ಈ ಪುಟವನ್ನು ಪರಿಶೀಲಿಸಲಾಗಿಲ್ಲ.

0 ಬೀರಲು, ಅವರಿಗೆ ಆಧುನಿಕ ಅನುಭಾವಿ ದಾರ್ಶನಿಕರೋರ್ವರು ಲಭಿಸಿದರೆನ್ನಲು ಅಡ್ಡಿಯಿಲ್ಲ. ಧರ್ಮಪರಮಾರ್ಥಗಳನ್ನು ಕಾಣುವ ಶ್ರೀ ಗುರುದೇವರ ದೃಷ್ಟಿಯು ಈ ಬಗೆಯದಿತ್ತು. “ದರ್ಶನದ ಅಧ್ಯಯನದಲ್ಲಿ ನಲವತ್ತು ವರುಷ ಕಳೆದವನಾದ ನಾನು ಧರ್ಮ-ಧರ್ಮಗಳಲ್ಲಾಗಲಿ ಧರ್ಮದ ವಿವಿಧ ಶಾಖೆಗಳಲ್ಲಾಗಲಿ ಯಾವ ಬಗೆಯ ಭಿನ್ನತೆಯೂ ಇರುವದಿಲ್ಲ ಎಂಬುದನ್ನು ಚೆನ್ನಾಗಿ ಬಲ್ಲೆ. ಆದರೆ ಅವು ಭಗವಂತನನ್ನು ಮಾತ್ರ ಭಜಿಸಬೇಕು.” “ಈ ಎಲ್ಲಾ ಧರ್ಮಗಳ ಅಂತ ರಂಗವನ್ನು ಸೇರಿ, ಅವುಗಳ ಸಮಾನ ಅಂಶವನ್ನು ಕಂಡುಹಿಡಿಯುವದು, ದಾರ್ಶನಿಕನ ಕರ್ತವ್ಯ.” “ದಾರ್ಶನಿಕನು ಪಾರಮಾರ್ಥಿಕ ಅನುಭವವನ್ನು ವಿವ ರಿಸುವಾಗ, ಅವನು ಹಿಂದು, ಮುಸ್ಲಿಮ ಇಲ್ಲವೇ ಕ್ರಿಶ್ಚಿಯನ್ ಯಾವ ಧರ್ಮ ದವನೂ ಇರುವದಿಲ್ಲ. ಅವನು ಪ್ರಪಂಚದ ನಾಗರಿಕನು, ವಿಶೇಷವಾಗಿ ಪಾರ- ಮಾರ್ಥಿಕ ಪ್ರಪಂಚದ ನಾಗರಿಕನಿರುವನು.” ಈ ಗ್ರಂಥದ ಸಿದ್ಧತೆಯು ನಡೆದಾಗ ಶ್ರೀ ಗುರುದೇವರು ಕರ್ನಾಟಕ ವಿಶ್ವವಿದ್ಯಾಲಯದ ಆಶ್ರಯದಲ್ಲಿ ಕನ್ನಡ ಸಂತರ ಅನುಭಾವವನ್ನು ಕುರಿತು ಎರಡು ಉಪನ್ಯಾಸಗಳನ್ನು ಕೊಟ್ಟರು. ಮೊದಲನೆಯದು ಕ್ರಿ.ಶ. ೧೯೫೦ ಅಗಸ್ಟ್ ೨೬ನೆಯ ದಿನ ಧಾರವಾಡದಲ್ಲಿಯೂ, ಎರಡನೆಯದು ಕ್ರಿ.ಶ. ೧೯೫೧ ನವಂಬರ ೨೫ನೆಯ ದಿನ ಬೆಳಗಾವಿಯಲ್ಲಿಯೂ ಕೊಡಲಾಯಿತು. ಮೊದಲ- ನೆಯ ಉಪನ್ಯಾಸದ ವಿಷಯವು “ಕನ್ನಡಿಗರ ಅನುಭಾವದ ಪೀಠಿಕೆ” ಎಂಬು ದಾಗಿಯೂ ಎರಡನೆಯದರ ವಿಷಯವು “ಕನ್ನಡಿಗರ ಅನುಭಾವದ ಸಾರ ಸಂಗ್ರಹ" ಎಂಬುದಾಗಿಯೂ ಇದ್ದಿತು. ಎರಡೂ ಉಪನ್ಯಾಸಗಳು ಜನತೆಯ ಮನ್ನಣೆಯನ್ನು ಪಡೆದವು. ಅದನ್ನು ಕಂಡ, ಕರ್ನಾಟಕ ವಿಶ್ವವಿದ್ಯಾಲಯದ ಉಪಕುಲಗುರುಗಳು ಈ ವಿಷಯವನ್ನು ಕುರಿತು ಒಂದು ಉಪನ್ಯಾಸಮಾಲೆ ಯನ್ನೇ ಕ್ರಮಶಃ ರಚಿಸಲು ಶ್ರೀ ಗುರುದೇವರನ್ನು ಆಮಂತ್ರಿಸಿದರು. ಅದೇ ಮೇರೆಗೆ, ಆ ಉಪನ್ಯಾಸಗಳನ್ನು ಏರ್ಪಡಿಸಲೂ ಅವನ್ನು ಗ್ರಂಥರೂಪದಲ್ಲಿ ಪ್ರಸಿದ್ಧಿ ಸಲ ವಿಶ್ವವಿದ್ಯಾಲಯದವರು ಒಪ್ಪಿಕೊಂಡರು. ಆ ಮೇರೆಗೆ ಶ್ರೀ ಗುರುದೇವರು ಒಟ್ಟಾರೆ ೨೦ ಉಪನ್ಯಾಸಗಳನ್ನು ಕೊಡುವದು ಗೊತ್ತಾಯಿತು. ಆದರೆ ಶ್ರೀ ಗುರುದೇವರು ಅವುಗಳಲ್ಲಿ ೧೪ ಉಪನ್ಯಾಸಗಳನ್ನು ಕೊಡುವದು ಸಾಧ್ಯವಾಯಿತು. ಈ ಉಪನ್ಯಾಸಗಳನ್ನು ಅವರ ಸ್ವಂತ ಧ್ವನಿ ಸಂಗ್ರಹದ ಪಟ್ಟಿಯ ಮೇಲೆ (Tape recorder) ಕ್ರಮಶಃ ಬರೆದಿಡಲಾಯಿತು. ಮತ್ತು ತರುವಾಯ ಅವರ ಲಘು ಲೇಖಕನಿಂದ ಅವನ್ನು ಟೈಪ್ ಮಾಡಲಾಯಿತು. ಅವರು ಉಳಿದ ೬ ಉಪನ್ಯಾಸಗಳನ್ನು ೩ ಧಾರವಾಡದಲ್ಲಿಯೂ ೩ ಬೆಂಗಳೂ- ರಿನಲ್ಲಿಯೂ ಕೊಡುವವರಿದ್ದರು. ಆದರೆ ಭಗವಂತನ ಬಯಕೆಯು ಬೇರೆಯಾ