ಕನ್ನಡ ಪರಮಾರ್ಥ ಸೋಪಾನ 98 ತನ್ನ ಸದ್ದು ರುವಿನ ಕೈಯಲ್ಲಿಯ ಕೊಳಲಿನಂತಿರುವ ನಂಬಿಗೆಯ ಮೂರುತಿಯೆ ಆದರ್ಶ ಶಿಷ್ಯನು ( ರಾಗ-ಮುರ್ಗಾ, ತಾ-ದೀಪಚಂದಿ) ಕರ್ಪುರಾರತಿಯನ್ನು ಬೆಳಗುವೆನು | ಜಿಗಜಿನ್ನಿ- ಜೇಯಗೆ ಕರ್ಪುರಾರತಿಯನ್ನು ಬೆಳಗುವೆ | ನಿರ್ಮಲಾಂತಃಕರಣ- ಯತಿಗೆ || ನಿರ್ಮಮತ್ವದ ಮಾನ್ಯ ಮೂರ್ತಿಗೆ | ನಿರ್ಗುಣನ ನಿರ್ಬಯಲ ಕೀರ್ತಿಗೆ ನಂಬಿಗೆಯು ಅಂಬರದಿ ಬಂದಿಹುದೋ | ಉದ್ದಾರ ಕಾರ್ಯಕೆ | ತಪವೆ ತೊಳಗುತ ಜಗದೊಳಿಳಿದಿಹುದೊ || ತನ್ನ ಹಿರಿತನವನ್ನು ಅರಿಯದೆ | ಧನ್ಯಗುರುವಿನ ಮಹಿಮೆ ಸಾರುವ || ಚಿನ್ಮಯನ ಚಿನ್ನಾದ ಬೀರುವ | ದೇವರಾಯನ ದಿವ್ಯಕೊಳಲಿಗೆ || ಅ.ಪ. || ಕರ್ಪುರವು ತಾನುರಿಯ ಸೇರುತಲಿ | ಅದು ಉರಿಯುತುರಿಯುತ | ಉರಿಯೊಳಗೆ ಅಳಿದುಳಿಯುವಂದದಲಿ || ಗುರುವಿನಲ್ಲಿಯೆ ತಾನು ಬೆರೆಯುವ | ಅವರ ಹಿರಿತನದಲ್ಲಿ ಮೆರೆಯುವ || ಹಿರಿಯ ಆನಂದವನು ಕರೆಯುವ | ಭಾವೂರಾಯರ ಭವ್ಯ ಬೆಳಕಿಗೆ ಸದ್ಗುರುವಿನ ಪಾದಪೂಜೆಯ ಮಾಡಿ ಮುಕ್ತನಾದೆ ( ರಾಗ-ಪುರಿಯಾ ಧನಾಶ್ರೀ, ತಾಲ- ದೀಪಚಂದಿ) ಪಾದಪೂಜೆಯ ಮಾಡಿ ಮುಕ್ಕಾದೆ | ಗುರು ಲಿಂಗ ಜಂಗಮ | ಪಾದಪೂಜೆಯ ಮಾಡಿ ಮುಕ್ತಾದೆ ಪಾದಪೂಜೆಯ ಮಾಡಿ ಮುಕ್ತ- 1 ನಾಗಿ ದಶವಿಧ ನಾದಘೋಷದಿ || ವಾದ ಭೇದವನಳಿದು ಚಿಪ್ಪನ | ಬೋಧ ಮಂಟಪದಲ್ಲಿ ಕುಳಿತು || ಅ.ಪ. ||
ಪುಟ:ಕನ್ನಡ ಪರಮಾರ್ಥ ಸೋಪಾನ.pdf/೫೦
ಈ ಪುಟವನ್ನು ಪರಿಶೀಲಿಸಲಾಗಿಲ್ಲ.