ಈ ಪುಟವನ್ನು ಪ್ರಕಟಿಸಲಾಗಿದೆ

೧೧

ಬಿಲ್ಲ ತಿರುವಂ ಪಟವನ್ನ ವೆಚ್ಚು ನೆಱೆಯದೆ ಕಟ್ಟಿದಲಗಂ ಕಿತ್ತು.... ಕುಱಿಯ
ಹಿಂಡಂ ತೋಳಂ ಪೊಕ್ಕಂತೆಯುಂ
ಕರ್ಬುದೊ೦ಟವನಾನೆ ಪೊಕ್ಕಂತೆಯುಂ ಪೊಕ್ಕು ಕುತ್ತಿ ನೂಂಕುತ್ತ ಬಪ್ಪಾಗಳು
ಮಲೆದಿದಿರಾಂತ ಮಾರ್ವಲವನಳ್ಕುಱೆ ತಾಗಿ ಭುಜಪ್ರತಾಪದಿಂ
ದಲಗನೆ ಕಿರ್ತು ಪೊಯ್ಯೆ ನಿರತಂ ಕಣಕಾಲ್ ಮೊಳಕಾಲ್ ಮುಖಂ ಭುಜಂ
ತಲೆಬಳೆಯಾಗೆ ಸಂಬಳಿತ ವೋಪಿನಮೊಂದೆರಡಟ್ಟೆ ಯೋಡಲುಂ
ತೊಲಗದೆ ನಿಂದು ತಳ್ತಿಱಿದರಿರ್ಬರುಮಾಹನ ರಂಗಭೂಮಿಯೊಳ್
ಅಂತವರಿಬ್ಬರುಂ ಪೋಗದೆ ನಿಂದುದಂ ಕಂಡು ಪೊರಿದಾಳು ಕುದುರೆಯ
ಮೊರ್ಬ೦ ತಾಗಿಯೆಸಲ್ವಿಱಯಲು೦ (?) ಕೋಲ್ ಕೊಂತಂಗಳೂಡಾಗಿ ಬಿರ್ದು ಸುರಲೋಕಪ್ರಾಪ್ತರಾದಡವರಿರ್ಬರ ಪೆಣನಂ ಮೆಟ್ಟಿ ತುಱು ಪರಿಯಲವರಿಬ್ಬರಿಂ
ಕಿಱಿಯ ಬೊಪ್ಪಗಾವುಂಡ ತಮ್ಮಣ್ಣಂದಿರಿಬ್ಬರ ಕಳೇಬರವಂ ಕಂಡು ಸೈರಿಸ
ಲಾಱದೆ ನಿಮಾದುದನಪ್ಪೆನಲ್ಲದೊಡೇಂ ತುಱುವಂ ಬಪ್ಪೆನೆಂದೊಂದೆ
ಮೆಯ್ಯೋಳು ಹಿಂದ ಹತ್ತಲಾತಂಗೆ ಪಡಿಬಲದಾಗಿ ಮಂಡಳಿಕಂ ವುದ್ದರೆ ಯೆಕ್ಕ
ಲರಸನಾಳ್ಕುದುರೆಯಂ ಹೇಳಲಾ ನೆರವಂ ಕೂಡಿಕೊಂಡು ಹಾಲ್ಗಟ್ಟದ ಬಯಲ
ಲೊಡ್ಡನೊಡ್ಡಿದರಿಬಲವಂ ಬೊಪ್ಪಗವುಂಡ ಕೊಂದು ತುಱುವಂ ಮಗುಳ್ಚಿ
ಕೊಂಡು ಬಂದಣ್ಣಂದಿರಂ ಸಂಸ್ಕಾರಿಸಿ ಜಳದಾನಕ್ರಿಯೆಯಂ ಪರೋಕ್ಷ ವಿನಯ
ಮುಮಂ ಮಾಡಿ ಇರ್ಬರ್ಗಂ ಕಲ್ಲ೦ ನಿಱಿಸಿದಲ್ಲಿ ಮಂಗಳ ಮಹಾಶ್ರೀ ಶ್ರೀ

(iv) ೮೦೦


ಸ್ವಸ್ತಿ ಪ್ರಭೂತವರ್ಷ ಶ್ರೀ ಪೃಥಿವೀವಲ್ಲಭ ಮಹಾರಾಜಾಧಿರಾಜ ಪರಮೇ
ಶ್ವರ ಭಟ್ಟಾರಕ ಶ್ರೀ ಗೋ ಇಂದರಸರ್ ಚತುಸ್ಸಮುದ್ರಾ೦ತ ವಸುಧೆಯಾನ್
ಧವಳೈ ಕಛತ್ರಛಾಯೆಯಿಂದಾಳೆ | ಬನವಾಸಿಮಂಡಲಮಾನಾಸಮುದ್ರಾ೦ತಂ
ರಾಜಾದಿತ್ಯರಾಸರ್ ಆಳೆ ! ಆಳುವ ಖೇಡಮಱುಸಾಸಿರಮುಮಾನ್ ಚಿತ್ರವಾಹನ
ನಾಳುತ್ತುಂ ಬಾಯ್ಕೇಳದಿರೆ ಮುನಿದು ಕೊಲ್ಲಿ ಪಲ್ಲವನೊೞಂಬಂ ನೋೞಂಬರಾ
ದಿತ್ಯನನ್ ವೆಸಸಲಾ ಕಾಕರಾಸರುಮೆಟ್ಟು ಪೆರ್ಗುಂಜಿಯ ಕೋಟಿಯಾನ್
ರೋಹಿಸಿ ಬಿಟ್ಟು ಎರಡುಂ ಬಲದ ವೀರಭಟರ್ಕಳೊೞ್ದು ಪೊಱಮಟ್ಟು, ಬಿಲ್ವಲ್ಲೋಳ್ ಕುದುರೆ ಕುದುರೆಯೊಳ್ ಕಿಟ್ಟಿ, ಅತಿತುಮುಲಕಾಳಗಂ ಪೆೞ್ಚಿ ಬಲದ ಕಯ್ಯಂ ಚಿತ್ರವಾಹನನೊತ್ತಿ ಪುಗುತ್ತ೦ದು ಕಾದಿಸೆ ಕಂಡು ಕುಲಮುದ್ದ ನೀನೀ ಕಯ್ಯ ಪೊಕ್ಕು ಕಾದೆಂದು ಬೆಸಸೆ ಪ್ರಸಾದಮೆಂದೆಯ್ದಿ ಕಿಟ್ಟಿ ಕಾದಿ ಮಱುವಕ್ಕ ದವರ ಮೆಯ್ಮೆಯ್ಯಂಬಾಗೆ ಎಚ್ಚೋಡಿಸಿ ಆ ಕಯ್ಯಂ ಗೆಲ್ದು ತಾನುಂ ಪಲವುಂ ಎಸುವೆತ್ತು ಎಯ್ವೊದೆದಪ್ಪಿ ದಪ್ಪೊಲ್ ಕಣೆ ಪಂಜರದೊಳೆಱಗಿ ಭೀಷ್ಮನ್ ವಿೞ್ದಂತೆ ನೆಲ ಮುಟ್ಟದೆ ಬಿೞ್ದೋನಾನ್ ದೇವಗಣಿಕೆಯರರ್ಘಯಂಬಿಡಿದು ಬಂದಿದಿರ್ಗೊ೦ ಡುಯೆ ವೀರಲೋಕಕ್ಕೆ ಸಂದೋನ್ | ಅರಬದ್ದಗಿಯರವಾದ ಪುಲಿ ಮಾಡಿದಾನ್