ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಕನ್ನಡ ಪರಮಾರ್ಥ ಸೋಪಾನ
ತತ್ವಮಸಿ ಮಹಾವಾಕ್ಯ ಕೇಳಿದವ ಮೃತ್ಯುವಿಗಂಜುವನೆ ||
ಆದಿ ಮೂರುತಿ ಗುರು ಭವತಾರಕನು 1 ಭೇದವ ಮಾಡುವನೆ
ಆತ್ಮಾನಂದ ಪರವಶತೆಯಲ್ಲಿಯ ಸ್ವಗತ ಭಾಷಣ ( ರಾಗ-ಭೈರವಿ, ತಾಲ-ದೀಪಚಂದಿ )
ಇನ್ನೇನಿನ್ನೇನು | ಎನಗಿನ್ನು | ಇನ್ನೇನಿನ್ನೇನು
ಎನ್ನೊಳು ತನ್ನ ಮರ್ಮವ ತೋರಿದ | ಇನ್ನೇನಿನ್ನೇನು ||
ಮುನ್ನಿನ ಕರ್ಮವು ನಿರ್ಮೂಲವಾಯಿತು | ಇನ್ನೇನಿನ್ನೇನು ||
ಎನ್ನೊಳಾತ್ಮನ ಕುರುಹವು ತಿಳಿಯಿತು | ಇನ್ನೇನಿನ್ನೇನು ||
ಕನಸು ಮನಸು ಎಲ್ಲ ನಿನ್ನ ಸೇವೆಯಾಯಿತು | ಇನ್ನೇನಿನ್ನೇನು ||
ಭಾವದ ಬಯಲಾಟ ನಿಜವಾಗಿ ತೋರಿತು | ಇನ್ನೇನಿನ್ನೇನು ||
ಜೀವ ಶಿವದ ಗತಿ ಸೋಹ್ಯವು ತಿಳಿಯಿತು | `ಇನ್ನೇನಿನ್ನೇನು ||
ಜನ್ಮ ಮರಣದ ಜಂತ್ರವು ಮುರಿಯಿತು | ಇನ್ನೇನಿನ್ನೇನು ||
ಸಂದೇಹ ಸಂಕಲ್ಪ ಸೂತ್ರವು ಹರಿಯಿತು | ಇನ್ನೇನಿನ್ನೇನು ||
ಇಮ್ಮನವಿದ್ದುದು ಒಮ್ಮನವಾಯಿತು | ಇನ್ನೇನಿನ್ನೇನು ||
ಮಹಿಪತಿ ಜೀವನ ಪಾವನವಾಯಿತು | ಇನ್ನೇನಿನ್ನೇನು ||
ತನ್ನೊಳು ಭಾಸ್ಕರ ಗುರು ತಾನೆ ಆದನು | ಇನ್ನೇನಿನ್ನೇನು ||