ಕನ್ನಡ ಪರಮಾರ್ಥ ಸೋಪಾನ
ಹರಿವಾಸರ ಸಂಗವೂ ಆನಂದಕಂದನ ಒಲುಮೆ-ದರ್ಶನಗಳೂ ಲಭಿಸಿದುದರಿಂದ ಹೊರಹೊಮ್ಮಿದ ಧನೋದ್ಗಾರಗಳು ! ( ರಾಗ-ಭೈರವಿ, ತಾಲ-ದೀಪಚಂದಿ )
ಹರಿದಾಸರ ಸಂಗವು ದೊರಕಿತು ಎನಗೀಗ ಇನ್ನೇನಿನ್ನೇನು ||
ವರಗುರೂಪದೇಶ ಸಫಲವಾಯಿತು ಎನಗೀಗ ಇನ್ನೇನಿನ್ನೇನು
'ಹಲವು ದೇವಗಳೆಂಬ ಹಂಬಲ ಬಿಡಿಸಿತು | ಇನ್ನೇ | ಜಲಜನಾಭನ ನಾಮ ಜಿಹೈಯೊಳು ನೆಲೆಯಿತು | ಇನ್ನೇ
ಮಾಯದ ಸಂಸಾರ ಮಮಕಾರ ತಗ್ಗಿ ತು | ಇನ್ನೇ | ತೋಯಜಾಕ್ಷನ ಧ್ಯಾನ ಹೃದಯದೊಳು ನೆಲೆಸಿತು | ಇನ್ನೇ
ತಂದೆ ತಾಯಿ ಮುಚುಕುಂದ ವರದನಾದ | ಇನ್ನೇ | ಸಂದೇಹವಿಲ್ಲದ ಮುಕುಂದ ದಯಮಾಡಿದ | ಇನ್ನೇ
ಏನೆಂದು ಹೇಳಲಿ ಆನಂದಸಂಭ್ರಮ | ಇನ್ನೇ ! ಆನಂದ ಕಂದನ ಒಲುಮೆಯ ಗಳಿಸಿದೆ | ಇನ್ನೇ e
ಎನ್ನ ವಂಶಗಳೆಲ್ಲ ಪಾವನವಾದವು | ಇನ್ನೇ | ಚಿನ್ಮಯ ಪುರಂದರವಿಠಲಯ್ಯ ದೊರಕಿದ | ಇನ್ನೇ
ಭೂಕೈಲಾಸದಂತಿರುವ, ಸಂತರ ಸಭೆಯಾದ ಅನುಭವಮಂಟಪ ( ರಾಗ-ಭೂಪ, ತಾಲ-ದೀಪಚಂದಿ )
ಇದು ಘನತರ ಮೋಕ್ಷದುನಿಯ ಸಾಧನವು ಇದೆ ಅನುಭವಮಂಟಪವು
ಇದೆ ಗುರು ಚರಲಿಂಗ ಸ್ತೋತ್ರ | ಇದೆ ಕರಸ್ಥಲ ಇಷ್ಟ-ಪ್ರಣಮ್ ||
ಇದೆ ಷಟ್‌ಸ್ಥಲ ಬ್ರಹ್ಮಘೋಷ | ಇದೆ ಪ್ರಾಂಜಳ ಬ್ರಹ್ಮಜ್ಞಾನ
ಗುರುತರ ಶರಣನೆ ಕರೆಸಿ | ಪರಮಾತ್ಮನನುಭವಮಂಟಪವ ವಿಸ್ತರಿಸಿ || ಉರುವ ಕನ್ನಡಿಯ ಶೃಂಗರಿಸಿ |