140 ಕಥಾಸಂಗ್ರಹ-೪ ನೆಯ ಭಾಗ ಬಹುಮಾದಕಗಳಾದ ವಾರುಣಿ ಕಾದಂಬರಿಗಳೆಂಬ ಹೆಂಡಗಳನ್ನು ತಂದು ಕುಡಿಯು ವುದಕ್ಕೆ ಕೊಟ್ಟರು. ಆಗ ಕುಂಭಕರ್ಣನು ಮಹಾ ಗರ್ವಯುಕ್ತನಾಗಿ ಕೂತಿರಲು ; ಜಯಜಯ ನೀತಿಲತಾಕುಠಾರಾ ! ಅರಿಜಲಧರಜಂಝಾಮಾರುತಾ ! ಅಧರ್ಮಸಂಸ್ಕಾ ಪನಾಚಾರ್ಯಾ ! ಎಂದು ವಂದಿಮಾಗಧರು ಹೊಗಳುತ್ತಿರಲು ; ಅವನು ಮದ್ಯಪಾನ ದಿಂದಾದ ಮತ್ತತೆಯ ಹೊಗಳುವಿಕೆಯಿಂದುಂಟಾದ ಗರ್ವವೂ ತಲೆಗೇರಿ ತಾನು ಯುದ್ಧರಂಗದಲ್ಲಿ ಹಿಡಿದುಕೊಂಡು ಬಂದಿರುವ ಕಪಿರಾಜನನ್ನು ಮರೆತು ಮೈತಿಳಿಯದೆ ದ್ವಿತೀಯನೀಲಭೂಧರದಂತೆ ಕುಳಿತನು. ಆ ವೇಳೆಯಲ್ಲಿ ಕಪೀಂದ್ರನು ಮೆಲ್ಲನೆ ಸಡಿಲ ವಾದ ಅವನ ಕಂಕುಳಿಂದ ಕೈಯರಿ ಹೊರಗೆ ಬಂದು ಹೆಗ್ಗತ್ತಿನಲ್ಲಿ ಕುಳಿತು ತನ್ನೆರ ಡು ಕೈಗಳಿಂದ ಆ ಖಳನ ಎರಡು ಕೊಡಗಿವಿಗಳನ್ನೂ ಹಲ್ಲುಗಳಿಂದ ಮಗನ್ನೂ ಕಿತ್ತು ತೆಗೆದುಕೊಂಡು ಗಗನ ಮಾರ್ಗಕ್ಕೆ ಹಾರಿಬಂದು ರಣಭೂಮಿಯಲ್ಲಿಳಿದನು. ಆಗ ಇವ ನನ್ನು ನೋಡಿದ ಲಕ್ಷ್ಮಣಾಂಜನೇಯರು ಪರಮ ಸಂತೋಷಭರಿತರಾಗಿ ನಡೆದ ಸಂಗ ತಿಯನ್ನೆಲ್ಲಾ ಕೇಳಿ ಪರಿಹಾಸ್ಯದಿಂದ ನಕ್ಕು ಸುಗ್ರೀವನನ್ನು ಹೊಗಳಿದರು. ಅನಂತರದ ಲ್ಲಿ ಕಪಿಸಾರ್ವಭೌಮನಾದ ಸುಗ್ರೀವನು ಅವರಿಬ್ಬರೊಡನೆ ಕೂಡಿ ರಘುಕುಲಾಂಬುಧಿ ಚ೦ದ್ರನಿರುವ ಸ್ಥಳಕ್ಕೆ ಬಂದು ಆತನಿಗೆ ಸಾಷ್ಟಾಂಗ ನಮಸ್ಕಾರವನ್ನು ಮಾಡಿ ವೃತ್ತಾಂ ತವನ್ನೆಲ್ಲಾ ತಿಳಿಸಿ ಸಂತೋಷಪಡಿಸಿದನು. ಅದನ್ನು ಕೇಳಿ ಕಪಿವಾಹಿನಿಯೆಲ್ಲವೂ ನಲಿ ದಾಡಿತು, ಇತ್ತಲಾ ಕುಂಭಕರ್ಣನು ಒಂದೆರಡು ಗಳಿಗೆಗಳ ವರೆಗೂ ಮತ್ತನಾಗಿದ್ದು ಅನಂತರದಲ್ಲಿ ಮೇಲೆದ್ದು ಸಂತೋಷದಿಂದ ಹೊರಟು ಅಣ್ಣನಾದ ದಶಗ್ರೀವನ ಓಲಗೆ ಚಾವಡಿಗೆ ಸರಸರನೆ ಬಂದು ಆತನಿಗೆ ನಮಸ್ಕರಿಸಿ-ಎಲೈ ಅಗ್ರ ಜಾತನೇ, ತೃಣಪ್ರಾ ಯರಾದ ಮನುಜರಿಗೆ ಸಹಾಯವನ್ನು ಮಾಡಿ ಅವರನ್ನು ನಮ್ಮೊಡನೆ ಜಗಳಕ್ಕೆ ಕರೆ ದುಕೊಂಡು ಬಂದ ಕಪಿರಾಜನನ್ನು ಹಿಡಿದು ತಂದಿದ್ದೇನೆ. ಇದೋ ನೋಡು ! ಎಂದು ಕಂಕುಳನ್ನೆತ್ತಿ ಸುಗ್ರೀವನನ್ನೂ ಕಿವಿ ಮೂಗುಗಳಲ್ಲಿ ಬೆರಳಿಟ್ಟು ನೋಡಿ ಅವುಗಳನ್ನೂ ಕಾಣದೆ ರಕ್ತಲೇಪಿತವಾದ ಬೆರಳುಗಳನ್ನು ಮಾತ್ರ ಕಂಡು ಬಲು ನಾಚಿಕೆಯೆಂಬ ಕಡಲೊಳಗೆ ಮುಳುಗಿ ಕೋಸಸಂತಪ್ತ ಚಿತ್ತನಾಗಿ ಘರನೆ ಹಿಂದಿರುಗಿ.ಸುಡುಸುಡು! ಈ ಬದುಕು ಸಾಕು ! ಎಲಾ ! ನೀಚ ಕಪಿಯೇ, ಮಾನವನ್ನು ಭಂಗಿಸಿದಿಯಾ ? ಇನ್ನು ಈ ಪ್ರಾಣಗಳನ್ನು ಹಿಡಿದಿರುವುದು ಬಹಳ ಅನುಚಿತವು ! ಎಂದು ಅನಿವಾರ್ಯಕೋಪ ವಿಜೃಂಭಿತನಾಗಿ ಪುನಃ ಶೀಘ್ರವಾಗಿ ಜಗಳಕ್ಕೆ ಹೊರಟು ಯುದ್ಧಭೂಮಿಗೆ ಬಂದು ನಿಂತನು. ಆ ಕೂಡಲೆ ಕಸಿಸಮೂಹವೆಲ್ಲವೂ ಬಂದು ಮಹಾಗಜಕ್ಕೆ ಜೇನ್ನೊಣಗಳು ಕವಿದಂತೆ ಕವಿಯಲು ; ಅವುಗಳನ್ನೆಲ್ಲಾ ಹೊಸಗಿ ಬಿಸುಟು ರಾಮನೆಡೆಗೆ ಬರುತ್ತಿದ್ದನು. ಆಗ ಶ್ರೀರಾಮನು ತಮ್ಮನಾದ ಲಕ್ಷ್ಮಣನನ್ನು ಕರೆದು-ನಮ್ಮ ಕಪಿಬಲವು ಈ ಕರಾಳಾಕಾರಿಯಾದ ಕುಂಭಕರ್ಣನನ್ನು ನೋಡಿ ಇದು ಗುಮ್ಮನೆಂದು ಬೆದರುತ್ತಿದೆ. ಅದು ಕಾರಣ ಇವನೊಡನೆ ಯುದ್ದದ ಕೆಲಸವು ನನ್ನ ಪಾಲಿಗಾಗಲಿ, ಈ ನಿಶಾಚರ ಮಾರಿಯೆದುರಿಗೆ ನೂಕಿ ಸುಮ್ಮನೆ ಕಪಿಭಟರನ್ನು ಬಳಲಿಸಬೇಡ, ಈ ಕುಂಭಕರ್ಣನ ಸಂಗಡ ಬಂದಿರುವ ನಿಶಾಚರವಾಹಿನಿಯೊಡನೆ ಕಾದುವುದಕ್ಕೆ ನೀನು ನಡೆ ಎಂದು
ಪುಟ:ಕಥಾ ಸಂಗ್ರಹ - ಭಾಗ ೨.djvu/೧೫೦
ಈ ಪುಟವನ್ನು ಪರಿಶೀಲಿಸಲಾಗಿಲ್ಲ.