ರಾಮನ ಪಟ್ಟಾಭಿಷೇಕವು 197 ಳಿಗೂ ಭಾತೃ ಜನಗಳಿಗೂ ಪುರಪರಿವಾರ ಜನರಿಗೂ ಇಷ್ಟು ಕಷ್ಟ ಸ್ಥಿತಿಯು ಸಂಪ್ರಾಪ್ತವಾಯಿತು. ಅಹೋರಾತ್ರಿಗಳಲ್ಲೂ ಪರಹಿತನಾದ ನನ್ನ ಸ್ಥಿತಿಯಲ್ ಸರ್ವ ರಿಗೂ ದುಃಖವನ್ನೇ ಕೊಡುತ್ತಿರುವುದಲ್ಲಾ ! ಆಗಲಿ, ಇದೆಲ್ಲಾ "ಅಘಟನಘಟನ ಸಮರ್ಥನಾದ ಭಗವಂತನ ಚಿತ್ತವು. ಅವನಿಲ್ಲದೆ ತೃಣವಾದರೂ ಚಲಿಸುವುದಿಲ್ಲ ಎಂದು ಹೇಳುವ ಶ್ರುತಿವಚನವು ಸರ್ವಲೋಕಪರಿಗ್ರಾಹ್ಯವು, ಈ ಲೋಕದ ಸ್ಥಿತಿಯನ್ನು ಕುರಿತು ಯೋಚಿಸಿದರೆ ಯಾರಿಗೂ ಅತ್ಯಂತ ಸುಖವಾದರೂ ದುಃಜವಾದರೂ ಉಂಟಾ ಗಲಿಲ್ಲ. ಕೆಳಗಡೆಯು ಮೇಲಕ್ಕೂ ಮೇಲ್ಲ ಡೆಯು ಕೆಳಕ್ಕೂ ಆಗುತ್ತಿರುವ ರಥಚಕ್ರ ನೇಮಿಯಂತೆ ಸುಖಾನಂತರದಲ್ಲಿ ದುಃಖವೂ ದುಃಖಾನಂತರದಲ್ಲಿ ಸುಖವೂ ಸಂಭವಿ ಸುತ್ತ ಇರುವುದು ಸ್ವಾಭಾವಿಕವು, ಇದಕ್ಕಾಗಿ ನಾವು ಮಾಡತಕ್ಕುದೇನು ? ಎಂದು ಯೋಚಿಸುವುದು ಯುಕ್ತವಾದರೂ ಜಗತ್ತನ್ನೇ ಭವಯ೦ತ್ರದಲ್ಲಿ ಸಿಕ್ಕಿಸಿ ನರಳಿಸುವ ಮಮತಾಶಕ್ತಿಯು ಆಕುಂಠಿತವಾದುದು ಎಂದು ವಿವಿಧವಾಗಿ ಯೋಚಿಸುತ್ತ ಮರು ಗು, ಶೀಘ್ರವಾಗಿ ವಿಮಾನದಿಂದ ಭೂಮಿಗಿಳಿಯಲು ; ಆಗ ಭರತನು ಬೇಗನೆ ಮುಂದೆ ಬಂದು ಶ್ರೀರಾಮನ ಅಡಿದಾವರೆಗಳಿಗೆ ನವರತ್ನ ಖಚಿತವಾದ ದಿವ್ಯ ಪಾದುಕೆ ಗಳನ್ನು ತೊಡಿಸಿ ಸಾಷ್ಟಾಂಗವಾಗಿ ಭೂಮಿಯಲ್ಲಿ ಬಿದ್ದು ನಮಸ್ಕರಿಸಿದನು. ಆ ಕೂಡಲೆ ರಿಪುಭಯಂಕರನಾದ ಶತ್ರುಘ್ರನು ಅತಿ ಸಂಭ್ರಮದಿಂದ ಮುಂದೆ ಬಂದು ಸೀತಾರಾಮಲಕ್ಷ್ಮಣರಿಗೆ ನಮಸ್ಕರಿಸಿದನು. ಆಗ ಆನಂದಬಾಷ್ಪ ಸಂಯುಕ್ತ ನೇತ್ರನಾದ ಶ್ರೀರಾಮನು ಪ್ರಿಯರಾದ ಭರತ ಶತ್ರುಘ್ನರನ್ನು