ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕನ್ನಡ ಪರಮಾರ್ಥ ಸೋಪಾನ

ಹರಿಸಿ ತಾಪವನು | ಕಾಲಿಲೆ | ವರಿಸಿ ಮಮತೆಯನು |

ತರಿಸಿ ಸಂಶಯ ಹರಿಸಿ ದುರ್ಗುಣ | ಕೊರಿಸಿ ವ್ಯಸನವ | ಜಾರಿಸಿ ಮದಗಳ |

ಸುರಿ ಸುರಿ ಸುರಿದು ಸುಧಾರಸ ರಂಜಕ | ಮೆರೆವ ಸಹಸ್ರದಳ ಮಂಚದ ಮೇಲೆ

ತಡಿಯೊ ವಾಯುಗಳನ್ನು | ತುಂಡಾಗಿ | ಕಡಿಯೊ ಕೇಶಂಗಳನು | ಮಡಿಯೋ ಸಂಶಯ | ಬಡಿಯೋ ಶತ್ರುವ |

ಕಿಡಿ ಕಿಡಿ ಉದರಿಸಿ ಮೊಹಾಜ್ಞಾನಗಳ | ಬಿಡಿ ಮುತ್ತುದುರುವ ಹಂಸತಲ್ಪದ ಮೇಲೆ

ಅಳಿದ ಮಮತೆಗಳನು | ಕಾಲಿಲೆ | ತುಳಿದೆ ವೃತಗಳನು | ಕಳಿದೆ ವ್ಯಸನವ | ಆಳಿದೆ ಸೊಕ್ಕವ |

ಎಳದೆ ನ್ಯಾಯವ | ಬಳಿದೆ ಮೋಹವ | ಥಳ ಥಳ ಥಳ ಬೆಳದಿಂಗಳಿನೊಳು | ಬಲ್ಲ ಚಿದಾನಂದನ ಬೆಳಕಿನೊಳು


ನಿತ್ಯಾನಂದದಲಿ ನೆಲೆಸಿರುವವನು ಅನಿತ್ಯವ ಬಯಸುವನೆ ? ( ರಾಗ- ಪಿಲ್ಲ, ತಾಲ-ಕೇರವಾ )

ಕಾಲ ಕರ್ಮವ ಕಾಲಿಲೆ ಒದಿದವ | ಕತ್ತಲಿಗಂಜುವನೆ ||

ಆಲಿಯ ಮೇಲಾತ್ಮನ ನಿಲಿಸಿದ ಪುರುಷ | ಬಾಲೇರ ಬಯಸುವನೆ

ಅಮೃತದ ತೃಪ್ತಿ ಆದ ಮಹಿಮನು | ಅಂಬಲಿ ಬಯಸುವನೆ ||

ಕುಂಭಕ ವಾಯು ನಿಲಿಸಿದ ಮನುಜನು | ಕುಂದಿ ಕುದಿಯುವನೆ

ವೇದ ಆಗಮನ ಸಾಧಿಸಿದವ ಭವ | ಬಾಧೆಗೆ ಅಂಜುವನೆ ||

ನಿತ್ಯಾನಂದ ಆನಂದದೊಳಿದ್ದವ | ಅನಿತ್ಯ ಬಯಸುವನೆ