ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶತಮಾನಗಳಿಂದ ಸಾಧಕರನೇಕರ ನಾಲಗೆಯ ಮೇಲೆ ನಲಿದಾಡುತ್ತಿರುವವು. ಅವರ ಜೀವನವನ್ನು ಚೆನ್ನಾಗಿ ರೂಪಿಸಿರುವವು. ನಿಂಬಾಳಕ್ಕೆ ಆಗಾಗ ಬರುವ ಅತಿಥಿಗಳೂ ಸಾಧಕರೂ ಶ್ರೀ ಗುರುದೇವರೆದುರು ಇಂಥ ಪದಗಳನ್ನು ಹೇಳು ತಿದ್ದರು. ಈ ರೀತಿ ಹಲ ಅತ್ಯುತ್ತಮ ಪದಗಳು ಅರಸದಲೇ ಬರುತ್ತಿದ್ದವು. ಅವರಿಂದ ಆಯ್ಕೆ ಗೊಂಡು ಅವರ ಸಂಗ್ರಹದಲ್ಲಿ ಸೇರುತ್ತಿದ್ದವು. ಅವರೆಡೆ ಈ ಪದಗಳ ಆಯ್ಕೆಯಂತೆ ಅವನ್ನು ಅಭ್ಯಸಿಸುವ ಹಾಗೂ ಅವುಗಳ ರಹಸ್ಯವನ್ನು ಅರಿಯುವ ಶ್ರೀ ಗುರುದೇವರ ಪದ್ಧತಿಯು ತುಂಬ ಅಪೂರ್ವ ವಾದುದು; ವಿಲಕ್ಷಣವಾದುದು. ಅವರ ಅಭ್ಯಾಸವು ಆಳವಾದುದು, ಸಾರಗ್ರಾಹಿ ಯಾದುದು; ಆಮೂಲಾಗ್ರವಾದುದು. ಅವರು ಮೊದಲು ಪದಗಳನ್ನು ಕೇಳುತ್ತಿದ್ದರು. ತರುವಾಯ ಅವುಗಳ ಅರ್ಥವನ್ನು ಹೇಳಿಸಿಕೊಳ್ಳುತ್ತಿದ್ದರು. ಆಮೇಲೆ ಅವನ್ನು ಎರಡನೆಯ ಸಲ ಹಾಡಲು ಹೇಳುತ್ತಿದ್ದರು. ಆಗ ಅವು ಅವರಿಗೆ ಸೇರಿದರೆ ತಮ್ಮ ಶಿಷ್ಯರೊಬ್ಬರಿಗೆ ಅವನ್ನು ದೇವನಾಗರೀ ಲಿಪಿಯಲ್ಲಿ ಬರೆದುಕೊಂಡು ತಮ್ಮ ಸಂಗ್ರಹದಲ್ಲಿ ಸೇರಿಸಲು ತಿಳಿಸುತ್ತಿದ್ದರು. ಇದು ಅವರ ಮೊದಲನೆಯ ಆಯ್ಕೆ, ಈ ಮೇರೆಗೆ ಆರಿಸಲಾದ ಪದಗಳನ್ನು ಅವರು ಆಗಾಗ ತಮ್ಮ ಧ್ಯಾನದ ಸಮಯದಲ್ಲಿ ಕೂಡ ಹೇಳಿಸಿಕೊಳ್ಳುತ್ತಿದ್ದರು. ಈ ಬಗೆಯಾಗಿ ಅವರ ಅಧ್ಯಯನವು-ಶ್ರವಣ ಮನನವು ಎಷ್ಟೋ ವರುಷ ನಡೆಯುತ್ತಿದ್ದಿತು. ಅದರ ಫಲವಾಗಿ ಅವರು ಆಯಾ ಪದಗಳ ತಿರುಳಿನೊಡನೆ ಸಮರಸರಾಗುತ್ತಿ- ದ್ದರು. ಶ್ರೀ ಗುರುದೇವರ ಪಾರಮಾರ್ಥಿಕ ಅನುಭವಗಳು ಕೂಡ ವಿಲಕ್ಷಣ ವಾಗಿದ್ದವು. ಅವು ಅನಂತವಿರುವವು ಎಂದು ಅವರೇ ಹೇಳಿರುವರು. ತಮ್ಮ “ಭಗವದ್ಗೀತೆಯ ಸಾಕ್ಷಾತ್ಕಾರ ದರ್ಶನ” ಎಂಬ ಉದ್ಧಂಥದಲ್ಲಿ ಅವರು ಇದನ್ನು ಕುರಿತು ಹೇಳಿರುವದೇನೆಂದರೆ : “ಸಾಕ್ಷಾತ್ಕಾರಕ್ಕೆ ಕೊನೆಯಿಲ್ಲ, ಪೂರ್ಣತೆಯಿಲ್ಲ. ನಾವು ಪರತತ್ತ್ವವನ್ನು ಸಮೀಪಿಸುತ್ತ ಸಾಗುವೆವು ಆದರೆ ಅದನ್ನು ಸಾಕ್ಷಾ ತಾಗಿ ಎಂದೂ ಸೇರುವದಿಲ್ಲ.” ಶ್ರೀ ಗುರುದೇವರ ಪಾರಮಾರ್ಥಿಕ ಅನುಭವಗಳ ಎತ್ತರವು ಅಲೌಕಿಕವಿದ್ದ ಮೂಲಕ ಅವರೆಡೆ ತಾವಾಗಿಯೇ ಬಂದ ಎಲ್ಲ ಪದಗಳ ರಹಸ್ಯವನ್ನು ಅವರು ಪೂರ್ತಿಯಾಗಿ ಅರಿಯಬಲ್ಲವರಾಗಿದ್ದರು. ಕನ್ನಡ ಪಂಡಿತರೂ ಅರಿಯಲರಿಯದ ಪದಗಳನ್ನು ಕೂಡ ಅವರು ತಿಳಿಯಾಗಿ ವಿವರಿಸುತ್ತಿದ್ದರು. ಪರಮಾತ್ಮನ ಬೆಳಕಿನಿಂದ ಹೊಳೆಯುವ ಅವರ ಪ್ರಜ್ಞೆಯು ಈ ಪದಗಳ ಅಜ್ಞಾತ ಸ್ಥಲಗಳ ಮೇಲೆಯೂ ವಿಪುಲವಾದ ಹೊಸ ಬೆಳಕನ್ನು ಬೀರಿ, ಆಯಾ ಅನುಭಾವಿಗಳ ಭಾವ-ಅನುಭಾವಗಳನ್ನು ಅವರು ತಿಳಿಯಾಗಿ ವಿಶದಗೊಳಿಸುತ್ತಿದ್ದರು ; ಆಧುನಿಕ ವಿಜ್ಞಾನಪ್ರಿಯ ಜನರು ಒಪ್ಪುವಂತೆ ಅವನ್ನು ಯುಕ್ತಿಯುಕ್ತವಾಗಿ ವಿವರಿಸುತ್ತಿದ್ದರು. ಈ ರೀತಿ ನಮ್ಮ ಹಿಂದಿನ ಹಿರಿಯ ಅನುಭಾವಿಗಳ ಪಾರಮಾರ್ಥಿಕ ಸಂದೇಶವನ್ನು ಇಂದಿನ ಪ್ರಪಂಚದಲ್ಲಿ ಆದುದರಿಂದ