ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ್ರಕರಣ ಹನ್ನೊಂದು ಪರಮಾತ್ಮನ ಸ್ವರೂಪ

ಸಮಗ್ರ ಆಧ್ಯಾತ್ಮ ಜೀವನದ ಸಂಕ್ಷೇಪರೂಪ (ರಾಗ-ಕಾಂಬೋದಿ, ತಾಲ, ತಂಪೆತಾಲ)

ಅಂತರಂಗದ ಕದವು ತೆರೆಯಿತಿಂದು | ಇಂತು ಪುಣ್ಯದ ಫಲದ ಪ್ರಾಪ್ತಿಯಾಯಿತು ಎನಗೆ

ಏಸು ದಿನವಾಯಿತೊ ಬೀಗ ಮುದ್ರೆಯ ಮಾಡಿ | ವಾಸವಾಗಿದ್ದರೆ ದುರುಳರಲ್ಲಿ ||

ಮೋಸವಾಯಿತು ಇಂತು ಬರಿದೆ ಇಂದಿನ ತನಕ | ಸೂಸಿರ್ದ ತಮಸಿನಿಂ ಕಾಣುತಿದ್ದಿಲ್ಲ

ಹರಿಕರುಣವೆಂಬುವ ಕೀಲಿಕೈ ದೊರೆಯಿತು | ಗುರುಕರುಣವೆಂಬಂಥ ಶಕ್ತಿಯಿಂದ ||

ವರಭಾಗವತರ ಸಹವಾಸವನು ನಾ ಮಾಡಿ | ಹರಿಭಜನೆಯಿಂದಲೀ ಬೀಗವನ್ನು ತೆಗೆದೆ

ಸುತ್ತಲಿದ್ದವರೆಲ್ಲ ಎತ್ತಲೋ ಓಡಿದರು | ತತ್ವಚಿಂತನೆಯೆಂಬ ದೀಪವನ್ನು |

ಒತ್ತಾಗಿ ಹಿಡಕೊಂಡು ದ್ವಾರವನು ಪೋಗಲು | ಎತ್ತ ನೋಡಿದರು ಶೃಂಗಾರ ಸದನ

ಹೊರಗೆ ದ್ವಾರವು ನಾಲ್ಕು ಒಳಗೈದು ದ್ವಾರಗಳು | ಒಳದಾರಿಯಲ್ಲಿ ಪ್ರಾಣಾದಿ ಪ್ರಿಯರು ||

ಮಿರುಗುವ ಮಧ್ಯಮಂಟಪದಿ ಕೋಟ ರವಿಯಂಥ ಸರಸಿಜಾಸನ ಬತನ ಅರಮನೆಯ ಸೊಬಗು

ಮೂರ್ತಿಗಣಮಧ್ಯ ಸಚ್ಚಿದಾನಂದೈಕ್ಯ | ರಮೆಯೊಡೆಯ ನಗೆಮೊಗದಿ ಮಿನುಗುತಿರುವ ||

ಕಮಲಜಾದಿಗಳಿಂದ ಸ್ತುತಿಸಿಕೊಳುತಿಹ ಹೃದಯ ಕಮಲದೊಳಗಿಹ ವಿಜಯವಿಠಲನನು ಕಂಡೆ