯ ಇರುವ ಈ ಪುತ್ರನನ್ನು ಹೇಗೆ ಬಿಡಲಿ ? ಒಬ್ಬ ಬ್ರಹ್ಮಚಾರಿಯ ನಿಮಿತ್ತವಾಗಿ ಬ್ರಹ್ಮ ಸಂಕಲ್ಪದಿಂದ ಹುಟ್ಟಿರುವಂಥಾವಳೂ ನನಗೆ ದೌಹಿತ್ರಲೋಕವನ್ನು ಕಲ್ಪಿಸುವಂಧವಳೂ ನನ್ನ ಗರ್ಭದಲ್ಲಿ ಹುಟ್ಟಿ ರುವವಳೂ ಆಗಿರುವ ಈ ಕನ್ಯಾರತ್ನ ವನ್ನು ಹೇಗೆ ಬಿಟ್ಟು ಬಿಡು ವೆನು ? ಲೋಕದಲ್ಲಿ ಕೆಲವರೊಳಗೆ-ತಂದೆಗೆ ಮಗನಲ್ಲಿ ಯ ತಾಯಿಗೆ ಮಗಳಲ್ಲಿಯ ಪ್ರೀತಿ ಉಂಟಾಗಿರುವುದು ಎಂದು ಹೇಳುವರು. ನನಗಾ ದರೋ ಇಬ್ಬರಲ್ಲಿ ಯ ಸಮವಾದ ಪ್ರೀತಿ ಇದೆ, ಮತ್ತು ಹೆಣ್ಣಿನ ದೆಸೆಯಿಂದ ನನಗೆ ಪುಣ್ಯ ಲೋಕಗಳೂ ವಂಶಾಭಿವೃದ್ಧಿಯ ಸೌಲ್ಯವೂ ಆಗುವುವಷ್ಟೆ, ಬುದ್ದಿ ಸಂಪನ್ನೆ ಯಾಗಿಯೂ ದೋಷರಹಿತೆಯಾಗಿಯೂ ಮದುವೆಯಾದ ಮೇಲೆ ಮಾವನ ಮನೆಗೆ ಹೋಗಿ ಗಂಡನಿಗೆ ಅನುಕೂಲವಾಗಿ ನಡೆದುಕೊಂಡು ಆತನಿಂದ ಸಕಲ ಸೌಖ್ಯಗಳನ್ನೂ ಪಡೆಯಬೇಕೆಂದು ಎಣಿಸಿ ಗತ್ವವನ್ನು ಬಿಟ್ಟು ಎನಯದಿಂದ ನಡೆದುಕೊಳ್ಳುವ ಈ ಹೆಣ್ಣು ಮಗಳನ್ನು ಹೇಗೆ ಬಿಟ್ಟು ಬಿಡುವೆನು ? ಈ ಮಕ್ಕಳನ್ನು ಬಿಟ್ಟರೆ ಪರಲೋಕದಲ್ಲಿ ನನ್ನ ದುಃಖವು ತೀರದು. ಈ ಮಕ್ಕಳು ಚಿಕ್ಕವರಾದುದರಿಂದ ನನ್ನನ್ನು ಬಿಟ್ಟು ನಿಮಿ