ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಪಂಚಮಾಂಕಂ. ಬ ( ಅನಂತರಂ ಕಂಚುಕಿ ರಂಗಮಂ ಸಾರ್ದು ) ಕಂಚುಕಿ-ಕಂ!! ನಡುಗುಗುಮೆನ್ನಯದೇಹಂ || ನುಡಿವೊಡವೀರಸನೆಯುಬ ಸಂಬಡುತಿರ್ಕು೦ || ಅಡಿಯಿಡೆ ಜಾರುಗುಮಿಯೊಳ್ | ಫಡಫಡ ನಾಂ ಪೊಲಬುಗಿಟ್ಟೆನಡಸಿದಜರೆಯಿಂ || ೫೫ || ಎಲೆಲೆ ! ಪರಸೇವೆಯೆ ಕಷ್ಟ. ಅದರೊಳುಮಂತಪ್ಪ ಪಳವೆಯೊ ೪ಯರಸಾಲೆಯೊಳ ತಿಕಷ್ಟಂ. ಬೆಸಸಿದ ಕಷ್ಟದೊಳೊಂದುವ ನೆಸಗದೆ ತೇನತೇನಂ ಸುಳಿದಾಡುವ ಸೇವಕರಾಳರ್ಗೆ ಮೆಚ್ಚುವಣಿಗೆಯ ನೃತ್ಯರೆನಿ ಸ್ಪರ್. ಎನ್ನನ್ನ ರೈಸೆ ; ಅಪ್ರಯೋಜಕರೆಂಬ ಅಪಪ್ರಥೆಗೆ ತಾಯ್ಕೆಲೆಯೆನಿ ಪು. ಈಗಳಾ ಮಧೂಲಕನಂ ಮಾಲಿನಿ ತನ್ನ ಮೋಹಪಾಶದೊಳ್ ಸಿಕ್ಕಿ ನಿ, ನಮ್ಮ ಚಂಡವಿಕ್ರಮ ಮಹಾರಾಜನಂ ತಂತ್ರದಿಂ ಕೊಲಿಸಿ, ಸ್ವಯಂಪ್ರ ಭಾದೇವಿಯಂ ಸೆರೆಗೆಯ್ದಿರ್ಪಳ್, ಕನಕಲತಾವರಣ ಕಾಲದೊಳ್ ವಿಕ ಮನಿಂಹಂಗೆ ಸಾದ್ಯವೆಸಗಿದರೆಂಬ ವ್ಯಾಜದಿಂ ಮಂದಾರಿಕಾ ಸಾಧನಿಕೆಯ ರುಂ ದೇಶಭ್ರಷ್ಟಯರಾದರ್‌. ಅನುದಿನವು ಮೆಮ್ಮ ದೇವಿ ನಿದ್ರಾಹಾರಂಗಳ ನುಳಿದು ಪಲುಂಬಿ ಹಂಬಲಿಸುತಿರ್ಪಟ್, ಇಂತಪ್ಪ ದುಃಖ ಪರಂಪರೆಯ ನಭೀಕ್ಷಿಸಿಯುಂ ಕುಂದದ ನನ್ನ ಕಲ್ಲೆರ್ದೆಯ ನಿನ್ನೆವೊರೆವೆಂ. ಕಂ || ಧರೆಯೊಳ್ ಪಂದಿವಸಂಗಳ | ಪುರುಷಂ ಬದುಕಿರ್ದೊಡಾತನತಿಕಪ್ರಸರಂ ||