ಕುಂಭಸಂಜರ 141 ಹೇಳಿ ಹನುಮಂತನನ್ನು ಕರೆದು--ನೀನು ಲಕ್ಷ್ಮಣನಿಗೆ ಸಹಾಯವಾಗಿ ಹೋಗು. ನನ್ನ ಅಂಗರಕ್ಷಣೆಗೆ ಸುಗ್ರೀವನೂ ವಿಭೀಷಣನೂ ಇರುವರು, ತಮ್ಮನ ಯುದ್ಧದ ಲೇಸೂ ಹೊಲ್ಲೆ ಹವೂ ನಿನ್ನನ್ನು ಸೇರಿತು ಎಂದು ಹೇಳಿ ಅವನನ್ನು ಅಕ್ಷಣನೊಡನೆ ಕಳುಹಿಸಿ ಕೋದಂಡವನ್ನು ಮೊಣಕಾಲಿನಿಂದ ಬೊಗ್ಗಿಸಿ ಅದರ ಕೊನೆಗಳಿಗೆ ತಿರುವನ್ನು ಸಂಧಾನಿಸಿ ಹೊರಟು ಬಂದು ಕುಂಭಕರ್ಣನೆದುರಿನಲ್ಲಿ ನಿಂತು ಶಿಂಜನಿಯನ್ನು ಸೆಳೆದು ಬಿಟ್ಟು ಧನುಷ್ಠಾ೦ಕಾರಧ್ವನಿಯನ್ನು ಮಾಡಿ ನಿಶಾಚರಬಲವನ್ನು ಕಂಪನಗೊಳಿಸಿ ಕುಂ ಭಕರ್ಣನನ್ನು ಯುದ್ಧಕ್ಕೆ ಕರೆದನು, ಆಗ ರಾಮನ ಬಿಲ್ಲಿನ ಹೆದ್ದನಿಯು ಅರೆಮಗು ಕಿವಿಗಳ ಭಟನಿಗೆ ಸಿಡಿಲು ಹೊಯ್ದಂತಾಗಲು ; ಮಾ, ಮಾ, ರಾಮನೇ, ರಣ ಭೀಮನೇ, ಭಾಪು ! ಎನ್ನುತ್ತ ತನ್ನ ಉಕ್ಕಿನ ಮಹಾರಥವನ್ನು ಮುಂದಕ್ಕೆ ನೂಕಿ ಬಾಣವನ್ನು ತುಡುಕಿ ಹೆದೆಗೆ ಸೇರಿಸಿ ರಾಮನನ್ನು ಕುರಿತು-ಎಲೈ ರಾಮನೇ, ನೀನೆಯೋ ಬನದಲ್ಲಿ ಭಾಮಿನಿಯನ್ನು ಕಳೆದು ಕೊಂಡವನು ! ನೀನು ಬಹು ಪರಾಕ್ರ ಮಶಾಲಿಯಾಗಿದ್ದೀ ! ನೀನು ನಮ್ಮ ಕುಂದದ ರಣೋತ್ಸಾಹವನ್ನು ನೋಡು ಎಂದು ಗರ್ಜಿಸಿದನು. ಆಗ ಶ್ರೀರಾಮನು--ಎಲೈ ಕುಂಭಕರ್ಣನೇ, ನೀವು ರಾಕ್ಷಸರಾಜಕುಲ ದವರು, ನಾವು ಮನುಜರಾಜಕುಲದವರು. ನಿಮಗೆ ದೇವಕುಲವು ಅಂಜುವುದು. ನಾವು ದೇವಕುಲಕ್ಕೆ ಅಂಜುವೆವು. ಹೀಗಿರುವಲ್ಲಿ ನಿಮಗೂ ನಮಗೂ ಸರಿಯೆಂದ ರೇನು ? ಆದಾಗ್ಯೂ ನೀನು ಮನುಜರಾದ ನಮ್ಮ ಯುದ್ದ ಕ್ರಮವನ್ನೂ ಬಾಣಸಾರ ವನ್ನೂ ಸಂಭಾವಿಸಿ ನೋಡು