ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕನ್ನಡ ಪರಮಾರ್ಥ ಸೋಪಾನ

ಪರಮಾತ್ಮನ ಸಗುಣರೂಪದ ವರ್ಣನೆ ( ರಾಗ, ದೇಸ, ತಾಲ-ಕೇರವಾ )

ಕೃಷ್ಣಮೂರ್ತಿ ಕಣ್ಣ ಮುಂದೆ ನಿಂತಿದಂತಿದೆ

ಮಸ್ತಕದಲ್ಲಿ ಮಾಣಿಕದ ಕಿರೀಟ | ಕಸ್ತುರಿ ತಿಲಕದಿಂದೆಸೆವ ಲಲಾಟ ||

ಹಸ್ತದಿ ಕೊಳಲನೂದುವ ಓರೆನೋಟ | ಕೌಸ್ತುಭ ಎಡಬಲದಲಿ ಓಡ್ಯಾಟ

ಮಘಮಘಿಸುವ ಸೊಬಗಿನ ಸುಳೆಗುರುಳು | ಚಿಗರು ತುಲಸಿವನಮಾಲೆಯ ಕೊರಳು ||

ಬಗೆಬಗೆ ಹೊನ್ನುಂಗುರವಿಟ್ಟಿ ಬೆರಳು | ಸೊಬಗಿನ ನಾಭಿಯ ತಾವರೆಯರಳು

ಉಡುದಾರ ಒಡ್ಯಾಣ ನಿಖಿಲಾಭರಣಾ | ಬೆಡಗು ಪೀತಾಂಬರ ರವಿಶತಕಿರಣ ||

ಕಡಗ ಪೀತಾಂಬರ ಗೆಜ್ಜೆಗಳನ್ನಿಟ್ಟ ಚರಣ | ಒಡೆಯ ಶ್ರೀ ಪುರಂದರವಿಠಲನ ಕರುಣಾ

ಕನಸಿನ ದರ್ಶನ ( ರಾಗ-ಶಂಕರಾಭರಣ, ತಾಲ-ಅಟತಾಲ )

ಕಂಡೆನಾ ಕನಸಿನಲಿ ಗೋವಿಂದನ

ಕಂಡೆನಾ ಕನಸಿನಲಿ ಕನಕರತ್ನದ ಮಣಿಯ ನಂದನ ಕಂದ ಮುಕುಂದನ ಚರಣವ

ಅಂದುಗೆ ಕಿರುಗೆಜ್ಜೆ ಘಲಿರೆಂಬ ವಾದ್ಯದಿ | ಬಂದು ಕಾಳಿಂಗನ ಹೆಡೆಯನೇರಿ ||

ಥಿಂ ಧಿಮಿ ಧಿಮಿಕೆಂದು ತಾಳಗತಿಗಳಿಂದಾ | ನಂದದಿ ಕುಣಿವ ಮುಕುಂದನ ಚರಣವ

ಉಟ್ಟ ಪೀತಾಂಬರ ಉಡಿಯ ಕಾಂಚಿಯ ದಾಮ | ತೊಟ್ಟಿ ಮುತ್ತಿನ ಹಾರ ಕೌಸ್ತುಭವು ||

ಕಟ್ಟಿದ ವೈಜಯಂತೀ ತುಳಸಿ ಮಾಲೆ | ಇಟ್ಟ ದ್ವಾದಶನಾಮ ನಿಗಮಗೋಚರನ