ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಯಾವ ಮಂಕೊ ಕವಿದು, ಹದುಗಿರುವೆವಲ್ಲ ? ರೊಕ್ಕ ಕೈಯೊಳಗಿಲ್ಲ, ಹುರುಡು ಮೈಯೊಳಗಿಲ್ಲ, ಹೆಮ್ಮೆಯೊಂದನು ನೆಚ್ಚಿ ದೆಸೆಗೆಟ್ಟೆ ನಲ್ಲ ! ಅಕ್ಕ ತಂಗಿಯರೆಲ್ಲ ಮುಂದು ಮುಂದಾಗಿರಲು ನಮ್ಮ ತಾಯೊಬ್ಬಳೇ ಸೊರಗಿರುವಳಲ್ಲ ! ಅಮ್ಮನನು ಕೈಬಿಡದೆ ಇನ್ನು ಮೆರೆಸುವೆನೆ ? ಹಿರಿಯ ಹೆಸರನು ತಿರುಗಿ ಗಳಿಸಿಕೊಳ್ಳುವೆವೆ ? ಸರಿಯವರ ತಲೆಮೆಟ್ಟಿ ಮುಂದೆ ನಿಲ್ಲುವೆವೆ ? ನೆಮ್ಮದಿಯ ಬೆಳಕಿನಲಿ ನಾವು ಬಾಳುವೆವೆ ? ತೀ. ನಂ. ಶ್ರೀಕಂಠಯ್ಯ


೯. ರಕ್ಷಿಸು ಕರ್ಣಾಟಕ ದೇವಿ ರಕ್ಷಿಸು

ಕರ್ಣಾಟಕ ದೇವೀ, ಸಂ ರಕ್ಷಿಸು ಕರ್ಣಾಟಕ ದೇವೀ || ಪ !!

ಕದಂಬಾದಿ ಸಂಪೂಜಿತ ಚರಣೆ ಗಂಗಾರಾಧಿತ ಪದನಖ ಸರಣೆ ಚಲುಕ್ಯರುತ್ತಮ ಕಾಂಚೀ ಕಿರಣೆ ರಾಷ್ಟ್ರಕೂಟ ಮಣಿಕಂಠಾಭರಣೆ ಚಾಲುಕ್ಯಾಂಶುಕ ಶೋಭಾವರಣೆ. ಯಾದವಮಣಿ ಕಂಕಣಾಂಶು ಸುಂದರಿ ಬಲ್ಲಾಳರ ಭುಜಭೂಷಣ ಬಂಧುರೆ |

ವಿಜಯನಗರ ಮಂಗಲಮಣಿ ಕಂಧರೆ ಮೈಸೂರೊಡೆಯರ ಸುಕೀರ್ತಿಮಂದಿರೆ ಮಾಂಡಲಿಕಾವನ ಭಾರಧುರಂಧರೆ. ಮತ ಸುಸ್ಥಾಪಕ ಸ್ಥಾಪಿತಪ್ರಾಣೆ ಶಿಲ್ಪಕಲಾಮಂಟಪ ಸುಸ್ತಾನೆ. ಕವಿಜನ ಕೀರ್ತಿತ ಸುಯಶಸ್ನಾಣೆ ಸಾಧು ಸತ್ಯಥಾ ಭೇರೀ ಧ್ಯಾನ 'ಸೈತಿಹಾಸನೀರಾಜನ ರಾಣಿ.

ಶಾಂತಕವಿ