ಕುಂಭಕರ್ಣಸಂಹಾರ 139 ವಿಭೀಷಣನು ಮೋಸವಾಯಿತೆಂದು ಆಂಜನೇಯನ ಬಳಿಗೋಡಿಬಂದು ಅವನ ಕೈಯ ನ್ನು ಹಿಡಿದು ಕೊಂಡು--ಎಲೈ ವೀರಕುಲತಿಲಕನೇ, ನಿಲ್ಲು: ನಿಲ್ಲು ; ಈ ಆಯುಧ ವನ್ನು ತಿರಿಗಿ ಅವನ ಮೇಲೆ ಹಾಕಿದವನ ತಲೆಯು ಭೂಮಿಗುರುಳಲಿ ಎಂದು ವರವುಂಟು. ಆದುದರಿಂದ ಅವನ ಮೇಲೆ ಇದನ್ನು ಪ್ರಯೋಗಿಸಬೇಡವೆನ್ನಲು ; ಮಾರುತಿಯು ತನ್ನ ಮಂಡಿಯನ್ನು ಕೊಟ್ಟು ಅದನ್ನು ತುಂಡು ತುಂಡಾಗುವಂತೆ ಮುರಿದು ಸಮುದ್ರಮ ಧ್ಯದಲ್ಲಿ ಬೀಳುವಂತೆ ಎಸೆದುಬಿಟ್ಟನು. ಅದನ್ನು ನೋಡಿ ಸೂರ್ಯನು-ಈ ಯುದ್ಧವಿ ದ್ಯಾವಿಶಾರದನಾದ ಆಂಜನೇಯನು ನನ್ನ ಮಗನಾದ ಸುಗ್ರೀವನನ್ನು ಕೊಂದುಹಾ ಕುವುದಕ್ಕೆ ಬರುತ್ತಿದ್ದ ಭಯಂಕರವಾದ ಶಕ್ತಾಯುಧವನ್ನು ಮುರಿದು ಬಿಸುಟನಲ್ಲಾ ಎಂಬ ಸಂತೋಷಾತಿಶಯದಿಂದ ಅವನಿಗೆ ದಿವ್ಯರತ್ನ ಖಚಿತಗಳಾದ ಎರಡು ಕರ್ಣ ಕುಂಡಲಗಳನ್ನು ಕೊಟ್ಟು ಸನ್ಮಾನಿಸಿದನು. ಆಗ ಕುಂಭಕರ್ಣನು_ಆಹಾ ! ಮಹಾತ್ರಿಶೂಲಾಯುಧವು ವ್ಯರ್ಥವಾಗಿ ಮುಗಿದುಹೋಯಿತೇ ? ಕಪಿವೀರನು ಉಳಿದನೇ ? ಇನ್ನು ಮುಂದೆ ಮಾಡಬೇಕಾದ ಕೆಲಸವೇನೆಂದು ಕ್ಷಣಕಾಲ ಯೋಚಿಸಿ ಕೂಡಲೆ ಕೊಟಿಸಂಖ್ಯಾತಗಳಾದ ಸಿಡಿಲು ಗಳ ಆರ್ಭಟಕ್ಕೆ ಮಿಗಿಲೆನ್ನು ವಂತೆ ಆರ್ಭಟಿಸಿ ಕಪಿಬಲವನ್ನೆಲ್ಲಾ ಭಯದ ಸಮುದ್ರದಲ್ಲಿ ತೇಲಿಸಿ ಮುಳುಗಿಸಿ ನೆಗೆದುಬಂದು ಸುಗ್ರೀವನನ್ನು ಹಿಡಿದು ಕೊಂಡು.ಇವನಷ್ಟೇ ಕವಿರಾಜನು ? ಇವನ ಸಹಾಯದಿಂದಲೇ ರಾಮಲಕ್ಷ್ಮಣರು ನಮ್ಮೊಡನೆ ಕೊಳುಗು ಳಕ್ಕೆ ಬಂದರು. ಇವನನ್ನು ಕೊಲ್ಲದೆ ಸೆರೆಹಿಡಿದು ಕೊಂಡು ಹೋದರೆ ಈ ನೆರೆದಿರುವ ಕೋಡಗಗಳೆಲ್ಲಾ ದೆಸದೆಸೆಗೋಡಿ ಹೋಗುವುವು. ಅನಂತರದಲ್ಲಿ ಉಳಿದ ಬಲಹೀನ ರಾದ ಮನುಜರಿಬ್ಬರನ್ನು ಕ್ಷಣಮಾತ್ರದಲ್ಲಿ ಜಯಿಸಿಬಿಡಬಹುದು ಎಂದು ಯೋಚಿ ಸುತ್ತ, ಕಪಿರಾಜನನ್ನು ಕಂಕುಳಲ್ಲಿರುಕಿಕೊಂಡು ಸಂತೋಷದಿಂದ ಲಂಕೆಗೆ ತಿರುಗಿ ದನು. ಆಗ ರಾಮನು ಕಳವಳಿಸಿ-ಅಹಹ ! ವಾನರಚಕ್ರವರ್ತಿಯು ಖ'ನ ಕೈಗೆ ಸಿಕ್ಕಿದನೇ ? ಕಾರ್ಯವು ಕೆಟ್ಟಿತು ! ಎಂದು ಮಾರುತ ಪುತ್ರನ ಮುಖವನ್ನೂ ತಮ್ಮ ನಾದ ಲಕ್ಷ್ಮಣನ ಮುಖವನ್ನೂ ನೋಡಲು ; ಶೂರರಾದ ಅವರಿಬ್ಬರೂ ಶೀಘ್ರವಾಗಿ ಹೊರಟು ಯುದ್ದ ಕ್ಕೆ ಬರುತ್ತಿರಲು ; ಸುಗ್ರೀವನು ಅವರನ್ನು ನೋಡಿ ಬೇರೆ ಬವ ರದ ಬಲುಮೆಗಳನ್ನು ತೋರಿಸದಿರಿ, ನಾನು ಈ ಖಳನಿಗೆ ಸಿಕ್ಕಿ ಹೋದೆನೆಂದು ಬಗೆ ಯದಿರಿ. ಅರೆಗಳಿಗೆಯಲ್ಲಿ ಇವನ ಹಗರಣವನ್ನು ನಗೆಗಾರರಿಗೆ ತೋರಿಸುವೆನು ಎಂದು ಅವರಿಗೆ ಸಮಾಧಾನವನ್ನು ಹೇಳಿ ನಿಲ್ಲಿಸಿದನು, ಆ ಮೇಲೆ ಕುಂಭಕರ್ಣನು ಇಂದಿನ ಸಮರದಲ್ಲಿ ನಾನು ಗೆದ್ದೆನು. ಕಪಿರಾಜನನ್ನು ಸೆರೆಹಿಡಿದೆನು. ಮು೦ದಣ ಕಾರ್ಯವು ನಾಳಿನದು ಎಂದು ಯೋಚಿಸುತ್ತ ಹೊಳಲನ್ನು ಹೊಗಲು ; ಆಗ ಭೇರೀ ನಿಸ್ಸಾಳಾದಿ ವಿವಿಧವಾದ್ಯಗಳು ಮೊಳಗಿದುವು. ರೈತ್ಯಾಂಗನೆಯರು ದರ್ಪಣ ಕಲ ಶಾಳಿಗಳನ್ನು ಹಿಡಿದು ಒಗ್ಗಿನಿಂದ ಬಂದು ಕುಂಭಕರ್ಣನನ್ನು ಎದುರುಗೊಂಡರು. ಕೆಲವರು ಮುತ್ತೈದೆಯರು ಆರತಿ ಎತ್ತಿದರು, ಮತ್ತೆ ಕೆಲವರು ಗಂಧೋದಕಗಳನ್ನೂ ಪನ್ನೀರುಗಳನ್ನೂ ಕುಂಭಕರ್ಣನ ಮೇಲೆ ಸುರಿದರು. ಯುದ್ಧ ಶ್ರಮನಿವಾರಣಾರ್ಥವಾಗಿ ರದ ಬಲುಮೆಗಳ ವಿರುತ್ತಿರಲು ; ಸುಗ್ರೀವಸದರಾದ ಅವರಿಬ್ಬರೂ ೫ ತಿಮ್ಮ
ಪುಟ:ಕಥಾ ಸಂಗ್ರಹ - ಭಾಗ ೨.djvu/೧೪೯
ಈ ಪುಟವನ್ನು ಪರಿಶೀಲಿಸಲಾಗಿಲ್ಲ.