196 ಕಥಾಸಂಗ್ರಹ-೪ ನೆಯ ಭಾಗ ವಿಚಿತ್ರಾಂಬರಗಳಿಂದ ಮಾಡಲ್ಪಟ್ಟು ಮನೋಪರಗಳಾದ ಕುಪ್ಪಸಗಳನ್ನು ತೊಟ್ಟು ಕಾಲುಗಳಿಗೆ ಕಿರುಗೆಜ್ಜೆಗಳ ಸರಗಳನ್ನು ಕಟ್ಟಿ ಕೊಂಡು ಸಾಲುಸಾಲಾಗಿ ಎದುರೆದು ರಾಗಿ ನಿಂತು ಅಭಿನಯಿಸುತ್ತ ನರ್ತಿಸುತ್ತ ಬರುತ್ತಿದ್ದರು, ಮತ್ತು ಮನೋಹರಗಳಾದ ಬಿಳಿಯ ನಿಲುವಂಗಿಗಳನ್ನು ತೊಟ್ಟು ನಾನಾವರ್ಣಗಳಿಂದ ಮನೋಜ್ಞಗಳಾದ ಪಾಗುಗ ಳನ್ನು ಧರಿಸಿ ಕೈಗಳಲ್ಲಿ ಚಿನ್ನ ದಿಂದಲೂ ಬೆಳ್ಳಿಯಿಂದಲೂ ಮಾಡಲ್ಪಟ್ಟ ಕೋಲುಗಳನ್ನು ಹಿಡಿದು ಕೊಂಡು ಜನರು ಒಬ್ಬರ ಮೇಲೊಬ್ಬರು ನುಗ್ಗದಂತೆ ಎಚ್ಚರವನ್ನು ಹೇಳುತ್ತ ಕಂಚುಕಿಗಳು ಬರುತ್ತಿದ್ದರು, ಮತ್ತು ಕುತ್ನಿ ಯ ಚಲ್ಲಣಗಳನ್ನು ತೊಟ್ಟು ತುಂಡಂಗಿ ಗಳನ್ನು ಇಟ್ಟು ಕೊಂಡು ವಿವಿಧವಾದ ಚಿನ್ನದ ಕಂಬಿಯ ಸಾಗುಗಳನ್ನು ಧರಿಸಿ ಚಿನ್ನ ಬೆಳ್ಳಿಗಳಿಂದ ಮಾಡಲ್ಪಟ್ಟ ತೋರದೊಣ್ಣೆಗಳನ್ನು ಹೆಗಲುಗಳ ಮೇಲೆ ಇರಿಸಿಕೊಂಡು ಅನೇಕರು ಸಜ್ ಪಬ್ಲಿಯಾಗಿ ಬರುತ್ತಿದ್ದರು, ಮತ್ತು ಅತ್ಯುನ್ನತವಾದ ಕೇತುದಂಡಗ ಇನ್ನೂ ಅನನ್ಯ ಜನ ಸಾಧಾರಣವಾದ ಬಿರುದುಗಳನ್ನೂ ಹಿಡಿದುಕೊಂಡು ಅಪರಿಮಿತಸಂ ಖ್ಯಾತರಾದ ಜನರು ಸಾಲುಸಾಲಾಗಿ ಬರುತ್ತಿದ್ದರು, ಮತ್ತು ವಂದಿಮಾಗಧವೈತಾಳಿಕಾ ದಿಗಳು ರಘುಕುಲತಿಲಕನಾದ ಶ್ರೀರಾಮನ ಪಾದುಕೆಗಳನ್ನು ಹೊಗಳುತ್ತ ಇಪ್ಪಕ್ಕಗ ಇಲ್ಲೂ ಬರುತ್ತಿದ್ದರು, ಮತ್ತು ಮುತ್ತೈದೆಯರಾದ ಸ್ತ್ರೀಯರು ಕಲಶ ಕನ್ನಡಿ ಮೊದಲಾದ ಮಂಗಲ ದ್ರವ್ಯಗಳನ್ನು ಹಿಡಿದು ಕೊಂಡು ಸಂತೋಷದಿಂದ ಬಂದರು. ನಾಲೈಸೆಗಳಲ್ಲೂ ಇಂದ್ರನೀಲಮಣಿಮಯವಾದ ನಾಲ್ಕು ಕೋಲುಗಳಿಂದ ಕೂಡಿ ದುದೂ ಮೇಲೆ ಪೀತಾಂಬರದಿಂದ ಪರಿಶೋಭಿಸಲ್ಪಟ್ಟುದೂ ಆದ ಚಪ್ಪರದ ನಡುಗಡೆ ಯಲ್ಲಿ ಭರತನ ಶಿರಸ್ಥಾಯಿಗಳಾದ ರಾಮಪಾದುಕೆಗಳು ಬರುತ್ತಿದ್ದುವು. ಬ್ರಹ್ಮ ಜ್ಞಾನಿಗಳಾದ ತಾಪಸ ಶ್ರೇಷ್ಠರು ಮುನಿವಟುಗಳೊಡನೆ ಕೂಡಿ ನಿಂಬೆಯ ಹಣ್ಣು ತೆಂಗಿನ ಕಾಯಿ ಉತ್ತತ್ತಿ ಈ ಮೊದಲಾದ ಫಲಗಳನ್ನೂ ಮಂತ್ರಾಕ್ಷತೆಗಳನ್ನೂ ಕೈಗಳಲ್ಲಿ ಹಿಡಿದುಕೊಂಡು ಋಗ್ಯಜುಸ್ವಾಮಗಳೆಂಬ ವೇದyಯ ವಾಕ್ಯಗಳ ಪಠನ ವನ್ನು ಮಾಡುತ್ತ ಪಾದುಕೆಗಳ ಹಿಂದು ಮುಂದುಗಡೆಗಳಲ್ಲೂ ಇಕ್ಕೆಲಗಳಲ್ಲೂ ಬರುತ್ತಿದ್ದರು, ಮತ್ತು ಅನೇಕ ಸಾಮಂತ ರಾಜಕುಮಾರರು ತೇಜೆಗಳನ್ನೇರಿಕೊಂಡು ಕುಂತಖಡ್ಡಾದ್ಯನೇಕಾಯುಧಗಳನ್ನು ಧರಿಸಿ ಬೆಂಗಾವಲಾಗಿ ಬರುತ್ತಿದ್ದರು. ಕೌಸ ಲ್ಯಾಸುಮಿತ್ರಾ ಕೈಕೇಯಿಯರೇ ಮೊದಲಾದ ಮಾತೃ ಜನಗಳೂ ಅಂತಃಪುರ ಸ್ತ್ರೀಯರೂ ರಜತ ಸುವರ್ಣಗಳಿಂದ ನಿರ್ಮಿತಗಳಾಗಿ ನವರತ್ನ ಖಚಿತಗಳೂ ಮನೋಹರಗಳೂ ಆದ ಅಂದಣಗಳನ್ನೂ ಪಾಲಕಿಗಳನ್ನೂ ಏರಿ ಮಹಾಸಂಭ್ರಮದಿಂದ ಬರುತ್ತಿದ್ದರು. ಆಗ ಹಿಮದಿಂದ ಬಿಡಲ್ಪಟ್ಟ ಚಂದ್ರನಂತೆ ನಿಮ್ಮ ಪರಂಪರೆಗಳನ್ನು ಕಳೆದು ಮತ್ತೂ ಜಗದಾಹ್ಲಾದಕರನಾಗಿರುವ ಶ್ರೀರಾಮಚಂದ್ರನು ತನ್ನಂತೆಯೇ ಜಟಾಚೀರಧ ರರಾಗಿ ಅನ್ನಾಹಾರಗಳನ್ನು ಪರಿತ್ಯಜಿಸಿ ಹದಿನಾಲ್ಕು ಸಂವತ್ಸರಗಳಿಂದಲೂ ಫಲಾ ಹಾರಗಳನ್ನು ಮಾತ್ರ ಮಾಡುತ್ತ ಬಡವಾದ ಮೈಯುಳ್ಳವರಾಗಿರುವ ತಮ್ಮಂದಿರಾದ ಭರತಶತ್ರುಘ್ನರನ್ನು ನೋಡಿ-ಅಯ್ಯೋ ! ನನ್ನಲ್ಲಿರುವ ಅಪಾರವಾದ ಭಕ್ತಿ ಪ್ರೀತಿಗೆ ಳಿಂದ ಇವರು ಇಷ್ಟು ದುಃಖಗಳಿಗೆ ಗುರಿಯಾದರಲ್ಲಾ ! ನನ್ನೊಬ್ಬನಿಂದ ಮಾತೃ ಜನಗ
ಪುಟ:ಕಥಾ ಸಂಗ್ರಹ - ಭಾಗ ೨.djvu/೨೦೬
ಈ ಪುಟವನ್ನು ಪರಿಶೀಲಿಸಲಾಗಿಲ್ಲ.