ತೆಗೆದಪ್ಪಿ ಕೊಂಡು ಮುದ್ದಿಸಿ ಮೈದ ಡವಿ ಮುಂದಲೆಯನ್ನು ಆಘ್ರಾಣಿಸಿ ಮುಂದೆ ಬಂದು ಕೌಸಲ್ಯಾದಿ ಮಾತೃಜನಗಳಿಗೆ ಸೀತಾ ಲಕ್ಷ್ಮಣರೊಡನೆ ಕೂಡಿ ನಮಸ್ಕರಿಸಲು ; ಕೌಸಲ್ಯಯು ಸೀತಾರಾಮಲಕ್ಷ್ಯ ಣರನ್ನು ಆಲಿಂಗಿಸಿಕೊಂಡು ಪರಮಾನಂದರಸದಿಂದ ಅಭಿಷೇಕಿಸುವಳೋ ಎಂಬಂತೆ ನಿರರ್ಗಳವಾಗಿ ಹೊರಟು ಹರಿಯುತ್ತಿರುವ ಆನಂದಬಾಷ್ಟೋದಕಸೇಚನೆಯಿಂದ ಅವ ರನ್ನು ನೆನೆಸಿದಳು. ಆ ಮೇಲೆ ಸರ್ವಲೋಕಸುಖಾರಾಮನಾದ ಶ್ರೀರಾಮನು ವಶಿಷ್ಠಾ ದಿಮುನಿಜನಗಳಿಗೂ ಗುರು ಜನಗಳಿಗೂ ಭಯಭಕ್ತಿ ಪೂರ್ವಕವಾಗಿ ನಮಸ್ಕರಿಸಿ ಅಪ್ರತಿ ಹತಗಳಾದ ಅವರ ಶುಭಾಶೀರ್ವಾದಗಳನ್ನು ಕೈಕೊಂಡು ಮುಂದೆ ಬಂದು ಬಂದು ಗುಂಪಾಗಿ ನೆರೆದಿರುವ ಮಂತ್ರಿ ಸೇನಾಪತಿ ಪೌರಪರಿಜನಾದಿಗಳನ್ನು ಅವರವರ ತಾರತ ಮ್ಯಾನುಸಾರವಾಗಿ ಹಸ್ತಲಾಘವಾಲಿಂಗನಾವಲೋಕನಪ್ರಿಯವಚನಗಳಿಂದ ಮನ್ನಿಸಿ ಸಂತೋಷದಿಂದಿರುತ್ತಿದ್ದನು. ಅನಂತರದಲ್ಲಿ ಸತ್ಯಸಂಧನಾದ ಭರತನು ಶ್ರೀರಾಮಚಂದ್ರನಿಗೆ ನಮಸ್ಕರಿಸಿ ಎದ್ದು ಕೈಮುಗಿದು ನಿಂತುಕೊಂಡು--ಎಲೈ ಸುಜನಸೇವನಾದ ಶ್ರೀರಾಮಚಂದ್ರನೇ, ಸರ್ವಜ್ಞನಾದ ನೀನು ಮೊದಲು ನನ್ನ ತಾಯಿಯಾದ ಕೈಕೇಯಿಯು ಮಾತುಗಳನ್ನು ಮನ್ನಿಸಿ ತಂದೆಯಾದ ದಶರಥ ಭೂಪಾಲನನ್ನು ಸತ್ಯ ಪ್ರತಿಜ್ಞನನ್ನಾಗಿ ಮಾಡುವುದ ಕ್ರೋಸ್ಕರ ವನವಾಸೋದ್ಯುಕ್ತನಾಗಿ ನನ್ನ ಅಧೀನಕ್ಕೆ ಕೊಟ್ಟಿದ್ದ ಈ ಕೋಸಲ ರಾಜ್ಯವನ್ನು ಈಗ ತಿರಿಗಿ ನಿನ್ನ ವಶಕ್ಕೆ ಒಪ್ಪಿಸಿ ಕೃತಾರ್ಥನಾಗಿದ್ದೇನೆ. ದೊಡ್ಡ ಗೂಳಿ
ಪುಟ:ಕಥಾ ಸಂಗ್ರಹ - ಭಾಗ ೨.djvu/೨೦೭
ಈ ಪುಟವನ್ನು ಪರಿಶೀಲಿಸಲಾಗಿಲ್ಲ.