ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೪೭ ಹೊಸದು ಬಾಳು ನಮ್ಮದೆ, ಇಂದು ಯು-ಗಾದಿಯು, ನಮ್ಮ ಒಸಗೆಯಾದಿಯು ! ಪು. ತಿ. ನರಸಿಂಹಾಚಾರ್ ೪೭. ಕನ್ನಡತಾಯ ನೋಟ ಹಿರಿಯರಿರ, ಕೆಳೆಯರಿತ, ಅಕ್ಕತಂಗಿಯರಾ, ಅಣ್ಣತಮ್ಮದಿರಾ, ಒಸಗೆನುಡಿ ತಂದಿಹೆನು ನಾನೊಂದ, ತಾಯಿಂದ, ಸಿರಿಯ ತಾಯಿಂದಕೇಳುವಿರ ಕಿವಿಗೊಟ್ಟು, ತಾಳುವಿರ ಎದೆನೆಟ್ಟು, ತಾಳಿ ಬಾಳುವಿರಾ? ಕಣ್ಣಾರ ಕಂಡೆನವಳನು ಕಂಡು, ತಂದಿಹೆನು, ಕೇಳಿ, ಅವಳೆನ್ನೋಳಾಡಿದುದನಾಡುವೆನು ನಿಮ್ಮಲ್ಲಿ, ಕೇಳಿ, ಬಳಸಿ ಬಂದೆನು ಸುತ್ರ ಕನ್ನಡದ ನಾಡುಗಳ ಸಿರಿಯ ನೋಡು, ತಾಯಡಿಯ ಹುಡಿಯ ತಲೆಗಾನು, ಹರಕೆಯ ಪವಿತ್ರ ಯಾತ್ರೆಯಲಿ. ಏನು ಚೆಲುವಿನ' ನಾಡು ! ಚೆಲುವು ಚೆಲ್ಲುವ ನಾಡು ! ಕನ್ನಡದ ನಾಡು ! ಏನು ಚಿನ್ನದ ನಾಡು ! ನಮ್ಮೊಲುಮೆಯಾ ನಾಡು ! ನಮ್ಮಿನಿಯ ನಾಡು ! ಕಾವೇರಿಯಿಂದಮಾ ಗೋದಾವರಿಯ ವರೆಗೆ ಚಾಚಿರುವ ನಾಡು ! ಬಳಸಿದೆನು, ಸುತ್ತಿದೆನು, ಕಣ್ಣಿಯ ನೋಡಿದೆನು, ಕುಣಿದು ಹಾಡಿದೆನು : ಕೆಳಗೆ ಬೆಳೆಹೊಲ ಕಪ್ಪು, ಮೇಲೆ ಬಾಂಬೂಲ ಕಪ್ಪು, ಬೆಟ್ಟಗಳು ಕಪ್ಪು, ಕಾರ್‌ಮೋಡಗಳು ಕಪು, ಹೊಳೆ ಕೆರೆಯ ಮಡು ಕಪು, ತಾಯ ಕಾಲ್ ತೊಳೆವ ಉಪ್ಪು ಕಡಲದು ಕಪ್ಪು, ಜನ ಕಪ್ಪು- ಏನೆಂದೆ ? ತಪ್ಪು, ತಪ್ಪು! ಮೂಡ ಪಡುವಲು ತಿರುಗು, ಬಡಗ ತೆಂಕಲು ತಿರುಗು, ಕರ್-ನಾಟದಲ್ಲಿ, ನಿಮೂರ ಹೆಣ್ಣುಗಳ ಕಣ್-ನೋಟ, ತಣ್-ನೋಟ ಕರ್ಪು, ಬಲು ಕರ್ಪು ! ಕರ್ಪೊ, ಬೆಳೊ ಕಾಣೆ, ಕನ್ನಡದ ಕಣೋಟ- ಕೂರ್ಪು, ಆರ್ಪು! ಓ ತಾಯೆ, ಕನ್ನಡದ ಸೆರ್‌ - ತಾಯೆ, ನಮ್ಮಮ್ಮ, ದೇವಿ, ಸವಾಜ್, ಸುಳಿಗುರುಳು, ನಗೆಗಣ್ಣು ಏನು ಕಪ್ಪೆ ನಿನಗೆ - ಮುತ್ತಿಡುವ ಕಪ್ಪು! ನಿನ್ನ ಕಲಿಗಳ ಕೂರ್ಪು, ಕೆಚ್ಚೆದೆಯ ಕಟ್ಟಾಳ ಕೂರ್ಪು, ನೆಚ್ಚಾರ್ಪು, ಆರು ತಡೆಯಲುಬಹುದು- ಪುಲಕೇಶಿ ಹರ್ಷರೇ ಹೊಯ್ತು ಸಾರುವರು. ಕರ್ಪಿರಲಿ, ಕೂರ್ಸಿರಲಿ, ನಿನ್ನ ಬೆಳ್ಳನು ಹೇಳು- ಕೂರಸಿಯ ಮಿಂಚು, ಕಾರ್-ಮಿಂಚು, ಹೆಣ್ಮಣಿಗಳಾ ಕಣ್ಣ ನುಣಿಂಚು, ಅರಿದರಾ ಕೂರ್-ನೋಟ ಮಿಂಚು ! 100