ಎನ್ನುತ್ತ ಅಸಮಾನಶರವನ್ನು ಮೂಡಿಗೆಯಿಂದ ತೆಗೆದು ಶರಾಸನದಲ್ಲಿ ಹೂಡಿ ಪ್ರಯೋಗಿಸಲು ; ರಕ್ಕಸನದನ್ನು ಕಂಡು ಆ ಮಹಾಸ್ತ್ರವು ತನ್ನ ಬಳಿಗೆ ಬರುವುದಕ್ಕಿಂತಲೂ ಮೊದಲೇ ಅದರ ನಿವಾರಣಾರ್ಥವಾಗಿ ಎಷ್ಟು ಸರಳು ಗಳನ್ನು ಪ್ರಯೋಗಿಸಿದಾಗ್ಯೂ ಅವುಗಳೊಂದನ್ನೂ ಗಣಿಸದೆ ನುಗ್ಗಿ ಬಂದು ಆ ರಾಮ ಬಾಣಗಳು ಖಳನ ಅವಯವಗಳಲ್ಲಿ ಹೊಕ್ಕು ಹೊರಟು ರಕ್ತವನ್ನು ಹೊರಡಿಸಿದುವು. ಆಗ ಕುಂಭಕರ್ಣನು ವಿವಿಧಬಾಣಪ್ರಯೋಗಗಳನ್ನು ಮಾಡಿ ರಾಮನ ಸರ್ವಾಂಗ ಗಳಲ್ಲೂ ದ್ವಿಗುಣವಾಗಿ ರಕ್ತಪ್ರವಾಹವನ್ನು ಹರಿಸಿದನು. ಬಿಲ್ಲುಗಳೋ ? ಶಚೀ ಪತಿಯ ಬಿಲ್ಲುಗಳೋ ? ಹೆದೆಗಳ ಧ್ವನಿಗಳೋ ? ಸಿಡಿಲುಗಳ ಧ್ವನಿಗಳೋ ? ತನು ಗಳೋ ? ಕೆನ್ನಿರ್ದುಂಬಿದ ಬಲ್ಮುಗಿಲುಗಳೋ ? ಬಾಣಸಮಹಗಳೋ ? ಮಳೆ ವನಿಗಳ ಪರಂಪರೆಗಳೋ ? ಎಂಬ ಭ್ರಾಂತಿಯನ್ನು ಹುಟ್ಟಿಸುತ್ತ ರಾಮರಾವಣಾನುಜ ರಿಬ್ಬರ ಜಗಳವು ಜಗತ್ತನ್ನು ಮಳೆಗಾಲದಂತೆ ಮೋಹಗೊಳಿಸಿತು. ರಾಮನು ಸಿಂಗಾ ಡಿಯಲ್ಲಿ ಕೋಲನ್ನು ಸಂಧಾನಿಸಲು ; ಆ ಕಾಲದಲ್ಲಿ ಬೋಳೆಯರೋಜನಾದ ಬೃಹ ಸ್ಪತಿಯು ಶಹಬಾಸು ! ರಾಮಾ ! ಎಂದು ಹೊಗಳುತ್ತಿದ್ದನು, ಕುಂಭಕರ್ಣನು ಬಾಣ ಸಂಧಾನವನ್ನು ಮಾಡಲು ; ರಕ್ಕಸರೋಜನಾದ ಶುಕ್ರನು--ಭಾಪುರೇ ! ಕುಂಭ ಕರ್ಣಾ ! ಎಂದು ಕೊಂಡಾಡುತ್ತಿದ್ದನು. ಅವರಿಬ್ಬರ ಘೋರ ಯುದ್ದ ಸಂದರ್ಭದಲ್ಲಿ ಉಭಯಪಕ್ಷ ವೀರಕರಮುಕ್ತಗಳಾದ ಬಾಣವೂ ಹಗಳಿಂದ ರವಿಮಂಡಲವೆಲ್ಲಾ ತುಂಬಿ ಕತ್ತಲಾಯಿತು.
ಪುಟ:ಕಥಾ ಸಂಗ್ರಹ - ಭಾಗ ೨.djvu/೧೫೧
ಈ ಪುಟವನ್ನು ಪರಿಶೀಲಿಸಲಾಗಿಲ್ಲ.